+92 ಸಂಖ್ಯೆ ಬಗ್ಗೆ ಇರಲಿ ಎಚ್ಚರ! – ವಾಟ್ಸ್‌ಆ್ಯಪ್ ಕರೆ ಮೂಲಕ ಉಚಿತ ಉಡುಗೊರೆಗಳ ಆಮಿಷ
- ನಂಬಿದ್ರೆ ಲಕ್ಷಾಂತರ ರೂ. ಪಂಗನಾಮ ಖಚಿತ: ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?
Team Udayavani, Jul 26, 2023, 7:19 AM IST
ದಿನೇ ದಿನೆ ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಈಗ ಐಫೋನ್ ಸೇರಿದಂತೆ ಬೆಲೆಬಾಳುವ ಉಚಿತ ಉಡುಗೊರೆಗಳ ಆಮಿಷವೊಡ್ಡಿ ಜನರಿಂದ ಹಣವನ್ನು ದೋಚುವ ಜಾಲವೊಂದು ಕೆಲಸ ಮಾಡುತ್ತಿದೆ. ನೀವು ಈ ವಂಚಕರ ಬಲೆಗೆ ಬೀಳಬಾರದು ಎಂದರೆ, +92 ಎಂಬ ಕೋಡ್‌ನಿಂದ ಬರುವ ಕರೆಯಿಂದ ದೂರವಿರಿ…
“ಬಡೇ ಭಾಯಿ” ಹಗರಣ
ಮೊದಲು ನಿಮ್ಮ ವಾಟ್ಸ್‌ಆ್ಯಪ್‌ಗೆ +92 ಕಂಟ್ರಿ ಕೋಡ್‌ನಿಂದ ಕರೆ ಬರುತ್ತದೆ. “ನೀವು ದುಬೈನ ಬಡೇ ಭಾಯಿ ಮತ್ತು ಛೋಟೆ ಭಾಯಿಯಿಂದ 70,000 ಮೌಲ್ಯದ ಉಚಿತ ಐಫೋನ್ 14 ಗೆದ್ದಿದ್ದೀರಿ. ಕೇವಲ 3 ಸಾವಿರ ರೂ. ಶುಲ್ಕವನ್ನು ಯುಪಿಐ ಮೂಲಕ ಪಾವತಿಸಿದರೆ ಸಾಕು’ ಎಂಬ ಸಂದೇಶ ಬರುತ್ತದೆ. ಅದನ್ನು ನಂಬಿ ಹಣ ಪಾವತಿಸಿದರೆ, ಮಾರನೇ ದಿನ ನಿಮಗೆ ಕರೆ ಮಾಡುವ ವಂಚಕರು, “ಐಫೋನ್ ಡೆಲಿವರಿಗೆ ರೆಡಿಯಾಗಿದೆ. ಏರ್‌ಪೋರ್ಟ್‌ಗೆ ತಲುಪಿದೆ. ಡೆಲಿವರಿ ಮೊತ್ತವೆಂದು 8 ಸಾವಿರ ರೂ. ಪಾವತಿಸಿ’ ಎನ್ನುತ್ತಾರೆ. ನಿಮಗೆ ಯಾವ ಉಡುಗೊರೆಯೂ ಬಂದಿರುವುದಿಲ್ಲ. ಆದರೆ, ನಿಮ್ಮ ಬ್ಯಾಂಕ್ ಖಾತೆಯಿಂದ ನಿಮಗೆ ಗೊತ್ತಿಲ್ಲದೇ ಲಕ್ಷಾಂತರ ರೂ.ಗಳು ನಾಪತ್ತೆಯಾಗಿರುತ್ತದೆ.
ಪಾಕಿಸ್ತಾನದ ಸಂಖ್ಯೆ
+92 ಎಂಬುದು ಪಾಕಿಸ್ತಾನದ ಕೋಡ್ ಆಗಿದೆ. ಆದರೆ, ನಿಮಗೆ ಕರೆ ಬರುವುದು ಪಾಕಿಸ್ತಾನದಿಂದಲ್ಲ. ವರ್ಚುವಲ್ ಸಂಖ್ಯೆ ಬಳಸಿ ವಂಚಕರು ಕರೆ ಮಾಡಿ ಹಣ ಪೀಕುತ್ತಾರೆ. ವರ್ಚುವಲ್ ಫೋನ್ ನಂಬರ್‌ಗಳ ಸೃಷ್ಟಿಯು ಕಾನೂನುಬಾಹಿರವಲ್ಲ. ಆದರೆ, ಆನ್‌ಲೈನ್ ವಂಚಕರು ಈ ವರ್ಚುವಲ್ ದೂರವಾಣಿ ಸಂಖ್ಯೆಗಳನ್ನು ದುರ್ಬಳಕೆ ಮಾಡಿಕೊಂಡು ವಂಚನೆಗೆ ಬಳಸುತ್ತಿರುವುದು ಕಂಡುಬಂದಿದೆ.
ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?
– ಫೋನ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸಿ.
– ಕರೆ ಮಾಡಿದ ವ್ಯಕ್ತಿಯ ಗುರುತನ್ನು ಸ್ವತಂತ್ರವಾಗಿ ದೃಢಪಡಿಸಿಕೊಳ್ಳಿ. ಯಾವುದಾದರೂ ಕಂಪನಿ, ಸಂಸ್ಥೆಯಿಂದ ಕರೆ ಮಾಡುತ್ತಿರುವುದಾಗಿ ಅವರು ಹೇಳಿದರೆ, ಆ ಸಂಸ್ಥೆಯ ಅಧಿಕೃತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.
– ಅನುಮಾನಾಸ್ಪದ ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದಿರಿ. ಅಂಥ ಸಂಖ್ಯೆಗಳನ್ನು ಕೂಡಲೇ ಬ್ಲಾಕ್ ಮಾಡಿ ಅಥವಾ ರಿಪೋರ್ಟ್ ಮಾಡಿ.
– ರಾಷ್ಟ್ರೀಯ “ಡು ನಾಟ್ ಕಾಲ್” ರಿಜಿಸ್ಟ್ರಿಯಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳುವ ಮೂಲಕ, ಅನಪೇಕ್ಷಿತ ಕರೆಗಳಿಂದ ದೂರವಿರಿ.
– ಕಾಲರ್ ಐಡಿ ಆ್ಯಪ್‌ಗಳು ಅಥವಾ ಟ್ರೂಕಾಲರ್‌ನಂಥ ಸೇವೆಗಳನ್ನು ಬಳಸಿಕೊಂಡು ಸಂಭಾವ್ಯ ಸ್ಕ್ಯಾಮ್ ಕರೆಗಳನ್ನು ಗುರುತಿಸಿ ಮತ್ತು ಬ್ಲಾಕ್ ಮಾಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
MUST WATCH
ಹೊಸ ಸೇರ್ಪಡೆ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.