ಶಾಸಕಾಂಗ ಸಭೆ ಕರೆದು ಚರ್ಚಿಸಿ ಎಂದಿದ್ದರಲ್ಲಿ ತಪ್ಪೇನಿಲ್ಲ : ರಾಯರಡ್ಡಿ
ನನ್ನ ಪ್ರಕಾರ ಸಿದ್ದು ಐದು ವರ್ಷ ಸಿಎಂ; ಗ್ಯಾರಂಟಿ ಯೋಜನೆಗೆ ನನ್ನ ವೇತನ ಕೊಡುವೆ
Team Udayavani, Jul 25, 2023, 9:24 PM IST
ಕೊಪ್ಪಳ: ಸಿಎಂಗೆ ಶಾಸಕರು ಪತ್ರ ಬರೆದು ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚಿಸಿ ಎಂದಿರುವ ವಿಚಾರ ತಪ್ಪೇನಲ್ಲ. ಇದೇನು ಸರ್ಕಾರದ ವಿರುದ್ದವೂ ಅಲ್ಲ, ಅಭಿವೃದ್ಧಿ ವಿಚಾರಕ್ಕೆ ಪತ್ರ ಬರೆದಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಅವರು ಹೇಳಿದ್ದಾರೆ.
ಜಿಲ್ಲೆಯ ಭಾನಾಪೂರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂಗೆ ನಾನು ಪತ್ರ ಬರೆದಿಲ್ಲ. ಕಲಬುರಗಿ ಶಾಸಕರು ಪತ್ರ ಬರೆದಿದ್ದು ನಾನು ಸಹಿ ಮಾಡಿದ್ದೇನೆ. ಪತ್ರ ಬರೆದು ಚರ್ಚೆ ಮಾಡಿ ಎಂದಿದ್ದರಲ್ಲಿ ತಪ್ಪಿಲ್ಲ ಎನಿಸುತ್ತದೆ. ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ಅವರೊಂದಿಗೆ ಚರ್ಚೆ ಮಾಡಿದರೆ ತಪ್ಪೇನಿಲ್ಲ. ಇದೆಲ್ಲವು ಪಕ್ಷದಲ್ಲಿ ಚರ್ಚೆಯಾಗುತ್ತದೆ. ಯಾರೂ ಸಚಿವರ ಬಗ್ಗೆ, ಶಾಸಕರ ಬಗ್ಗೆ ಬರೆದಿಲ್ಲ. ನಮ್ಮ ವಿಚಾರಗಳ ಕುರಿತು ಚರ್ಚೆ ಮಾಡಬೇಕು ಎಂದಿದ್ದಾರೆ. ನನಗೆ ಯಾರೊಂದಿಗೂ ಯಾವುದೇ ಸಮಸ್ಯೆಯಿಲ್ಲ ಎಂದರು.
ಕುಮಾರಸ್ವಾಮಿ ಅವರು ಸಿಂಗಾಪುರದಲ್ಲಿ ಕಾರ್ಯಾಚರಣೆ ಮಾಡುತ್ತಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ನಾನು ಆ ಕಾರ್ಯಾಚರಣೆಯಲ್ಲಿ ಭಾಗಿಯಾಗಿಲ್ಲ. ಆಗುವುದೂ ಇಲ್ಲ. ಅಂತ ಆಲೋಚನೆಯು ನನಗಿಲ್ಲ. ಡಿಕೆಶಿ ಅವರು ಡಿಸಿಎಂ ಆಗಿದ್ದಾರೆ. ಅವರಿಗೆ ಇಂಟಲಿಜೆನ್ಸಿ ಮಾಹಿತಿ ಇರಬಹುದು. ಆ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು ಅಂತಹ ಕೆಳಮಟ್ಟಕ್ಕೆ ಇಳಿಯಲ್ಲ ಎಂದರು.
ಸಿಎಂ ಬದಲಾವಣೆಯ ವಿಚಾರ, ಅಂತಹ ಒಪ್ಪಂದಕ್ಕೆ ನಾನೇನು ಸಾಕ್ಷಿ ಹಾಕಿಲ್ಲ. ಸಿಎಂ ಅವರು ಒಪ್ಪಂದದಲ್ಲಿದ್ದಾರೋ ? ಇಲ್ಲವೋ ? ನನಗೇನು ಗೊತ್ತು ? ಒಂದು ಬಾರಿ ಓಟ್ ತೆಗೆದುಕೊಂಡಿದ್ದು ಐದು ವರ್ಷ ಇರುತ್ತಾರೆ. ಒಂದು ವೇಳೆ ಅವರು ರಾಜಿನಾಮೆ ಕೊಟ್ಟರೆ, ಪಕ್ಷ ತೀರ್ಮಾನ ಕೈಗೊಂಡರೆ ನಾನೇನು ಮಾಡಲಿ. ನನಗಿರುವ ಮಾಹಿತಿ ಪ್ರಕಾರ, ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷವೂ ಮುಖ್ಯಮಂತ್ರಿಯಾಗಿರಲಿದ್ದಾರೆ. ನಮ್ಮಲ್ಲಿ ಯಾರೂ ಬೇರೇ ಪಕ್ಷಕ್ಕೆ ಹೋಗುತ್ತಿಲ್ಲ. ನಾನಂತೂ ಹೋಗಲ್ಲ ಎಂದರಲ್ಲದೇ ಗ್ಯಾರಂಟಿ ಯೋಜನೆಗಳಿಗೆ ನಾನು ನನ್ನ ಶಾಸಕರ ವೇತನವನ್ನು ನೀಡುತ್ತೇನೆ. ಈಗಾಗಲೇ ಸ್ಪೀಕರ್, ಸಿಎಂ ಹಾಗೂ ಡಿಕೆಶಿಗೂ ಹೇಳಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.