ಹಣವಿಲ್ಲದೆ ಆಹಾರಕ್ಕಾಗಿ ಪರದಾಡುತ್ತಿರುವ ಯುವತಿ: ಭಾರತಕ್ಕೆ ಕರೆತರುವಂತೆ ಯುವತಿಯ ತಾಯಿ ಮನವಿ
Team Udayavani, Jul 27, 2023, 10:21 AM IST
ಹೈದರಾಬಾದ್: ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದ ಹೈದರಾಬಾದ್ ಮೂಲದ ಯುವತಿಯೊಬ್ಬಳು ಚಿಕಾಗೋದ ಬೀದಿಯಲ್ಲಿ ಹಸಿವಿನಿಂದ ಬಳಲುತ್ತಿರುವ ದೃಶ್ಯ ಕಂಡು ಬಂದಿದ್ದು. ಆಕೆಯನ್ನು ಆದಷ್ಟು ಬೇಗ ಭಾರತಕ್ಕೆ ಕರೆತರುವಂತೆ ಆಕೆಯ ತಾಯಿ ಕೇಂದ್ರದ ಸಹಾಯವನ್ನು ಕೋರಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತು ಯುವತಿಯ ತಾಯಿ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ನನ್ನ ಮಗಳು ಸೈಯದಾ ಲುಲು ಮಿನ್ಹಾಜ್ ಜೈದಿ ಚಿಕಾಗೋದ ಡೆಟ್ರಾಯಿಟ್‌ನಲ್ಲಿರುವ ಡೆಟ್ರಾಯಿಟ್‌ನ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಲು 2021ರ ಆಗಸ್ಟ್ ತಿಂಗಳಲ್ಲಿ ಅಮೇರಿಕಾಕ್ಕೆ ತೆರಳಿದ್ದಳು. ಚೆನ್ನಾಗಿಯೇ ಇದ್ದ ಆಕೆ ಕಳೆದ 2 ತಿಂಗಳಿಂದ ನಾವು ಅವಳನ್ನು ಸಂಪರ್ಕ ಹೊಂದಲು ಸಾಧ್ಯವಾಗಲಿಲ್ಲ ಆ ಬಳಿಕ ಆಕೆಯ ಸ್ಥಿತಿಯನ್ನು ತೆಲಂಗಾಣ ಮೂಲದ ಮಜ್ಲಿಸ್ ಬಚಾವೋ ತೆಹ್ರೀಕ್ ವಕ್ತಾರ ಅಮ್ಜೆದ್ ಉಲ್ಲಾ ಖಾನ್ ಅವರು ಬೆಳಕಿಗೆ ತಂದ ಮೇಲೆ ಆಕೆಯ ಸ್ಥಿತಿ ಹೇಗಿದೆ ಎಂಬುದು ಗೊತ್ತಾಯಿತು, ನನ್ನ ಮಗಳ ಬಳಿಯಿದ್ದ ಬ್ಯಾಗ್, ಪ್ರಮುಖ ದಾಖಲೆ ಹಣ ಸೇರಿ ಎಲ್ಲವನ್ನೂ ಕಳ್ಳರು ಕದ್ದು ಖರ್ಚಿಗೆ ಹಣವಿಲ್ಲದೆ ಇದೀಗ ಹೊಟ್ಟೆಗೆ ಅನ್ನ ಆಹಾರವಿಲ್ಲದೆ ಬೀದಿಯಲ್ಲಿ ಪರದಾಡುತಿದ್ದಾಳೆ ಅಲ್ಲದೆ ಆಕೆ ಖಿನ್ನತೆಗೆ ಒಳಗಾಗಿದ್ದಾಳೆ, ಆಕೆಯ ಆರೋಗ್ಯವೂ ತುಂಬಾ ಹದಗೆಟ್ಟಿದ್ದು ಆಕೆಯನ್ನು ಆದಷ್ಟು ಬೇಗ ಭಾರತಕ್ಕೆ ಕರೆ ತನ್ನಿ ಎಂದು ವಿದೇಶಾಂಗ ಸಚಿವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
Syeda Lulu Minhaj Zaidi from Hyd went to persue MS from TRINE University, Detroit was found in a very bad condition in Chicago, her mother appealed @DrSJaishankar to bring back her daughter.@HelplinePBSK @IndiainChicago @IndianEmbassyUS @sushilrTOI @meaMADAD pic.twitter.com/GIhJGaBA7a
— Amjed Ullah Khan MBT (@amjedmbt) July 25, 2023
ಸಂತ್ರಸ್ತೆಯ ತಾಯಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದು “ತಕ್ಷಣ ಮಧ್ಯಪ್ರವೇಶಿಸಿ” “ಸಾಧ್ಯವಾದಷ್ಟು ಬೇಗ” ತನ್ನ ಮಗಳನ್ನು ಭಾರತಕ್ಕೆ ಮರಳಿ ಕರೆತರುವಂತೆ ಒತ್ತಾಯಿಸಿದ್ದಾರೆ.
ಮಹಿಳೆಯ ಪತ್ರಕ್ಕೆ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು ಯುವತಿಯ ರಕ್ಷಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.
ಈ ನಡುವೆ ಕೆಲ ಸಂಘಟನೆ “ನಾವು ಬಾಲಕಿಯ ಆರೈಕೆಗಾಗಿ ಆಕೆಯ ಪೋಷಕರನ್ನು ಚಿಕಾಗೋಗೆ ಕಳುಹಿಸಲು ಪ್ರಯತ್ನಿಸುತ್ತಿದ್ದೇವೆ. ಪೋಷಕರ ಬಳಿ ಪಾಸ್‌ಪೋರ್ಟ್ ಇಲ್ಲ. ಅವರಿಗೆ ಪಾಸ್‌ಪೋರ್ಟ್ ಮತ್ತು ಹೈದರಾಬಾದ್‌ನಲ್ಲಿರುವ ಯುಎಸ್ ಕಾನ್ಸುಲೇಟ್‌ನಿಂದ ವೀಸಾ ಪಡೆಯಲು ಸಹಾಯ ಮಾಡುವಂತೆ ನಾವು ಐಟಿ ಸಚಿವ ಕೆಟಿಆರ್ (ತೆಲಂಗಾಣ) ಅವರಿಗೆ ಮನವಿ ಮಾಡಿದ್ದೇವೆ. . ಅನೇಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಯುಎಸ್ ಪ್ರವಾಸಕ್ಕೆ ಮುಂದೆ ಬಂದಿವೆ,” ಎಂದು ಹೇಳಿದ್ದಾರೆ.
ಯುವತಿಯ ರಕ್ಷಣೆಗೆ ಮುಂದೆ ಬಂದಿರುವ ಕೇಂದ್ರ ಸಚಿವಾಲಯ ಹಾಗೂ ಇತರ ಸಂಘಟನೆಗಳ ಕಾರ್ಯಕ್ಕೆ ಪೋಷಕರು ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: “ಡಿಯರ್ ಕಾರ್ಮೆಡ್’ʼಗೆ 4 ವರ್ಷ: ಸೆಲ್ಫಿ ಹಂಚಿಕೊಂಡು ವಿಶೇಷ ಸಿನಿಮಾವನ್ನು ನೆನೆದ ರಶ್ಮಿಕಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.