ಕಸ್ತೂರಿ ರಂಗನ್ ವರದಿಗೆ ಹಸಿರು ನಿಶಾನೆ ಸಾಧ್ಯತೆ: ಆತಂಕ
Team Udayavani, Jul 31, 2023, 7:34 AM IST
ಸಕಲೇಶಪುರ: ಪಶ್ಚಿಮ ಘಟ್ಟ ಸಂರಕ್ಷಣೆಗಾಗಿ ಡಾ.ಕಸ್ತೂರಿರಂಗನ್ ನೀಡಿದ್ದ ವಿವಾದಿತ ವರದಿಯನ್ನು ಪ್ರಬಲ ವಿರೋಧಗಳ ನಡುವೆಯೂ ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವುದರಿಂದ ತಾಲೂಕಿನ 34 ಗ್ರಾಮಗಳ ಜನತೆಗೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಜನ ವಸತಿ ಪ್ರದೇಶಗಳನ್ನು ಕಸ್ತೂರಿ ರಂಗನ್ ವರದಿಯಿಂದ ಹೊರಗಿಡಬೇಕು ಹಾಗೂ ಈ ವರದಿ ಅವೈಜ್ಞಾನಿಕವಾಗಿರುವುದರಿಂದ ಯಾವುದೇ ಕಾರಣಕ್ಕೂ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬಾರದೆಂದು ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಬೆಂಗಳೂರಿನಲ್ಲಿ ಈಚೆಗೆ ಆಯೋಜಿಸಿದ್ದ ಅಂತರ ಪ್ರಭೇದಗಳ ಸಮಾವೇಶ ಉದ್ಘಾಟಿಸಿ ಮಾತನಾಡಿರುವ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ನಮ್ಮ ಸರ್ಕಾರ ಪಶ್ಚಿಮ ಘಟ್ಟಗಳು ಮತ್ತು ಅದರ ಜೀವವೈವಿಧ್ಯಗಳ ರಕ್ಷಣೆಗಾಗಿ ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸಲು ಬದ್ಧವಾಗಿದೆ. ಸಂಜಯ್ ಕುಮಾರ್ ನೇತೃತ್ವದ 2ನೇ ಸಮಿತಿ ಡಿಸೆಂಬರ್ ವೇಳೆಗೆ ವರದಿಯನ್ನು ಜಾರಿಗೊಳಿಸಲು ನಿರೀಕ್ಷೆಯಿದ್ದು ಅದರ ಆಧಾರದ ಮೇಲೆ ಸರ್ಕಾರ ಮತ್ತಷ್ಟು ಪ್ರಜ್ಞಾಪೂರ್ವಕವಾಗಿ ವರದಿ ಜಾರಿಗೆ ಕೆಲಸ ಮಾಡಲಿದೆ ಎಂದಿದ್ದಾರೆ. ಇದರಿಂದ ಸಕಲೇಶಪುರ ತಾಲೂಕಿನ 34 ಗ್ರಾಮಗಳ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ.
ಗುಜರಾತ್ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ಹಾಸನ, ಕೊಡಗು, ಚಿಕ್ಕಮಗಳೂರು ವ್ಯಾಪಿಸಿರುವ ಪಶ್ಚಿಮ ಘಟ್ಟದ 56,874 ಚದರ ಕಿ.ಮೀ. ವಿಸ್ತೀರ್ಣದ ಪ್ರದೇಶವನ್ನು ಅತಿ ಸೂಕ್ಷ್ಮ ಪ್ರದೇಶವೆಂದು ಕಸ್ತೂರಿ ರಂಗನ್ ಸಮಿತಿ ವರದಿ ನೀಡಿದೆ. ಅದರಲ್ಲಿ ಮಹಾರಾಷ್ಟ್ರದ 2159, ಕರ್ನಾಟಕದ 1576, ತಮಿಳುನಾಡಿನ 135, ಕೇರಳದ 123, ಗೋವಾದ 99,ಗುಜರಾತ್‌ನ 64 ಗ್ರಾಮಗಳು ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶಗಳಾಗಿ ಯುನೆಸ್ಕೋದಿಂದ ಗುರುತಿಸಿಕೊಂಡಿದೆ.
ತಾಲೂಕಿನ ಸುಮಾರು 34 ಹಳ್ಳಿಗಳನ್ನು ಪರಿಸರ ಸೂಕ್ಷ್ಮವಲಯ ಎಂದು ಗುರುತಿಸಲಾಗಿದ್ದು, ಈ ಪೈಕಿ ಹಾನುಬಾಳು ಹೋಬಳಿಯ ಅಚ್ಚನಹಳ್ಳಿ, ಮರಗುಂದ, ಅಗನಿ, ಕುಮಾರಹಳ್ಳಿ, ಹೊಡಚಹಳ್ಳಿ, ಕಾಡುಮನೆ, ದೇವಿಹಳ್ಳಿ, ಕೆಸಗನಹಳ್ಳಿ, ಕಾಡುಮನೆ ಎಸ್ಟೇಟ್, ಹೆಗ್ಗದ್ದೆ, ಆಲುವಳ್ಳಿ, ಕಡಗರವಳ್ಳಿ. ಹೆತ್ತೂರು ಹೊಬಳಿಯ ಕಾಗೆನರಿ, ಎಡಕುಮೇರಿ, ಹೊಂಗಡಹಳ್ಳ, ಬಾಳೆಹಳ್ಳ, ಹೊಸಹಳ್ಳಿ, ಮರ್ಕಳ್ಳಿ, ಜೇಡಿಗದ್ದೆ, ಬೆಟ್ಟಕುಮೇರಿ, ಎತ್ತಳ್ಳ, ಅತ್ತಿಹಳ್ಳಿ, ಅರಿನಿ, ಯರ್ಗಳ್ಳಿ, ಮರ್ಗತ್ತೂರು, ವನಗೂರು, ಮಂಕನಹಳ್ಳಿ, ಅರಿನಿ ಎಸ್ಟೇಟ್, ಬಾಣಗೆರೆ ಗ್ರಾಮಗಳು ವರದಿ ಪಟ್ಟಿಯಲ್ಲಿವೆ.
ಕಸ್ತೂರಿರಂಗನ್ ವರದಿ ಜಾರಿಯಿಂದ ತಾಲೂಕಿನ ಶೇ. 37 ಭಾಗ ಸೂಕ್ಷ್ಮವಲಯಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಈ ಯೋಜನೆಯಲ್ಲಿ ಕೆಂಪು, ಕೇಸರಿ ಹಾಗೂ ಹಸಿರು ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು ಯಾವುದೆ ರೀತಿಯ ಕಾರ್ಖಾನೆಗಳನ್ನು ತೆರೆಯಲು ಅವಕಾಶವಿರುವುದಿಲ್ಲ. ಇದಲ್ಲದೆ ರೈತರು ತಮ್ಮ ಕೃಷಿ ಭೂಮಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು, ಔಷಧಿಗಳನ್ನು ಬಳಸಲು ಅವಕಾಶವಿರುವುದಿಲ್ಲ, ಕಾಫಿ ತೋಟಗಳಲ್ಲಿ ಮರಗಳನ್ನು ಕಡಿಯಲು ಅವಕಾಶವಿರುವುದಿಲ್ಲ, ಮರಳು ತೆಗೆಯುವಂತಿರುವುದಿಲ್ಲ, ವಿದ್ಯುತ್ ಉತ್ಪತ್ತಿ ಮಾಡುವಂತಿಲ್ಲ, ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಾಣ ಮಾಡಲು ಅವಕಾಶವಿರುವುದಿಲ್ಲ ಸೇರಿದಂತೆ ಇನ್ನು ಹಲವಾರು ನಿಭಂದನೆಗಳನ್ನು ಹೇರಲಾಗಿದ್ದು ಇದರಿಂದ ಈ ವರದಿ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳ ಜನ ಬದುಕಲು ಅಸಾಧ್ಯವಾಗುವುದಲ್ಲಿ ಅನುಮಾನವಿಲ್ಲ.
ದನ ಮೇಯಿಸಲು, ಸೌದೆ ಕಡಿಯಲು ಸೇರಿದಂತೆ ಸಣ್ಣಪುಟ್ಟ ಅಗತ್ಯಗಳಿಗೆ ಕಾಡುಗಳಿಗೆ ಅನಿವಾರ್ಯವಾಗಿ ಹೋಗಬೇಕಾಗುವ ಸಂಧರ್ಭದಲ್ಲಿ ಜನರು ಕಾಡು ಪ್ರವೇಶ ಮಾಡಲು ಅವಕಾಶವಿಲ್ಲದಂತಾಗುತ್ತದೆ.
ಯೋಜನೆ ಕುರಿತು ಜನರಿಗೆ ಮಾಹಿತಿಯಿಲ್ಲ: ಕಸ್ತೂರಿ ರಂಗನ್ ವರದಿಯಿಂದ ಏನಾಗುತ್ತದೆ ಎಂಬುದು ಜನರಿಗೆ ಯಾವುದೆ ಮಾಹಿತಿಯಲ್ಲ. ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳಲ್ಲಿ ರೆಸಾರ್ಟ್ ಹಾಗೂ ಹೋಂಸ್ಟೇಗಳು ನಿರ್ಮಾಣವಾಗಿದ್ದು ಒಂದು ವೇಳೆ ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಈ ರೆಸಾರ್ಟ್ ಹಾಗೂ ಹೋಂಸ್ಟೇಗಳ ಕತೆಗಳೇನು? ದೊಡ್ಡ ದೊಡ್ಡ ಮನೆಗಳನ್ನು ನಿರ್ಮಾಣ ಮಾಡಲು ಅವಕಾಶ ಕೊಡುತ್ತಾರ, ಈ ಯೋಜನೆ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಶಾಲೆ , ಅಂಗನವಾಡಿ, ಆರೋಗ್ಯ ಕೇಂದ್ರಗಳಿದ್ದು ಇದನ್ನು ಏನು ಮಾಡುತ್ತಾರೆ ಎಂಬುದರ ಕುರಿತು ಯಾರಿಗೂ ಮಾಹಿತಿ ಇಲ್ಲ.
ಎತ್ತಿನಹೊಳೆ, ಜಲವಿದ್ಯುತ್ ಯೋಜನೆಗಳ ಕಥೆ ಏನು: ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿರುವ ಹಲವು ಗ್ರಾಮಗಳಲ್ಲಿ ಎತ್ತಿನಹೊಳೆ ಯೋಜನೆಗಾಗಿ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದ್ದು ಹಲವಡೆ ಜಲವಿದ್ಯುತ್ ಉತ್ಪಾದನ ಘಟಕಗಳು ಸಹ ಇದೆ. ರಾಜ್ಯ ಸರ್ಕಾರ ಇದೇ ನವೆಂಬರ್ 2 ರಿಂದ ಎತ್ತಿನಹೊಳೆ ಯೋಜನೆಯ ಟ್ರಯಲ್ ರನ್ ಮಾಡುತ್ತೇವೆ ಎಂದು ಹೇಳಿದ್ದು, ಮತ್ತೂಂದೆಡೆ ಅರಣ್ಯ ಸಚಿವರು ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ಒಂದು ವೇಳೆ ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ಎತ್ತಿನಹೊಳೆ ಯೋಜನೆಯಿಂದ ಬರ ಪೀಡಿತ ಪ್ರದೇಶಗಳಿಗೆ ನೀರು ಕೊಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವವಾಗಿದೆ.
ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ಕೇಂದ್ರ ಸರ್ಕಾರದ ಶಿರಾಡಿ ಸುರಂಗ ಹೈವೆ ಮಾರ್ಗ ಅನುಮಾನ: ಕಸ್ತೂರಿ ರಂಗನ್ ವರದಿ ವ್ಯಾಫ್ತಿಯಲ್ಲಿ ತಾಲೂಕಿನ ಹೆಗ್ಗದ್ದೆ, ಆಲುವಳ್ಳಿ ಗ್ರಾಮಗಳು ಬರುವುದರಿಂದ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಶಿರಾಡಿ ಸುರಂಗ ಮಾರ್ಗ ಅನುಷ್ಠಾನಕ್ಕೆ ಬರುತ್ತದೋ ಇಲ್ಲವೊ ಎಂಬ ಪ್ರಶ್ನೆ ಉದ್ಬವವಾಗಿದೆ.
ಜನವಸತಿ ಪ್ರದೇಶಗಳನ್ನು ಯೋಜನಾ ವ್ಯಾಪ್ತಿಯಿಂದ ಹೊರ ಇಡಬೇಕೆಂಬ ಒತ್ತಡವನ್ನು ಬೆಳೆಗಾರ ಸಂಘಟನೆಗಳು ಸರ್ಕಾರದ ಮೇಲೆ ಹೇರುತ್ತಿದ್ದರು ಸಹ ಇದೀಗ ಅರಣ್ಯ ಸಚಿವರು ಕಸ್ತೂರಿ ರಂಗನ್ ವರದಿ ಪರ ಬ್ಯಾಟಿಂಗ್ ಮಾಡಿರುವುದು ಜನರ ಆತಂಕ ಭುಗಿಳೇಲಲು ಕಾರಣವಾಗಿದೆ.
ಇದೇ ವೇಳೆ ಮುಖ್ಯಮಂತ್ರಿಗಳು ವನ್ಯಪ್ರಾಣಿಗಳ ಉಪಟಳವಿರುವ ಕಡೆ ರೈತರ ಭೂಮಿಗಳನ್ನು ಗಣಿ ಕಂಪನಿಗಳು ಖರಿದೀಸಬೇಕು ಎಂದಿರುವುದು ಹಲುವ ಅನುಮಾನಗಳಿಗೆ ಕಾರಣವಾಗಿದೆ. ಒಂದು ಕಡೆ ರಾಜ್ಯ ಸರ್ಕಾರ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಜಲವಿದ್ಯುತ್ ಯೋಜನೆಗಳು, ಎತ್ತಿನಹೊಳೆ ಯೋಜನೆಗಾಗಿ ವ್ಯಾಪಕ ಪರಿಸರವನ್ನು ಮಲೆನಾಡು ಭಾಗದಲ್ಲಿ ಹಾಳುಗೆಡವಿದ್ದು ಇದೀಗ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವುದು ಹಾಸ್ಯಸ್ಪಾದವಾಗಿದೆ.
ಕೆ.ಬಿ ಕೃಷ್ಣಪ್ಪ, ಕಾರ್ಯದರ್ಶಿ, ಕರ್ನಾಟಕ ಬೆಳೆಗಾರರ ಒಕ್ಕೂಟ: ಮಲೆನಾಡಿಗರನ್ನು ಸಂಪೂರ್ಣವಾಗಿ ಒಕ್ಕಲೆಬ್ಬಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಕಸ್ತೂರಿ ರಂಗನ್ ವರದಿ ಕುರಿತು ಪಂಚಾಯತಿಗಳಿಗೆ ಮಾಹಿತಿ ನೀಡಬೇಕು, ನಂತರ ಜನಭಿಪ್ರಾಯ ಸಭೆ ಕರೆಯಬೇಕು. ಆದರೆ ಯಾವುದನ್ನು ಮಾಡದೆ ಯೋಜನೆ ಅನುಷ್ಠಾನಗೊಳಿಸಲು ಮುಂದಾದರೆ ಉಗ್ರ ಹೋರಾಟ ಮಾಡಲಾಗುತ್ತದೆ.
ಸುಧೀಶ್, ವಕೀಲರು: ಪರಿಸರ ಸಂರಕ್ಷಣೆಗಾಗಿ ಕಸ್ತೂರಿ ರಂಗನ್ ವರದಿ ಅವಶ್ಯವಿದೆ. ಆದರೆ ಜನಸಾಮಾನ್ಯರಿಗೆ ಯೋಜನೆ ಕುರಿತು ಯಾವುದೆ ಮಾಹಿತಿ ನೀಡದೆ ಯೋಜನೆಯನ್ನು ಅನುಷ್ಠಾನ ಮಾಡುವುದು ಸರಿಯಲ್ಲ. ಮೊದಲಿಗೆ ಹೆಲ್½ ಡೆಸ್ಕ್ಗಳನ್ನು ಮಾಡಿ ಜನರಿಗೆ ಮಾಹಿತಿ ನೀಡಬೇಕು. ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ಆಲುವಳ್ಳಿ, ಹೆಗ್ಗದ್ದೆ ಗ್ರಾಮಗಳಿದ್ದು ಆದರೆ ಕೇಂದ್ರ ಸರ್ಕಾರ ಇಲ್ಲಿ ಸುರಂಗ ಮಾರ್ಗದ ಮೂಲಕ ರಸ್ತೆ ನಿರ್ಮಾಣ ಮಾಡಲು ಹೊರಟಿದೆ. ಇದು ಯಾವ ರೀತಿ ಸಾಧ್ಯ.
30ಎಸ್.ಕೆ.ಪಿ.ಪಿ 2 ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ಬರುವ ಸಕಲೇಶಪುರ ತಾಲೂಕಿನ ಕಾಡುಮನೆ ಟೀ ಎಸ್ಟೇಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.