ವಿದ್ಯುತ್ ಅವಘಡ: ತಪ್ಪಿದ ಭಾರಿ ಅನಾಹುತ: 72 ಮನೆಗಳಿಗೆ ಹಾನಿ: ಗೃಹೋಪಯೋಗಿ ವಸ್ತುಗಳು ಭಸ್ಮ

ಸ್ಥಳಕ್ಕೆ ಅಧಿಕಾರಿಗಳು ದೌಡು : ಆತಂಕದಲ್ಲಿ ಗ್ರಾಮಸ್ಥರು

Team Udayavani, Jul 30, 2023, 8:59 PM IST

ವಿದ್ಯುತ್ ಅವಘಡ: ತಪ್ಪಿದ ಭಾರಿ ಅನಾಹುತ: 72 ಮನೆಗಳಿಗೆ ಹಾನಿ: ಗೃಹೋಪಯೋಗಿ ವಸ್ತುಗಳು ಭಸ್ಮ

ಕುಣಿಗಲ್ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಪಡೆದಿದ್ದ 72 ಮನೆಗಳ ವಿದ್ಯುತ್ ಮೀಟರ್, ಗೃಹೋಪಯೋಗಿ ವಸ್ತುಗಳಿಗೆ ಸುಟ್ಟು ಅಪಾರ ಹಾನಿಯಾಗಿ, ಎಮ್ಮೆ ಮೃತಪಟ್ಟು, ಮಹಿಳೆಯೋರ್ವಳು ಗಾಯಗೊಂಡು, ಗ್ರಾಮವೇ ಬೆಚ್ಚುಬಿದ್ದ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಎಲೆಕಡಕಲು ಗ್ರಾಮದಲ್ಲಿ ಭಾನುವಾರ ನಡೆದಿದೆ,

ಎಲೆಕಡಕಲು ಗ್ರಾಮದಲ್ಲಿ ಹಲವು ವರ್ಷಗಳಿಂದ ಸುಮಾರು 80 ಮನೆಗಳಿಗೆ ನಿರಂತರ ಜ್ಯೋತಿ ಯೋಜನಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.ಭಾನುವಾರ ಗ್ರಾಮದಲ್ಲಿ ಹಾದು ಹೊಗಿದ್ದ 11 ಕೆ.ವಿ ವಿದ್ಯುತ್ ಲೈನ್ ತುಂಡಾಗಿ, ನಿರಂತರ ಜ್ಯೋತಿ ಯೋಜನೆಗೆ ಅಳವಡಿಸಿದ ಲೈನ್ ಮೇಲೆ ಬಿದ್ದ ಕಾರಣ ಹೈ ವೋಲ್ಟೇಜ್ ಪಾಸ್ ಆಗಿ ಗ್ರಾಮದ ಮನೆಗಳ ಮೀಟರ್, ಟಿ.ವಿ, ವಾರ್ಷಿಂಗ್ ಮಿಷನ್, ಫ್ರಿಜ್, ಬಲ್ಬ್, ಮನೆಯ ವಿದ್ಯುತ್ ವೈರಿಂಗ್ ಸುಟ್ಟು ಕರಕಲಾಗಿವೆ.

ಕಂಪಿಸಿದ ಭೂಮಿ : ಹೈ ವೋಲ್ಟೇಜ್‌ಗೆ ಕೆಲ ಮನೆಗಳ ನೆಲ ಸಹ ಕಂಪಿಸಿದ್ದು ಗ್ರಾಮಸ್ಥರು ಮನೆಯಿಂದ ಹೊರಗೆ ಓಡಿ ಬಂದು ತಮ್ಮ ಪ್ರಾಣ ರಕ್ಷಿಸಿಕೊಂಡಿದ್ದಾರೆ, ಗ್ರಾಮದ ಪುಟ್ಟತಾಯಮ್ಮ ಎಂಬುವ ಕೈಗೆ ವಿದ್ಯುತ್ ಸ್ಪರ್ಷಿಸಿದ್ದು ಗಾಯಗೊಂಡಿದ್ದಾರೆ.

ನರಳಿ ಸತ್ತ ಎಮ್ಮೆ : ಗ್ರಾಮದ ರಮೇಶ್ ಎಂಬುವರು ಮನೆಯ ಮುಂಭಾಗದ ಲೈಕ್ ಕಂಬದ ಪಕ್ಕದಲ್ಲಿ ಎಮ್ಮೆಯನ್ನು ಕಟ್ಟಿಹಾಕಲಾಯಿತು, ವಿದ್ಯುತ್ ಸ್ಪರ್ಶಕ್ಕೆ ಎಮ್ಮೆ ನರಳಿ ನರಳಿ ಸತ್ತಿದೆ.ಇದೇ ವೇಳೆ ಮನೆ ಹೊರಗೆ ಮರದ ಗೂಡಕ್ಕೆ ಕಟ್ಟಿದ ಹಸು, ಕರು, ಮೇಕೆಯ ಕತ್ತಿನ ಹಗ್ಗವನ್ನು ಕುಡುಗೋಲಿನಿಂದ ಕ್ಯೋಂದು ಅವುಗಳನ್ನು ರಕ್ಷಣೆ ಮಾಡಿದ್ದಾರೆ.

ಬೆಸ್ಕಾಂ ನಿರ್ಲಕ್ಷ್ಯ ಆರೋಪ : ಇದೇ ರೀತಿ ಹಲವು ಭಾರಿ ಗ್ರಾಮದಲ್ಲಿ ಹೈವೋಲ್ಟೇಜ್ ಸಂಭವಿಸಿ ಮನೆಯ ವಿದ್ಯುತ್ ದೀಪಗಳು ಹೊಡೆದು ಹೋಗಿದ್ದವು, ಈ ಸಂಬಂಧ ಹಲವು ಭಾರಿ ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ, ಇದರಿಂದ ಭಾನುವಾರ ಮತ್ತೊಂದು ದೊಡ್ಡ ಅನಾಹುತವೇ ಸಂಭವಿಸಿದೆ ಎಂದು ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ. ತಪ್ಪಿಸ್ಥ ಬೆಸ್ಕಾಂ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಪಡಿಸಿದ್ದಾರೆ.

ಕತ್ತಲಲ್ಲಿ ಜನ : ವಿದ್ಯುತ್ ಅವಘಡದಿಂದ ಗ್ರಾಮದ ಹಲವು ಮನೆಗಳಲ್ಲಿ ವಿದ್ಯುತ್ ಮೀಟರ್ ಬೋರ್ಟ್ ಹಾಗೂ ವೈರಿಂಗ್ ಸುಟ್ಟು ಹೋದ ಕಾರಣ ಇಡೀ ರಾತ್ರಿ ಜನರು ಕತ್ತಲಲ್ಲಿ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸ್ಥಳಕ್ಕೆ ಅಧಿಕಾರಿಗಳ ದೌಡು : ಘಟನೆ ನಡೆದ ಎಲೆಕಡಕಲು ಗ್ರಾಮಕ್ಕೆ ಡಿವೈಎಸ್‌ಪಿ, ಲಕ್ಷ್ಮಿಕಾಂತ್, ಬೆಸ್ಮಾಂ ಎಇಇ ವೀರಭದ್ರಾಚಾರ್ ಭೇಟಿ ನೀಡಿ ಘಟನೆ ಸಂಬಂಧ ಕ್ರಮಕೈಗೊಂಡು ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ.

ಪರಿಹಾರಕ್ಕೆ ಒತ್ತಾಯ : ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೆಚ್.ಡಿ.ರಾಜೇಶ್‌ಗೌಡ ಘಟನೆಯನ್ನು ಪರಿಶೀಲಿಸಿದರು. ಅಧಿಕಾರಿಗಳ ಎಡವಟ್ಟಿನಿಂದ್ದಾಗಿ ಇಂತಹ ದುರಂತಗಳು ಸಂಬವಿಸುತ್ತಿವೆ. ಗ್ರಾಮಸ್ಥರು ಎಚ್ಚರಗೊಳ್ಳದಿದ್ದರೇ ಭಾರಿ ಅನಾಹುತ ಆಗುತಿತ್ತು ಇದಕ್ಕೆ ಯಾರನ್ನೂ ಕಾರಣರಾಗಿ ಮಾಡಬೇಕೆಂದು ಕಿಡಿಕಾರಿದರು. ತಕ್ಷಣ ಬೆಸ್ಕಾಂ ಹಿರಿಯ ಅಧಿಕಾರಿಗಳು ಅನಾಹುತ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಆಗಿರುವ ನಷ್ಟವನ್ನು ಪರಿಶೀಲಿಸಿ ಅವರಿಗೆ ಸೂಕ್ತ ಪರಿಹಾರ ಕೋಡಬೇಕೆಂದು ಒತ್ತಾಯಿಸಿದರು.

11 ಕೆ.ವಿ ವಿದ್ಯುತ್ ಲೈನ್ ಕಟ್ಟಾಗಿ, ನಿರಂತಜ್ಯೋತಿ ಸರಬರಾಜಿನ ಲೈನ್ ಮೇಲೆ ಬಿದ್ದು ಹೈ ವೋಲ್ಟೇಜ್ ಪಾಸ್ ಆಗಿ ಕೆಲ ಮನೆಗಳಿಗೆ ತೊಂದರೆಯಾಗಿದೆ, ತಕ್ಷಣಕ್ಕೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು, ಹಾನಿ ಸಂಬಂಧ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಪರಿಹಾರ ನೀಡುವ ಸಂಬಂಧ ಕ್ರಮಕೈಗೊಳ್ಳಲಾಗುವುದು
-ಪುರುಷೋತ್ತಮ್
ಬೆಸ್ಕಾಂ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

4-pavagada

Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು

1-pavagada

Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.