ಕಾಂಗ್ರೆಸ್ 2004-09ರವರೆಗೆ ‘ಕಾರ್ಗಿಲ್ ವಿಜಯ್ ದಿವಸ್’ ಸ್ಮರಿಸಿರಲಿಲ್ಲ: ರಾಜೀವ್ ಚಂದ್ರಶೇಖರ್
INDIA ಎಂಬ ಹೊಸ ಹೆಸರಿನಿಂದ ಅದನ್ನು ಮರೆಮಾಡಲು ಪ್ರಯತ್ನಿಸುತ್ತಿದೆ...
Team Udayavani, Jul 26, 2023, 7:13 PM IST
ಹೊಸದಿಲ್ಲಿ: 2004-09ರ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ‘ಕಾರ್ಗಿಲ್ ವಿಜಯ್ ದಿವಸ್’ ಅನ್ನು ಸ್ಮರಿಸಲಿಲ್ಲ ಆದರೆ ಈಗ ಅವರ ಬಣದ ಹೊಸ ಹೆಸರಿನಿಂದ ಅದನ್ನು ಮರೆಮಾಡಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬುಧವಾರ ಆಕ್ರೋಶ ಹೊರ ಹಾಕಿದ್ದಾರೆ.
“2004-2009ರ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲು ನಾನು ಸಂಸತ್ತಿನಲ್ಲಿ ಒತ್ತಾಯಿಸುವವರೆಗೆ ಆಚರಿಸಲಿಲ್ಲ ಮತ್ತು ಗೌರವಿಸಲಿಲ್ಲ ಎಂದು ನಿಮಗೆ ತಿಳಿದಿದೆಯೇ? “ನನ್ನ ನಿರಂತರ ಬೇಡಿಕೆಯ ನಂತರವೇ ಆಗಿನ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು 2010 ರಿಂದ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಗೌರವ ಸಲ್ಲಿಸುವ ಸಂಪ್ರದಾಯವನ್ನು ಪ್ರಾರಂಭಿಸಿದರು” ಎಂದು ಟ್ವೀಟ್ ಮಾಡಿ, 2009 ರಲ್ಲಿ ರಾಜ್ಯಸಭೆಯಲ್ಲಿ ತಮ್ಮ ನಿರ್ಣಯದ ಪ್ರತಿಗಳನ್ನು ಹಂಚಿಕೊಂಡಿದ್ದಾರೆ.
Congress led #UPA never celebrated the #Kargil victory at all. It was only after my persistent demand that the then Defence Minister AK Antony started the tradition of laying a wreath on the occasion of #KargilVijayDiwas from 2010.#RememberAndNeverForget pic.twitter.com/ZN0a4LNEPM
— Rajeev Chandrasekhar 🇮🇳 (@Rajeev_GoI) July 26, 2023
‘ಬಿಜೆಪಿ ಯುದ್ಧ’ ಎಂಬ ಕಾರಣಕ್ಕೆ ಆಚರಣೆಯನ್ನು ವಿರೋಧಿಸುವ ಸದಸ್ಯರು ಈ ಅಪಹಾಸ್ಯವನ್ನು ನಿಲ್ಲಿಸಬೇಕು ಎಂದು ಅವರು ಮನವಿಯಲ್ಲಿ ಬರೆದಿದ್ದರು.ಈ ತ್ಯಾಗ ಮತ್ತು ಕರ್ತವ್ಯವನ್ನು ಸ್ಮರಿಸುವುದು ನಮ್ಮ ರಾಷ್ಟ್ರಕ್ಕೆ ನಮ್ಮ ಕರ್ತವ್ಯ, ಎಂದು ಅವರು ಹೇಳಿದ್ದರು. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಕಾರ್ಗಿಲ್ ಯುದ್ಧ ನಡೆದಿತ್ತು.
ಅದೇ ಯುಪಿಎ ತನ್ನ ಅವಮಾನವನ್ನು ಹೊರಹಾಕಲು ಮತ್ತು ಹೊಸ ಹೆಸರಿನ ಹಿಂದೆ ಅಡಗಿಕೊಳ್ಳಲು ಬಯಸುತ್ತಿದೆ. ಕಾರ್ಗಿಲ್ ವಿಜಯ್ ದಿವಸ್ ಅಥವಾ ನಮ್ಮ ಸಶಸ್ತ್ರ ಪಡೆಗಳ ಸೇವೆ ಮತ್ತು ತ್ಯಾಗ ಮತ್ತು ಪಾಕಿಸ್ಥಾನದ ವಿರುದ್ಧದ ವಿಜಯವನ್ನು ಆಚರಿಸಲು ಇಷ್ಟಪಡದ ರಾಜಕೀಯ ಪಕ್ಷ ಮತ್ತು ವಂಶ ಪರಂಪರೆಯ ಪಕ್ಷ ಈಗ ತನ್ನನ್ನು ‘ಇಂಡಿಯಾ’ ಎಂದು ಮರುನಾಮಕರಣ ಮಾಡಲು ಬಯಸುತ್ತಿದೆಯೇ? ಎಂದು ಸಚಿವ ರಾಜೀವ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನವರು ಬಾಲಾಕೋಟ್ ವೈಮಾನಿಕ ದಾಳಿಯನ್ನು ಅಪಹಾಸ್ಯ ಮಾಡಿದರು, ಅವರು ಸರ್ಜಿಕಲ್ ಸ್ಟ್ರೈಕ್‌ಗಳನ್ನು ಅಪಹಾಸ್ಯ ಮಾಡಿದರು, ಅವರು ವಿದೇಶದಲ್ಲಿ ಪ್ರತಿ ಅವಕಾಶದಲ್ಲೂ ಭಾರತಕ್ಕೆ ಮಸಿ ಬಳಿಯುತ್ತಾರೆ ಮತ್ತು ಇನ್ನೂ ತಮ್ಮನ್ನು ‘ಇಂಡಿಯಾ’ ಎಂದು ಮರುನಾಮಕರಣ ಮಾಡಲು ಬಯಸುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಕಾರ್ಗಿಲ್ ವಿಜಯ್ ದಿವಸ್ ಅನ್ನು ಪಾಕಿಸ್ಥಾನದ ವಿರುದ್ಧ ಭಾರತದ ಯುದ್ಧ ವಿಜಯವನ್ನು ಸ್ಮರಿಸಲು ಆಚರಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.