ಜಪಾನ್ ಓಪನ್ ಬ್ಯಾಡ್ಮಿಂಟನ್: ಸಿಂಧುಗೆ ಮತ್ತೆ ಆಘಾತ
Team Udayavani, Jul 26, 2023, 11:47 PM IST
ಟೋಕಿಯೊ: ಪಿ.ವಿ. ಸಿಂಧು ಮತ್ತೂಮ್ಮೆ ಪ್ರಥಮ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ. ಜಪಾನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯಲ್ಲೂ ಫಾರ್ಮ್ಗೆ ಮರಳಲು ವಿಫಲರಾದ ಅವರು ಚೀನದ ಜಾಂಗ್ ಯಿ ಮಾನ್ ವಿರುದ್ಧ 12-21, 13-21 ಅಂತರದಿಂದ ಎಡವಿದರು.
ಇದು ಈ ವರ್ಷದ 13 ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪಂದ್ಯಾವಳಿಗಳಲ್ಲಿ ಸಿಂಧು ಮೊದಲ ಸುತ್ತಿನ ಸೋಲಿಗೆ ಸಿಲುಕಿದ 7ನೇ ನಿದರ್ಶನವಾಗಿದೆ.
ಸೋಲಿನಿಂದ ಪಾರಾದ ಸೇನ್
ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಸೋಲಿನ ದವಡೆಯಿಂದ ಪಾರಾಗಿ ದ್ವಿತೀಯ ಸುತ್ತು ತಲುಪಿ ದರು. ಅವರು ಭಾರೀ ಹೋರಾಟ ನೀಡಿದ ಭಾರತದ ಮತ್ತೋರ್ವ ಆಟಗಾರ ಪ್ರಿಯಾಂಶು ರಾಜಾವತ್ ವಿರುದ್ಧ 21-15, 12-21, 24-22 ಅಂತರದ ಜಯ ಸಾಧಿಸಿದರು. ಸೇನ್ ಅವರ ದ್ವಿತೀಯ ಸುತ್ತಿನ ಎದುರಾಳಿ ಜಪಾನ್‌ನ ಕಾಂಟ ಸುನೆಯಾಮ.
ಮಿಥುನ್ ಮಂಜುನಾಥ್ ದಿಟ್ಟ ಹೋರಾಟ ನೀಡಿಯೂ ಚೀನದ ವೆಂಗ್ ಹಾಂಗ್ ಯಾಂಗ್ ವಿರುದ್ಧ 21-13, 22-24, 18-21 ಅಂತರದಿಂದ ಸೋತು ಹೋದರು. ಈ ಜಿದ್ದಾಜಿದ್ದಿ ಪಂದ್ಯ ಒಂದು ಗಂಟೆ, 25 ನಿಮಿಷಗಳ ತನಕ ಸಾಗಿತು.
ಚಿರಾಗ್-ಸಾತ್ವಿಕ್ ಜಯ
ರವಿವಾರವಷ್ಟೇ ಕೊರಿಯಾ ಓಪನ್ ಪ್ರಶಸ್ತಿ ಜಯಿಸಿದ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ 3 ಗೇಮ್‌ಗಳ ಹೋರಾಟದ ಬಳಿಕ ಮೊದಲ ಸುತ್ತು ದಾಟುವಲ್ಲಿ ಯಶಸ್ವಿಯಾದರು. ಇವರು ಇಂಡೋನೇಷ್ಯಾದ ಲಿಯೋ ರೋಲಿ ಕರ್ನಾಂಡೊ-ಡೇನಿಯಲ್ ಮಾರ್ಟಿನ್ ವಿರುದ್ಧ 21-16, 11-21, 21-13ರಿಂದ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.