ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಯ ದುರವಸ್ಥೆ; ರಸ್ತೆ ಗುಂಡಿ ಸರಿಪಡಿಸುವಂತೆ ನಾಗರಿಕರ ಆಗ್ರಹ


Team Udayavani, Jul 26, 2023, 9:38 AM IST

tdy-3

ಶಿರ್ವ: ಲೋಕೋಪಯೋಗಿ ಇಲಾಖೆಯ ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಯ ಬಂಟಕಲ್ಲು ತಾಂತ್ರಿಕ ಕಾಲೇಜಿನ ಬಳಿ ಮತ್ತು ಶಿರ್ವ ಗ್ರಾ.ಪಂ. ವ್ಯಾಪ್ತಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಸಮೀಪದ ಜೋಡು ಪೆಜತ್ತಕಟ್ಟೆಯ ಕಾಂಕ್ರೀಟ್‌ ರಸ್ತೆ ಬಳಿ ಮುಖ್ಯ ರಸ್ತೆ ಹಾಳಾಗಿ ಹೊಂಡ ಬಿದ್ದು ನೀರು ತುಂಬಿ ಮಳೆ ಬರುವಾಗ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಜೋಡು ಪೆಜತ್ತಕಟ್ಟೆಯ ಬಳಿ ಕಾಂಕ್ರೀಟ್‌ ರಸ್ತೆ ಹೊಸದಾಗಿ ನಿರ್ಮಾಣಗೊಂಡಿದ್ದು,ಅದರ ಬಳಿ ಚರಂಡಿ ಸಮರ್ಪಕವಿಲ್ಲದೆ ಮಳೆ ನೀರು ಡಾಮಾರು ರಸ್ತೆಯಲ್ಲಿಯೇ ಹರಿದು ಡೊಡ್ಡ ಗುಂಡಿಗಳಾಗಿವೆ. ರಾತ್ರಿವೇಳೆ ಮಳೆ ಬಂದಾಗ ದ್ವಿಚಕ್ರ ವಾಹನ ಸವಾರರಿಗೆ ಗುಂಡಿಯ ಅರಿವಾಗದೆ ಅಪಘಾತ ಸಂಭವಿಸುತ್ತಿರುತ್ತದೆ. ಮುಖ್ಯರಸ್ತೆ ಯಾಗಿರುವುದರಿಂದ ವೇಗವಾಗಿ ಚಲಿಸುವ ವಾಹನ ಸವಾರರು ರಸ್ತೆಗುಂಡಿಗಳಿಂದಾಗಿ ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆ ಹೆಚ್ಚಿದೆ. ಘನ ವಾಹನಗಳು ಎದುರಾದಾಗ ಗುಂಡಿ ತಪ್ಪಿಸುವ ಭರದಲ್ಲಿ ಹೆಚ್ಚಿನ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜೋಡು ಪೆಜತ್ತಕಟ್ಟೆಯ ಕಾಂಕ್ರೀಟ್‌ ರಸ್ತೆಯ ಬಳಿ ಗುತ್ತಿಗೆದಾರರು ಗುಂಡಿಗಳಿಗೆ ಜಲ್ಲಿ ಹಾಕಿದ್ದರೂ ಮಳೆಗೆ ಕೊಚ್ಚಿ ಹೋಗಿದೆ. ಕೆಲ ಸಂಘಟನೆಗಳ ಕಾರ್ಯಕರ್ತರು ಬಂಟಕಲ್ಲು ತಾಂತ್ರಿಕ ಕಾಲೇಜಿನ ಬಳಿಯ ರಸ್ತೆಯ ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕವಾಗಿ ಸರಿಪಡಿಸಿದ್ದರೂ,ಸುರಿಯುತ್ತಿರುವ ಭಾರೀ ಮಳೆಗೆ ಮತ್ತೆ ಗುಂಡಿ ಬಿದ್ದು ಹಾಳಾಗಿದೆ. ಘನವಾಹನಗಳು ಚಲಿಸುವಾಗ ಪಾದಚಾರಿಗಳು ಮತ್ತು ದ್ವಿಚಕ್ರವಾಹನ ಸವಾರರ ಮೇಲೆ ಹೊಂಡದಲ್ಲಿ ತುಂಬಿದ ಕೆಸರು ನೀರಿನ ಸಿಂಚನವಾಗುತ್ತಿದೆ.

ದಿನವೊಂದಕ್ಕೆ ರಸ್ತೆಯಲ್ಲಿ ಸಾವಿರಾರು ವಾಹನಗಳು,ವಿದ್ಯಾರ್ಥಿಗಳು ಸಂಚರಿಸುತ್ತಿದ್ದು ,ರಸ್ತೆಗುಂಡಿಗಳಿಂದ ವಾಹನ ಸವಾರರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಹೆಚ್ಚಿನ ಅವಘಡ ಸಂಭವಿಸುವ ಮುನ್ನ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಗೊಂಡು ವಾಹನ ನಿಬಿಡತೆಯಿಂದ ಕೂಡಿರುವ ಈ ಪ್ರದೇಶದ ರಾಜ್ಯ ಹೆದ್ದಾರಿಯ ಬಗ್ಗೆ ಗಮನ ಹರಿಸಿ ರಸ್ತೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂಬುದು ನಾಗರಿಕರ ಆಗ್ರಹಿಸುತ್ತಿದ್ದಾರೆ.

ಅಪಾಯಕಾರಿ ಹೊಂಡಗಳು:

ಮಳೆ ನೀರು ಸರಿಯಾಗಿ ಹರಿದು ಹೋಗದೆ ರಸ್ತೆಯಲ್ಲಿಯೇ ಹರಿಯುತ್ತಿದ್ದು ಗುಂಡಿಗಳಾಗಿದೆ. ಮಳೆ ಬರುವಾಗ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು ತಪ್ಪಿಸುವ ಭರದಲ್ಲಿ ಆಯತಪ್ಪಿ ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆ ಸರಿಪಡಿಸಬೇಕಾಗಿದೆ. ಗಿರಿಧರ ಪ್ರಭು, ವಾಹನ ಸವಾರ. 

-ಸತೀಶ್ಚಂದ್ರ ಶೆಟ್ಟಿ, ಶಿರ್ವ

ಟಾಪ್ ನ್ಯೂಸ್

1-horoscope

Horoscope: ಹೊಸ ಅವಕಾಶಗಳು ಅಯಾಚಿತವಾಗಿ ಲಭಿಸುವ ಸಾಧ್ಯತೆ, ವಧೂವರಾನ್ವೇಷಿಗಳಿಗೆ ಅನುಕೂಲ

office- bank

Work from home ಬಿಡಿ, ಆರೋಗ್ಯಕ್ಕಾಗಿ ಆಫೀಸಿಗೆ ನಡಿ: ಅಧ್ಯಯನ

1-aa

Congress MLA; ಸೈಲ್‌ ಬಂಧನ.. ಇಂದು ಶಿಕ್ಷೆ ಪ್ರಮಾಣ ಪ್ರಕಟ: ಏನಿದು ಪ್ರಕರಣ?

1-neol

Tata Sons;ಅಧ್ಯಕ್ಷ ಸ್ಥಾನಕ್ಕೆ ನಿಯೋಲ್‌ ಟಾಟಾ ನೇಮಕ ಅಸಾಧ್ಯ!

1-reee

North Korea vs South Korea: ಮತ್ತೆ ಬಲೂನ್‌ವಾರ್‌

Udayavani: “ಚಿಣ್ಣರ ಬಣ್ಣ 2024′ ನಾಳೆ ಆರಂಭ

Udayavani: “ಚಿಣ್ಣರ ಬಣ್ಣ 2024′ ನಾಳೆ ಆರಂಭ

Naxal

Maharashtra; ನಕ್ಸಲ್‌ ನಿಗ್ರಹಕ್ಕೆ 70 ಗಂಟೆ ನಡೆದಿದ್ದ ಯೋಧರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kalla

Hangalur: ಹಾಡಹಗಲೇ ಮನೆಯಿಂದ ಕಳವು

Udayavani: “ಚಿಣ್ಣರ ಬಣ್ಣ 2024′ ನಾಳೆ ಆರಂಭ

Udayavani: “ಚಿಣ್ಣರ ಬಣ್ಣ 2024′ ನಾಳೆ ಆರಂಭ

ಕಂಬಳ ಬಗ್ಗೆ ಅರಿಯದೇ ಪೆಟಾ ವಿವಾದ: ಡಾ| ದೇವಿಪ್ರಸಾದ್‌ ಶೆಟ್ಟಿ

Padubidri: ಕಂಬಳ ಬಗ್ಗೆ ಅರಿಯದೇ ಪೆಟಾ ವಿವಾದ: ಡಾ| ದೇವಿಪ್ರಸಾದ್‌ ಶೆಟ್ಟಿ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-horoscope

Horoscope: ಹೊಸ ಅವಕಾಶಗಳು ಅಯಾಚಿತವಾಗಿ ಲಭಿಸುವ ಸಾಧ್ಯತೆ, ವಧೂವರಾನ್ವೇಷಿಗಳಿಗೆ ಅನುಕೂಲ

kalla

Hangalur: ಹಾಡಹಗಲೇ ಮನೆಯಿಂದ ಕಳವು

office- bank

Work from home ಬಿಡಿ, ಆರೋಗ್ಯಕ್ಕಾಗಿ ಆಫೀಸಿಗೆ ನಡಿ: ಅಧ್ಯಯನ

1-aa

Congress MLA; ಸೈಲ್‌ ಬಂಧನ.. ಇಂದು ಶಿಕ್ಷೆ ಪ್ರಮಾಣ ಪ್ರಕಟ: ಏನಿದು ಪ್ರಕರಣ?

1-neol

Tata Sons;ಅಧ್ಯಕ್ಷ ಸ್ಥಾನಕ್ಕೆ ನಿಯೋಲ್‌ ಟಾಟಾ ನೇಮಕ ಅಸಾಧ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.