ಮನೆ ಬಾಡಿಗೆ ಬಗ್ಗೆ ಜಾಹೀರಾತು ಹಾಕಿದ ಮಹಿಳೆಗೆ 1.4 ಲಕ್ಷ ಟೋಪಿ
Team Udayavani, Jul 29, 2023, 2:37 PM IST
ಬೆಂಗಳೂರು: ಸೇನಾ ಸಿಬ್ಬಂದಿ ಸೋಗಿನಲ್ಲಿ ಮನೆ ಬಾಡಿಗೆಗೆ ಪಡೆಯುವುದಾಗಿ ನಂಬಿಸಿದ ಸೈಬರ್ ಕಳ್ಳರು ಮಹಿಳೆಯೊಬ್ಬರಿಗೆ 1.4 ಲಕ್ಷ ರೂ. ವಂಚಿಸಿದ್ದಾರೆ.
ಬಸವನಪುರದ ನಿವಾಸಿ ಸುಷ್ಮಾ ಶ್ರೀರಾಮ್ (35) ವಂಚನೆಗೊಳಗಾದವರು.
ಸುಷ್ಮಾ ತಮ್ಮ ಸ್ವಂತ ಮನೆಯನ್ನು ಬಾಡಿಗೆಗೆ ನೀಡುವುದಾಗಿ ಜಾಹೀರಾತು ಹಾಕಿದ್ದರು. ಇತ್ತೀಚೆಗೆ ಪರಿಚಿತ ವ್ಯಕ್ತಿಯೊಬ್ಬರು ಸೇನಾ ಸೋಗಿನಲ್ಲಿ ಕರೆ ಮಾಡಿ ತಮಗೆ ಹೈದರಾಬಾದ್ನಿಂದ ಬೆಂಗಳೂರಿಗೆ ವರ್ಗಾವಣೆಯಾಗಿದ್ದು, ನಿಮ್ಮ ಮನೆ ಬಾಡಿಗೆಗೆ ಪಡೆಯುವುದಾಗಿ ನಂಬಿಸಿದ್ದರು. 2 ಲಕ್ಷ ರೂ. ಠೇವಣಿ ಮಾಡುವುದಾಗಿ ನಂಬಿಸಿದ್ದರು. ಮೊದಲು ನಮ್ಮ ಖಾತೆಗೆ 1 ರೂ. ಹಾಗೂ 5 ರೂ. ಜಮೆ ಮಾಡುವಂತೆ ಸೂಚಿಸಿದ್ದರು. ಜಮೆ ಮಾಡಿದ ಕೆಲ ಹೊತ್ತಿನಲ್ಲಿ ಸುಷ್ಮಾ ಬ್ಯಾಂಕ್ ಖಾತೆಗೆ 1 ರೂ. ಹಾಗೂ 5 ರೂ. ಜಮೆಯಾಗಿತ್ತು. ನಂತರ ಸುಷ್ಮಾ ಅವರಿಂದ ಹಂತ-ಹಂತವಾಗಿ 1.4 ಲಕ್ಷ ರೂ. ಹಾಕಿಸಿಕೊಂಡ ಸೈಬರ್ ಕಳ್ಳರು, ಅಸಲು ಹಣವನ್ನೂ ಹಿಂತಿರುಗಿಸದೆ, ಸಂಪರ್ಕಕ್ಕೂ ಸಿಗದೇ ವಂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.