RTI ಅರ್ಜಿಗೆ ಸಿಕ್ಕಿದ್ದು 40,000 ಪುಟದ ಪ್ರತಿಕ್ರಿಯೆ!
Team Udayavani, Jul 30, 2023, 7:25 AM IST
ಇಂದೋರ್: ಮಾಹಿತಿ ಹಕ್ಕು ಕಾಯ್ದೆ ಬಂದ ಮೇಲೆ, ಸರ್ಕಾರಿ ಮಾಹಿತಿಗಾಗಿ ಅರ್ಜಿ ಹಾಕುವುದು ಮಾಮೂಲಿಯಾಗಿದೆ. ಇದಕ್ಕೆ ಬರುವ ಉತ್ತರಗಳು ಎಷ್ಟು ಪುಟ ಹೊಂದಿರಬಹುದು? ಮಧ್ಯಪ್ರದೇಶದ ಧರ್ಮೇಂದ್ರ ಶುಕ್ಲ ಹಾಕಿದ್ದ ಅರ್ಜಿಗೆ ಅಲ್ಲಿನ ಆರೋಗ್ಯಾಧಿಕಾರಿ 40,000 ಪುಟಗಳ ಉತ್ತರ ನೀಡಿದ್ದಾರೆ! ಧರ್ಮೇಂದ್ರ ಶುಕ್ಲ ಈ ಮಾಹಿತಿಗಳನ್ನು ತಮ್ಮ ಎಸ್ಯುವಿ ಕಾರಿನಲ್ಲಿ ತುಂಬಿಕೊಂಡು ಬಂದಿದ್ದಾರೆ.
ಇಂದೋರ್ನ ಶುಕ್ಲ, ಕೊರೊನಾ ಸಂದರ್ಭದಲ್ಲಿ ಔಷಧಿಗಳು, ಉಪಕರಣ ಸಾಮಗ್ರಿಗಳ ಖರೀದಿ ಸಂಬಂಧಿಸಿದಂತೆ ಟೆಂಡರ್ ಮತ್ತು ಬಿಲ್ ಪಾವತಿಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಇಂದೋರ್ನ ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯ ಅಧಿಕಾರಿ (ಸಿಎಂಎಚ್ಒ)ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಸಿಎಂಎಚ್ 40,000 ಪುಟಗಳ ದಾಖಲೆ ನೀಡಿದೆ. ಕಾನೂನಿನ ಅನ್ವಯ ಪ್ರತಿ ಪುಟಕ್ಕೆ 2 ರೂ.ಗಳನ್ನು ಧರ್ಮೇಂದ್ರ ಪಾವತಿಸಬೇಕಿತ್ತು. ಆದರೆ, ಮಾಹಿತಿ ಕೋರಿ 1 ತಿಂಗಳಾದರೂ ಪ್ರತಿಕ್ರಿಯೆ ನೀಡದ ಹಿನ್ನೆಲೆ ಅವರಿಗೆ ಉಚಿತವಾಗಿ ದಾಖಲೆಗಳನ್ನ ಒದಗಿಸಲಾಗಿದೆ.
ಇನ್ನು ಸರಿಯಾದ ಸಮಯಕ್ಕೆ ದಾಖಲೆ ನೀಡದೇ ಸರ್ಕಾರಕ್ಕೆ 80 ಸಾವಿರ ರೂ. ನಷ್ಟ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಹಿರಿಯ ಅಧಿಕಾರಿ ಆದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.