ಮನೆ ಮೇಲೆ ಸೌರಘಟಕ: ಸರ್ಕಾರಕ್ಕೇ ವಿದ್ಯುತ್ ಮಾರಾಟ
-ಹಸಿರು ವಿಶ್ವ ಸ್ಥಾಪನೆಗೆ ಹೈದರಾಬಾದ್ ವ್ಯಕ್ತಿಯ ಕೊಡುಗೆ
Team Udayavani, Jul 30, 2023, 7:41 AM IST
ಹೈದರಾಬಾದ್: ಕಲ್ಲಿದ್ದಲು, ತೈಲ, ಜೈವಿಕ ಅನಿಲದಂತಹ ಇನ್ನಿತರೆ ವಸ್ತುಗಳನ್ನು ಇಂಧನಕ್ಕಾಗಿ ಬಳಸುವ ಬದಲು ಪರಿಸರಸ್ನೇಹಿ ಇಂಧನದ ಪ್ರಮಾಣ ಹೆಚ್ಚಿಸಲು ಭಾರತ ಸರ್ಕಾರ ಪಣತೊಟ್ಟಿದೆ. ಇದಕ್ಕೆ ಪ್ರಜೆಗಳೂ ಸಾಥ್ ನೀಡುತ್ತಿದ್ದು, ಹೈದರಾಬಾದ್‌ನ ವ್ಯಕ್ತಿಯೊಬ್ಬರು ಸರ್ಕಾರಕ್ಕೇ ಸೌರ ವಿದ್ಯುತ್ ಮಾರಾಟ ಮಾಡುತ್ತಿರುವುದು ಇದಕ್ಕೊಂದು ಉತ್ತಮ ನಿದರ್ಶನವಾಗಿದೆ.
ಕರೆಂಟ್ ಹೋಯ್ತು ಎನ್ನುವ ಮಾತೇ ಇಲ್ಲದಂತೆ ಮನೆಗೆ ಸದಾಕಾಲ ವಿದ್ಯುತ್ ಪೂರೈಕೆಯಾಗುವಂಥ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಿರುವವರೇ ಹೈದರಾಬಾದ್ ನಿವಾಸಿ ಶಿವಕುಮಾರ್ ಸೇತುರಾಮನ್. ಇದರಿಂದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಪ್ರಕೃತಿಗೆ ಕೊಡುಗೆ ನೀಡುವುದಷ್ಟೇ ಅಲ್ಲದೇ, ಸರ್ಕಾರಕ್ಕೂ ಮಾರಾಟ ಮಾಡುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನೂ ಉತ್ತಮಗೊಳಿಸಿಕೊಳ್ಳುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಭಾರತ ಸರ್ಕಾರವು ಸೌರ ವಿದ್ಯುತ್ ಘಟಕಗಳ ಸ್ಥಾಪನೆಗೆ ನಾಗರಿಕರನ್ನು ಪ್ರೋತ್ಸಾಹಿಸುತ್ತಿದ್ದು, ಅದಕ್ಕಾಗಿಯೇ ಕೆಲ ಅನುಮೋದಿತ ಏಜೆನ್ಸಿಗಳು ಕೂಡ ಇವೆ. ಒಂದಷ್ಟು ಉಳಿತಾಯದ ಹಣ ಮತ್ತು ಮನೆ ಮೇಲೆ ಸೂರ್ಯನ ಬೆಳಕು ಚೆನ್ನಾಗಿ ಬೀಳುವಂಥ ಮಹಡಿ ಇದ್ದರೆ ಸಾಕು, ಅರ್ಜಿ ಮಂಜೂರಾತಿ, ಸೌರ ಫಲಕಗಳ ಅಳವಡಿಕೆ ಎಲ್ಲವೂ ಏಜೆನ್ಸಿಗಳೇ ವಹಿಸಿಕೊಳ್ಳುತ್ತವೆ ಎಂದಿದ್ದಾರೆ..
ಖರ್ಚು ವೆಚ್ಚವೆಷ್ಟು?
ಪ್ರತಿ ಸೌರಫಲಕ ದಿನವೊಂದಕ್ಕೆ 4ರಿಂದ 5 ಯೂನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ನಾವೀಗ 5 ಪ್ಯಾನೆಲ್‌ಗಳಿಂದ ದಿನಕ್ಕೆ 20ರಿಂದ 22 ಯೂನಿಟ್ ಹಾಗೂ ತಿಂಗಳಿಗೆ 600 ಯೂನಿಟ್‌ಗಳವರೆಗೆ ವಿದ್ಯುತ್ ಉತ್ಪಾದಿಸಿ, ಮನೆ ಬಳಕೆಗೆ ಮಾತ್ರವಲ್ಲದೇ, ಸರ್ಕಾರಕ್ಕೂ ಮಾರಾಟ ಮಾಡುತ್ತಿದ್ದೇವೆ. ಈ ಸೌರ ಘಟಕ ಸ್ಥಾಪನೆಗೆ ನಮಗೆ ತಗುಲಿದ ವೆಚ್ಚ 3.2 ಲಕ್ಷ ರೂ. ಮಾತ್ರವೆಂದು ಶಿವಕುಮಾರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.