ಗೃಹಲಕ್ಷ್ಮೀ: ನೋಂದಣಿಗೆ ಸೈಬರ್ ಸೆಂಟರ್‌ಗಳಲ್ಲಿ ಹಣ ವಸೂಲಿ
Team Udayavani, Jul 27, 2023, 3:07 PM IST
ಹೊಸಕೋಟೆ: ರಾಜ್ಯದ ಕಾಂಗ್ರೆಸ್ ಸರ್ಕಾರ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ಸಾವಿರ ಘೋಷಿಸಿದ್ದು, ಅದರಂತೆ ರಾಜ್ಯಾದ್ಯಂತ ಬಿರುಸಿನಿಂದ ನೋಂದಣಿ ಕಾರ್ಯಗಳು ಭರದಿಂದ ಸಾಗಿವೆ. ಸೈಬರ್‌ಗಳ ಮುಂದೆ ಮಹಿಳೆಯರು ಸಾಲು ಸಾಲು ನಿಂತಿರುವ ದೃಶ್ಯಗಳನ್ನು ಸೋಮವಾರದಿಂದ ಕಾಣಬಹುದು.
ಈಗಿರುವಾಗ ಸರ್ಕಾರ ನೋಂದಣಿ ಉಚಿತ ಎಂದು ಘೋಷಣೆ ಮಾಡಿದ್ದು, ಯಾವುದೇ ಸೈಬರ್ ಅಥವಾ ಗ್ರಾಮ ಒನ್‌ನಲ್ಲಿ ಉಚಿತವಾಗಿ ನೋಂದಾಯಿಸಬಹುದು ಎಂದು ಹೇಳಿದ್ದರೆ ಹೊಸಕೋಟೆ ತಾಲೂಕಾದ್ಯಂತ ಸೈಬರ್‌ಗಳು ಮತ್ತು ಗ್ರಾಮ ಒನ್‌ನಲ್ಲಿ ಮಹಿಳೆಯರಿಂದ 50, 100ರೂ ಪಡೆಯುತ್ತಿದ್ದಾರೆ ಎಂದು ಮಹಿಳೆಯರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಹೇಳಿಕೆಯೊಂದನ್ನು ನೀಡಿದ್ದು, ಗೃಹಲಕ್ಷ್ಮೀ ಯೋಜನೆಗೆ ಹಣ ಪಡೆದರೆ ಅಂತಹವರ ಅಂತಹವರ ವಿರುದ್ಧ ನಿಯಮ ಗಾಳಿಗೆ ತೂರಿದವರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಿ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಹಿಂಪಡೆಯಲು ಹೇಳಿದ್ದಾರೆ. ರಾಜ್ಯ ಸರ್ಕಾರ ಮಹಿಳೆಯರಿಗಾಗಿ ತಿಂಗಳಿಗೆ 2 ಸಾವಿರ ರೂ. ನೀಡುವ ಯೋಜೆನೆಯಾದ ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಸೈಬರ್‌ಗಳಲ್ಲಿ 100 ರೂಗಳು ಪಡೆಯುತ್ತಿದ್ದು, ಈ ಕೂಡಲೆ ಅಂತವರನ್ನು ಸರ್ಕಾರ ಐಡಿ ಮತ್ತು ಪಾಸ್ ವರ್ಡ್‌ನ್ನು ಹಿಂಪಡೆಯಬೇಕು ಎಂದು ಬ್ಯಾಟೇಗೌಡ ಗ್ರಾಮ ಪಂಚಾಯ್ತಿ ಸದಸ್ಯ ಹೇಳಿದ್ದಾರೆ.
ಗೃಹಲಕ್ಷ್ಮೀ ವಿನೂತನ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಅದು ಉಚಿತವಾಗಿ ಮಾಡುವ ಭರವಸೆಯನ್ನು ಜನರಿಗೆ ನೀಡಿದೆ ಆದರೆ ಸೈಬರ್‌ಗಳಲ್ಲಿ 50, 100 ರೂಗಳನ್ನು ಮಹಿಳೆಯರಿಂದ ಪಡೆಯುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಸರ್ಕಾರ ಅಂತಹವರನ್ನು ಈ ಯೋಜನೆಯಿಂದ ದೂರ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ● ಆಂಜಿನಮ್ಮ ಶಂಭಲಿಂಗಪ್ಪ, ಗ್ರಾಪಂ ಸದಸ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.