“ವಾಪಸ್ ಮಾಡಲ್ಲವಾದರೆ’ ಮಾತ್ರ ಪ್ರಶಸ್ತಿ ಪಡೆಯಿರಿ!
"ಪ್ರಶಸ್ತಿ ವಾಪ್ಸಿ' ಪ್ರತಿಭಟನೆಗೆ ಕಡಿವಾಣ ಹಾಕಲು ಈ ಕ್ರಮ
Team Udayavani, Jul 26, 2023, 5:30 AM IST
ಹೊಸದಿಲ್ಲಿ: ಇನ್ನು ಮುಂದೆ ಸರಕಾರದಿಂದ ಯಾವುದೇ ಪ್ರಶಸ್ತಿಯನ್ನು ಪಡೆಯುವವರು “ಯಾವ ಕಾರಣಕ್ಕೂ ಪ್ರಶಸ್ತಿ ವಾಪಸ್ ಮಾಡುವುದಿಲ್ಲ’ ಎಂದು ಬರೆದಿರುವ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ಅನಂತರವೇ ಪ್ರಶಸ್ತಿಯನ್ನು ಪಡೆದು ಕೊಳ್ಳಬೇಕು! ಇದು ಸಾರಿಗೆ, ಪ್ರವಾಸೋದ್ಯಮ ಮ ತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸದೀ ಯ ಸ್ಥಾಯೀ ಸಮಿತಿ ನೀಡಿರುವ ಸಲ ಹೆ. ಮಂಗಳವಾರ ಸಂಸತ್‌ನ ಎರಡೂ ಸದನಗಳಿಗೆ ಸಲ್ಲಿಸಲಾದ ವರದಿಯಲ್ಲಿ ಸಮಿತಿ ಈ ರೀತಿ ಶಿಫಾರಸು ಮಾಡಿದೆ.
ಇತ್ತೀಚಿನ ಕೆಲವು ವರ್ಷಗಳಿಂದೀಚೆಗೆ “ಪ್ರಶಸ್ತಿ ವಾಪ್ಸಿ’ ಅಭಿಯಾನಗಳು ಹೆಚ್ಚಾಗುತ್ತಿರುವ ಕುರಿತು ಸಮಿತಿಯು ಕಳವಳ ವ್ಯಕ್ತಪಡಿಸಿದೆ. ಜತೆಗೆ ರಾಜಕೀಯ ಕಾರಣಗಳಿಗಾಗಿ ಪ್ರಶಸ್ತಿಗಳನ್ನು ಮರಳಿಸುವಂಥ ಟ್ರೆಂಡ್ ಅನ್ನು ತಗ್ಗಿಸುವ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ಸಮಿತಿ ನೀಡಿದೆ. ಅದರಂತೆ “ಇನ್ನು ಮುಂದೆ ಸರಕಾರದ ಪ್ರಶಸ್ತಿಯನ್ನು ಯಾರಿಗಾದರೂ ನೀಡುವುದಿದ್ದರೆ ಮೊದಲು ಅವರಿಂದ “ಭವಿಷ್ಯದಲ್ಲಿ ಪ್ರಶಸ್ತಿ ವಾಪಸ್ ಮಾಡುವುದಿಲ್ಲ’ ಎಂಬ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಬೇಕು. ಒಂದು ವೇಳೆ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ಬಳಿಕವೂ ಪ್ರಶಸ್ತಿಯನ್ನು ಅವರು ಮರಳಿಸಿದ್ದೇ ಆದಲ್ಲಿ ಅಂಥವರನ್ನು ಮುಂದೆ ಯಾವತ್ತೂ ಪ್ರಶಸ್ತಿಗಳಿಗೆ ಪರಿಗಣಿಸಬಾರದು. ಸಾಹಿತ್ಯ ಅಕಾಡೆಮಿ ಸಹಿತ ಕೆಲವು ರಾಜಕೀಯೇತರ ಸಂಸ್ಥೆಗಳಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ’ ಎಂದು ವೈಎಸ್ಸಾರ್ ಕಾಂಗ್ರೆಸ್ ಪ ಕ್ಷದ ವಿಜಯ್ ಸಾಯಿ ರೆಡ್ಡಿ ನೇತೃತ್ವದ ಸಮಿತಿ ಹೇಳಿದೆ.
2015ರಲ್ಲಿ ಕರ್ನಾಟಕದ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಉದಯ ಪ್ರಕಾಶ್, ನಯನತಾರಾ ಸೆಹಗಲ್, ಅಶೋಕ್ ವಾಜಪೇಯಿ ಸಹಿತ 33 ಖ್ಯಾತನಾಮರು ತಮ್ಮ ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದರು. ಅಲ್ಲಿಂದ ಅನಂತರ, “ಅವಾರ್ಡ್ ವಾಪ್ಸಿ’ ಎನ್ನುವುದು ಪ್ರತಿಭಟನೆಯ ಅಸ್ತ್ರವಾಗಿ ಬದಲಾಯಿತು. ಬೇರೆ ಬೇರೆ ಘಟನೆಗಳು ನಡೆದಾಗ ಪ್ರತಿಭಟನಾರ್ಥವಾಗಿ ಪ್ರಶಸ್ತಿ ವಾಪಸ್ ಮಾಡುವಂಥದ್ದು ಮರುಕಳಿಸುತ್ತಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.