ಭರವಸೆಯ ಪ್ರತಿಭಾನ್ವಿತ ನಟಿ ರಚನಾ ರೈ

ಸರ್ಕಸ್‌ನಲ್ಲಿ ಮಿಂಚಿದ ಪುತ್ತೂರಿನ ಬಹುಮುಖ ಪ್ರತಿಭೆ

Team Udayavani, Jul 26, 2023, 8:16 PM IST

1-asdasd

ಈ ವರ್ಷದ ಅತಿ ನಿರೀಕ್ಷಿತ ತುಳು ಸಿನಿಮಾ, ಗಿರಿಗಿಟ್ ಖ್ಯಾತಿಯ ಬಿಗ್‌ಬಾಸ್ ಚಾಂಪಿಯನ್ ರೂಪೇಶ್ ಶೆಟ್ಟಿ ನೇತೃತ್ವದ ತಂಡದ ಸರ್ಕಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಗಮನ ಸೆಳೆದಿರುವ ಪುತ್ತೂರಿನ ಬಹುಮುಖ ಪ್ರತಿಭೆ ರಚನಾ ರೈ ಅವರಿಗೆ ಸಿನಿಮಾ ರಂಗದಲ್ಲಿ ಉಜ್ವಲ ಭವಿಷ್ಯ ಇರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತಿದೆ. ಅವರ ಆಕರ್ಷಕ ದೇಹಸೌಂದರ್ಯ, ರೂಪ, ಅಭಿನಯ, ಬಹುಮುಖ ರಂಗದಲ್ಲಿ ತೋರಿಸುತ್ತಿರುವ ಕಲಾ ಪ್ರೌಢಿಮೆಗಳೆಲ್ಲವೂ ಅವರ ಭವಿಷ್ಯದ ದಾರಿಯನ್ನು ಉಜ್ವಲಗೊಳಿಸಲಿದೆ.

ಎಳವೆಯಲ್ಲೇ ಕೆಮರಾ ಎದುರಿಸಿದ್ದ ಅವರು ಅದೇ ಕಾರಣದಿಂದ ಸರ್ಕಸ್ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರೊಂದಿಗೆ ಕಿಂಚಿತ್ತೂ ಅಳುಕಿಲ್ಲದೆ ನಟಿಸಿ ಉತ್ತಮ ಪ್ರದರ್ಶನವನ್ನೂ ನೀಡಿ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಪತ್ರಿಕೋದ್ಯಮದಲ್ಲಿ ಪದವಿ ಮಾಡಿರುವ ಅವರು ಉತ್ತಮ ಭರತನಾಟ್ಯ ಕಲಾವಿದೆ, ಕ್ರೀಡಾಪಟು ಕೂಡ ಆಗಿರುವ ಇವರು ಪುತ್ತೂರಿನಲ್ಲೇ ಹುಟ್ಟಿ ಬೆಳೆದವರು. ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ. ವೃತ್ತಿಪರ ಬ್ಯಾಂಡ್ಮಿಂಟನ್ ಮತ್ತು ಫುಟ್ಬಾಲ್ ಕ್ರೀಡಾಪಟು ಕೂಡ ಆಗಿರುವ ಅವರು ಉತ್ತಮ ಚಿತ್ರಕಲಾವಿದೆಯೂ ಆಗಿದ್ದಾರೆ. ಚಿತ್ರಕಲೆಯಲ್ಲಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿರುವ ಕಲಾವಿದೆಯಾಗಿದ್ದಾರೆ.

ಹಾರಾಡಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಗಂಗಾ ಅವರ ಪುತ್ರಿಯಾಗಿರುವ ರಚನಾ ಅವರು ಬಾಲ್ಯದಿಂದಲೇ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದ ಕಾರಣ ಅವರಿಗೆ ಕೆಮರಾ ಮುಂದೆ ಪ್ರದರ್ಶನ ನೀಡುವುದು ತುಂಬಾ ಇಷ್ಟವಾಗಿತ್ತು. ಕಲಾಶ್ರೀ ಎಂಬ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಲ್ಲಿ ಮೂರು ಸಲ ಚಾಂಪಿಯನ್ ಆಗಿದ್ದ ಇವರು ಕೆಲವು ರಿಯಾಯಿತಿ ಶೋ ಕಾರ್ಯಕ್ರಮಗಳಲ್ಲೂ ವಿನ್ನರ್ ಆಗಿದ್ದರು.

ಇದೆಲ್ಲವೂ ರಚನಾ ಅವರ ಬಹುಮಖ ಪ್ರತಿಭೆಗೆ ಸಾಕ್ಷಿ ಹಾಗೂ ಅವರಿಗೆ ಸಿನಿಮಾ ರಂಗದಲ್ಲಿ ಉಜ್ವಲ ಭವಿಷ್ಯವೂ ಇದೆ ಎಂಬುದಕ್ಕೆ ಸರ್ಕಸ್‌ನಲ್ಲಿ ಅವರು ತೋರಿರುವ ನಟನೆ ಹಾಗೂ ಅದನ್ನು ಕಂಡು ಅವರಿಗೆ ಸಿಕ್ಕಿರುವ ಬೇಡಿಕೆ ಸಾಬೀತು ಮಾಡುತ್ತದೆ.

ಸಾಹಿತಿ!
ರಚನಾ ರೈ ಅವರು ಸಾಹಿತ್ಯ ಕ್ಷೇತ್ರದಲ್ಲೂ ಕೈಯಾಡಿಸಿದ್ದು, ಓ ಮೈ ಡಾಗ್ ಎಂಬ ಕೃತಿಯೊಂದನ್ನು ಬರೆದಿದ್ದಾರೆ. ಇದು ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಇದು ಅವರ ಸಾಹಿತ್ಯದ ಗಟ್ಟಿತನಕ್ಕೆ ಸಾಕ್ಷಿ. ಈ ಕೃತಿಯ 1,000ಕ್ಕಿಂತಲೂ ಹೆಚ್ಚು ಪ್ರತಿಗಳು ಒಂದೇ ದಿನ ಮಾರಾಟವಾಗಿತ್ತು ಎಂಬುದು ಗಮನಾರ್ಹ ಸಂಗತಿ.

ಪ್ರಾಣಿಪ್ರಿಯೆ
ರಚನಾ ರೈ ಅವರು ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಬಾಲ್ಯದಿಂದಲೇ ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುತ್ತಿರುವ ಅವರು ಎಷ್ಟೋ ಪ್ರಾಣಿಗಳನ್ನು ಸಂಕಷ್ಟ, ಅಪಾಯದಿಂದ ರಕ್ಷಿಸಿದ್ದಾರೆ. ಇದಕ್ಕಾಗಿ ಅವರಿಗೆ ಭಾರೀ ಮೆಚ್ಚುಗೆಯೂ ಸಿಕ್ಕಿದೆ.

ನಾಲ್ಕು ಸಿನಿಮಾಗಳಿಗೆ ಸಹಿ
ನಟನೆಯ ಬಗ್ಗೆ ಮೂಲತಃ ತಾನು ಡ್ಯಾನ್ಸರ್ ಆಗಿದ್ದ ಕಾರಣ ನಟನೆ ಹೆಚ್ಚು ಕಷ್ಟವಾಗಲಿಲ್ಲ. ವಿನೀತ್ ಮತ್ತು ಕದ್ರಿ ರಾಕೇಶ್ ಅವರ ಮೂಲಕ ರೂಪೇಶ್ ಶೆಟ್ಟರ ತಂಡಕ್ಕೆ ಸೇರಿಕೊಂಡೆ. ಅಲ್ಲಿನ ಟೀಂ ವರ್ಕ್ ನನಗೆ ತುಂಬಾ ಖುಷಿ ಕೊಟ್ಟಿದೆ. ಅಂಥ ತಂಡದಲ್ಲಿ ಕೆಲಸ ಮಾಡುವುದು ದೊಡ್ಡ ಅದೃಷ್ಟ ಎಂದೇ ಹೇಳಬೇಕು. ಸರ್ಕಸ್‌ನಲ್ಲಿ ನಟಿಸಿದ ಬಳಿಕ ನನಗೆ ಕನ್ನಡದ ಹಲವಾರು ಸಿನಿಮಾಗಳಿಂದ ಆಫರ್ ಬಂದಿದ್ದು, ಈಗಾಗಲೇ ನಾಲ್ಕು ಸಿನಿಮಾಗಳಿಗೆ ಸಹಿ ಹಾಕಿದ್ದೇನೆ. ಅದರಲ್ಲೊಂದು ಸತೀಶ್ ನೀನಾಸಂ ಅವರ ಸಿನಿಮಾ. ಉಳಿದವಗಳ ಬಗ್ಗೆ ಸದ್ಯ ಹೇಳಲು ಸಾಧ್ಯವಿಲ್ಲ ಎಂಬುದು ರಚನಾ ಅವರ ಮಾತು. ಸರ್ಕಸ್ ಸಿನಿಮಾ ಅವರಿಗೆ ಹೆಸರು ತಂದು ಕೊಡಲಿದೆ. ಅಷ್ಟರ ಮಟ್ಟಿಗೆ ಅವರು ಅಭಿನಯದಲ್ಲಿ ಪಳಗಿದ್ದಾರೆ.

ಟಾಪ್ ನ್ಯೂಸ್

Udupi: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

Udupi: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

Na-Desoza-sagara

ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ

Mangaluru: ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಸರಳ ವ್ಯಾಯಾಮ!

Mangaluru: ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಸರಳ ವ್ಯಾಯಾಮ!

ಗೋ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ: ಪುನೀತ್‌ ಅತ್ತಾವರ

Belthangady; ಗೋ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ: ಪುನೀತ್‌ ಅತ್ತಾವರ

BBK11: ಫಿನಾಲೆಗೆ ಹೋಗುವ ಪರಸ್ಪರ ಕಿತ್ತಾಡಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು

BBK11: ಫಿನಾಲೆಗೆ ಹೋಗುವ ಪರಸ್ಪರ ಕಿತ್ತಾಡಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್‌: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ

ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್‌: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ

Vijay raghavendra’s rudrabhishekam movie

Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-Y-J

Yashasvi Jaiswal ವಿಶ್ವಾಸ; ನಾವು ಬಲಿಷ್ಠರಾಗಿ ಬರುವೆವು…

Udupi: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

Udupi: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

1-SA

Test; ಪಾಕಿಸ್ಥಾನಕ್ಕೆ 10 ವಿಕೆಟ್‌ ಸೋಲು :ದಕ್ಷಿಣ ಆಫ್ರಿಕಾ 2-0 ಕ್ಲೀನ್‌ಸ್ವೀಪ್‌

1-aff

Test; ಅಫ್ಘಾನಿಸ್ಥಾನಕ್ಕೆ ಒಲಿಯಿತು 1-0 ಸರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.