B-town: ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದ ಹಿಂದಿ ಸಿನಿಮಾಗಳಿವು
Team Udayavani, Jul 29, 2023, 5:54 PM IST
ಮುಂಬಯಿ: ಬಾಲಿವುಡ್‌ನ ಕಳೆದ ಕೆಲ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಸಿನಿಮಾ ರಿಲೀಸ್ ಆದ ದಿನದಿಂದಲೇ ಬಾಕ್ಸ್ ಆಫೀಸ್ ನಲ್ಲಿ ಹಿಡಿತವನ್ನು ಸಾಧಿಸುತ್ತಿದೆ. ಇತ್ತೀಚೆಗೆ ತೆರೆಕಂಡ ಬಾಲಿವುಡ್‌ನ ಕೆಲ ಸಿನಿಮಾಗಳು ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದ ಸುತ್ತ ಇಲ್ಲಿದೆ ಒಂದು ವರದಿ.
ಈ ವಾರ ಕರಣ್ ಜೋಹರ್ ಅವರ “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ” ಸಿನಿಮಾ ರಿಲೀಸ್ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ ಕಳೆದ ಎರಡು ವಾರಗಳಿಂದ ಹಾಲಿವುಡ್ ಸಿನಿಮಾಗಳು ಹಿಂದಿ ಬೆಲ್ಟ್ ನಲ್ಲಿ ಮೋಡಿ ಮಾಡಿದೆ. ಈ ಪೈಪೋಟಿಯ ನಡುವೆಯೂ ಈ ವಾರ ತೆರೆಕಂಡ ಹಿಂದಿ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.
“ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ” ಸಿನಿಮಾದ 80 ಸಾವಿರ ಟಿಕೆಟ್ ಗಳು ಅಡ್ವಾನ್ಸ್ ಬುಕ್ ಆಗಿ ಮಾರಾಟವಾಗಿದೆ. ಪಿವಿಆರ್, ಐನಾಕ್ಸ್ ಮತ್ತು ಸಿನೆಪೊಲಿಸ್ ನಲ್ಲಿ ಅಡ್ವಾನ್ಸ್ ಬುಕಿಂಗ್ ಹೆಚ್ಚಾಗಿದೆ. ಸಿನಿಮಾ ರಿಲೀಸ್ ಆಗಿ ಮೊದಲ ದಿನವೇ 11.50 ಕೋಟಿ ರೂಪಾಯಿಯನ್ನು ಗಳಿಸಿದೆ. ಮೊದಲ ದಿನವೇ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಸಾಲಿನಲ್ಲಿ “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ” 6ನೇ ಸ್ಥಾನದಲ್ಲಿದೆ.
ಮೊದಲ ದಿನವೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾಗಳು:
- ಪಠಾಣ್: 55 ಕೋಟಿ ರೂ
- ಆದಿಪುರುಷ್: 32.5 ಕೋಟಿ ರೂ
- ತು ಜೂಟಿ ಮೈನ್ ಮಕ್ಕರ್: 14 ಕೋಟಿ ರೂ
- ಕಿಸಿ ಕಾ ಭಾಯಿ ಕಿಸಿ ಕಿ ಜಾನ್: 13.25 ಕೋಟಿ ರೂ
- ಭೋಲಾ: 10.50 ಕೋಟಿ ರೂ
- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ: 11.50 ಕೋಟಿ ರೂ.
- ಸತ್ಯಪ್ರೇಮ್ ಕಿ ಕಥಾ: 8.75 ಕೋಟಿ ರೂ
- ಕೇರಳ ಸ್ಟೋರಿ: 7.50 ಕೋಟಿ ರೂ
- ಶೆಹಜಾದಾ: 5.50 ಕೋಟಿ ರೂ
- ಜರಾ ಹಟ್ಕೆ ಜರಾ ಬಚ್ಕೆ: 5.25 ಕೋಟಿ ರೂ.
ಮುಂದಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ʼಗದರ್-2ʼ ನಂತಹ ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗಲಿದ್ದು, ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್ ಬಂಧನ? ಫೋಟೋ ವೈರಲ್
Rasha Thadani: ರವೀನಾ ಟಂಡನ್ ಮಗಳ ಬಿಟೌನ್ ಎಂಟ್ರಿ
ಹೊಟೇಲ್ ಧ್ವಂಸ: ನಟ ವೆಂಕಟೇಶ್, ರಾಣಾ ದಗ್ಗುಬಾಟಿ ವಿರುದ್ಧ ಕೇಸ್
Bollywood; ಆಲಿಯಾ ಭಟ್ ನಟನೆ ಚಿತ್ರದಲ್ಲಿ ನಟಿಸಲು ಒಪ್ಪದ ಶಾರೂಕ್!
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.