ಒಂದೇ ದಿನ, ಒಂದೇ ಟೈಟಲ್ನಲ್ಲಿ ಎರಡು ಪ್ರತ್ಯೇಕ ಸಿನಿಮಾ ರಿಲೀಸ್: ಏನಿದು ʼಜೈಲರ್ʼ ವಿವಾದ
ರಜಿನಿಕಾಂತ್ ʼಜೈಲರ್ʼ ಮಲಯಾಳಂ ʼಜೈಲರ್ʼ: ಕೋರ್ಟ್ ಮೆಟ್ಟಿಲಲ್ಲಿ ವಿವಾದ
Team Udayavani, Jul 27, 2023, 5:15 PM IST
ಚೆನ್ನೈ: ಈ ವರ್ಷದ ಬಹುದೊಡ್ಡ ಸಿನಿಮಾಗಳಲ್ಲಿ ಒಂದಾಗಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಜೈಲರ್ʼ ಅದ್ಧೂರಿಯಾಗಿ ಆಡಿಯೋ ರಿಲೀಸ್ ತಯಾರಿಯಲ್ಲಿ ನಿರತವಾಗಿದೆ. ಸಿನಿಮಾದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ.
ಇದುವರೆಗೆ ಪಾಸಿಟಿವ್ ಪ್ರಚಾರದಿಂದಲೇ ಸುದ್ದಿಯಾಗಿರುವ ರಜಿನಿಕಾಂತ್ ಅವರ ʼಜೈಲರ್ʼ ಈಗ ಟೈಟಲ್ ವಿವಾದಿಂದ ಸದ್ದು ಮಾಡುತ್ತಿದೆ. ಮಲಯಾಳಂ ನಿರ್ದೇಶಕ ಸಕ್ಕಿರ್ ಮದತಿಲ್ ಅವರ ʼಜೈಲರ್ʼ ಸಿನಿಮಾದೊಂದಿಗೆ ತಮಿಳಿನ ʼಜೈಲರ್ʼ ಸಿನಿಮಾ ಟೈಟಲ್ ವಿಚಾರವಾಗಿ ಚರ್ಚೆಯಾಗುತ್ತಿದೆ.
ವಿಶೇಷವೆಂದರೆ ಎರಡೂ ಸಿನಿಮಾದ ಟೈಟಲ್ ಒಂದೇ ಆಗಿರುವುದರೊಂದಿಗೆ ಸಿನಿಮಾಗಳು ಒಂದೇ ದಿನ, ಆಗಸ್ಟ್ 10 ರಂದೇ ರಿಲೀಸ್ ಆಗಲಿದೆ. ಮಲಯಾಳಂನಲ್ಲಿ ಬರುತ್ತಿರುವ ʼಜೈಲರ್ʼ ಸಿನಿಮಾದಲ್ಲಿ ಧ್ಯಾನ್ ಶ್ರೀನಿವಾಸನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಟೈಟಲ್ ಬದಲಾವಣೆಗೆ ಮನವಿ ಮಾಡಿದ ಮಲಯಾಳಂ ನಿರ್ದೇಶಕ:
ಈ ಸಿನಿಮಾಕ್ಕಾಗಿ ನಾನು 5 ಕೋಟಿ ರೂ. ಹಾಕಿದ್ದೇನೆ. ಮನೆ ಮತ್ತು ಮಗಳ ಆಭರಣಗಳನ್ನು ಅಡವಿಟ್ಟಿದ್ದೇನೆ. ನನ್ನ ಕಾರನ್ನು ಕೂಡ ಮಾರಾಟ ಮಾಡಿದ್ದೇನೆ. ಇದಲ್ಲದೇ ಸಿನಿಮಾಕ್ಕಾಗಿ ಬ್ಯಾಂಕ್ ಹಾಗೂ ಹೊರಗಿನವರಿಂದ ಸಾಲ ಪಡೆದುಕೊಂಡಿದ್ದೇನೆ. ಬಡ್ಡಿದರ ಹೆಚ್ಚಳದಿಂದ ಮುಂದೆ ಲೋನ್ ಮರುಪಾವತಿಸಲು ಕಷ್ಟವಾಗಬಹುದು. ನನಗೆ ನನ್ನ ಕಷ್ಟವನ್ನು ರಜಿನಿಕಾಂತ್ ಅವರು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಭರವಸೆಯಿದೆ. ಈ ಸಿನಿಮಾದ ಟೈಟಲ್ ಹಾಗೂ ಒಂದೇ ದಿನ ರಿಲೀಸ್ ಆಗುವುದರಿಂದ ಈ ಹಿಂದೆ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಂದಿತ್ತು ಎಂದು ನಿರ್ದೇಶಕ ಸಕ್ಕಿರ್ ಮದತಿಲ್ ಹೇಳಿ, ಮನವಿ ಮಾಡಿರುವುದಾಗಿ “ಸಿನಿಮಾ ವಿಕಟನ್” ವರದಿ ಮಾಡಿದೆ.
ಟೈಟಲ್ ವಿವಾದ:
ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾ ಅನೌನ್ಸ್ ಆಗುವ ಮೊದಲೇ , 2021 ರ ಆಗಸ್ಟ್ ನಲ್ಲಿ ಕೇರಳ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (ಕೆಎಫ್ಸಿಸಿ) ನಲ್ಲಿ ‘ಜೈಲರ್’ ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿರುವುದಾಗಿ ಸಕ್ಕಿರ್ ಹೇಳುತ್ತಾರೆ. ಇದಲ್ಲದೇ ಸನ್ ಪಿಕ್ಚರ್ಸ್ ಅವರಿಗೆ ಇದರ ಬಗ್ಗೆ ವಿನಂತಿ ಮಾಡಿದ್ದೆ. ನಿಮ್ಮ ಸಿನಿಮಾವನ್ನು ಬೇರೆ ಟೈಟಲ್ ನಲ್ಲಿ ರಿಲೀಸ್ ಮಾಡಿ, ಇದರಿಂದ ಎರಡೂ ಸಿನಿಮಾಕ್ಕೂ ಹಾನಿಯಾಗುವುದಿಲ್ಲ ಎಂದು ನಿರ್ದೇಶಕ ಸಕ್ಕಿರ್ ಸನ್ ಪಿಕ್ಚರ್ಸ್ ಗೆ ಮನವಿ ಮಾಡಿದ್ದರು ಎಂದು ವರದಿ ತಿಳಿಸಿದೆ.
ಕೋರ್ಟ್ ಮೆಟ್ಟಿಲಲ್ಲಿ ʼಟೈಟಲ್ ವಿವಾದʼ:
ಸಕ್ಕಿರ್ ಅವರ ವಿನಂತಿಯನ್ನು ಒಪ್ಪದ ಸನ್ ಪಿಕ್ಚರ್ಸ್ ʼಜೈಲರ್ʼ ಟೈಟಲ್ ನ್ನೇ ಮುಂದುವರಿಸಿದ್ದಾರೆ. ಈ ವಿಚಾರವಾಗಿ ಮದ್ರಾಸ್ ಕೋರ್ಟ್ ಗೆ ಸನ್ ಪಿಕ್ಚರ್ಸ್ ತಲುಪಿದ್ದು, ಇದಕ್ಕೆ ಪ್ರತಿಯಾಗಿ ಮದತಿಲ್ ಅವರು ಕೂಡ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಇದರ ವಿಚಾರಣೆ ಆಗಸ್ಟ್ 2ಕ್ಕೆ ವಿಚಾರಣೆಯನ್ನು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.