ಉಗ್ರರಿಗೆ ಆಶ್ರಯ ನೀಡಿದ್ದ ಎಂಜಿನಿಯರ್‌ ಸೆರೆ

ಮಹಾರಾಷ್ಟ್ರ ಎಟಿಎಸ್‌ ಕಾರ್ಯಾಚರಣೆ ನಿಪ್ಪಾಣಿ, ಸಂಕೇಶ್ವರದ ಸಿಸಿ ಕೆಮರಾಗಳ ತಪಾಸಣೆ

Team Udayavani, Jul 31, 2023, 6:21 AM IST

ಉಗ್ರರಿಗೆ ಆಶ್ರಯ ನೀಡಿದ್ದ ಎಂಜಿನಿಯರ್‌ ಸೆರೆ

ಬೆಳಗಾವಿ: ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಅಂಬೋಲಿ ಅರಣ್ಯದಲ್ಲಿ ಬಾಂಬ್‌ ಸ್ಫೋಟ ಟ್ರಯಲ್‌ ನಡೆಸಿದ್ದ ಶಂಕಿತ ಉಗ್ರರಿಗೆ ಆಶ್ರಯ ನೀಡಿ, ಆರ್ಥಿಕ ಸಹಾಯ ಮಾಡಿದ್ದ ಮೆಕ್ಯಾನಿಕಲ್‌ ಎಂಜಿನಿಯರ್‌ನನ್ನು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ. ಜತೆಗೆ ಇತ್ತ ನಿಪ್ಪಾಣಿ, ಸಂಕೇಶ್ವರದಲ್ಲಿ ಉಗ್ರರು ನೆಲೆಸಿದ್ದ
ಸ್ಥಳಗಳಲ್ಲಿಯ ಸಿಸಿ ಕೆಮರಾ ದೃಶ್ಯಗಳ ತುಣುಕುಗಳನ್ನು ಸಂಗ್ರಹಿಸುತ್ತಿದೆ.

ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಮಂಡಣಗಡ ತಾಲೂಕಿನ ಪಣದೇರಿ ಗ್ರಾಮದ ಸಿಮಾಬ್‌ ನಸರುದ್ದೀನ್‌ ಖಾಜಿ (27) ಎಂಬಾತನನ್ನು ಎಟಿಎಸ್‌ ತಂಡ ಬಂ ಧಿಸಿದ್ದು, ಆತನನ್ನು ನ್ಯಾಯಾಲಯ ಆ.5ರ ವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ಸಿಮಾಬ್‌ ಖಾಜಿ ಖಾಸಗಿ ಕಂಪೆನಿಯಲ್ಲಿ ವಾರ್ಷಿಕ 15 ಲಕ್ಷ ರೂ. ವೇತನ ಪಡೆಯುತ್ತಿದ್ದ. ತಾನು ಗಳಿಸಿದ ಸಂಬಳದಲ್ಲಿ ಸ್ವಲ್ಪ ಹಣವನ್ನು ನಿಷೇಧಿ ತ ಐಸಿಸ್‌ ಉಗ್ರ ಸಂಘಟನೆಗಳ ಚಟುವಟಿಕೆಗಳಿಗೆ ನೀಡುತ್ತಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.

ಪುಣೆಯಿಂದ ಅಂಬೋಲಿ ಅರಣ್ಯಕ್ಕೆ ಬಂದು ಬಾಂಬ್‌ ಸ್ಫೋಟದ ಟ್ರಯಲ್‌ ನಡೆಸಿದ್ದ ಇಬ್ಬರು ಶಂಕಿತ ಉಗ್ರರು ನೆಲೆಸಿದ್ದ ನಿಪ್ಪಾಣಿ ಹಾಗೂ ಸಂಕೇಶ್ವರದ ಆಶ್ರಯತಾಣಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ನಿಪ್ಪಾಣಿ, ಸಂಕೇಶ್ವರದಲ್ಲಿ ಎಷ್ಟು ದಿನ ಉಳಿದುಕೊಂಡಿದ್ದರು, ಇವರಿಗೆ ಆಶ್ರಯ ನೀಡಿ ದವರು ಯಾರು ಎಂಬ ಮಾಹಿತಿ ಪಡೆಯುತ್ತಿದ್ದಾರೆ.

2008ರ ನ.26ರಂದು ಮುಂಬಯಿ ಮೇಲೆ ನಡೆದಿದ್ದ ದಾಳಿ ಮಾದರಿಯಲ್ಲಿ ಮುಂಬಯಿಯಲ್ಲಿ ಮತ್ತೂಂದು ದಾಳಿ ನಡೆಸಲು ಶಂಕಿತರು ಯೋಜಿಸಿದ್ದರು. ಮುಂಬಯಿಯ ಛಾಪಡ್‌ ಹೌಸ್‌ನ ವಿವಿಧ ಚಿತ್ರಗಳು ಶಂಕಿತ ಉಗ್ರರಿಂದ ಸಿಕ್ಕಿವೆ.

ಈಗಾಗಲೇ ಎಟಿಎಸ್‌ ಬಂಧನದಲ್ಲಿರುವ ಮಧ್ಯಪ್ರದೇಶ ಮೂಲದ ಮೊಹ್ಮದ್‌ ಇಮ್ರಾನ್‌ ಮೊಹ್ಮದ್‌ ಯುಸೂಫ್ ಖಾನ್‌ ಉಫ್ì ಅಮೀರ್‌ ಅಬ್ದುಲ್‌ ಹಮೀದ್‌ ಖಾನ್‌ ಹಾಗೂ ಮೊಹ್ಮದ್‌ ಯುನೂಸ್‌ ಮೊಹ್ಮದ್‌ ಯಾಕೂಬ್‌ ಸಾಕಿ ಎಂಬಿಬ್ಬರು ವಿಚಾರಣೆ ವೇಳೆ ವಿಧ್ವಂಸಕ ಕೃತ್ಯ ನಡೆಸುವ ಅನೇಕ ವಿಷಯಗಳನ್ನು ಬಾಯಿ ಬಿಡುತ್ತಿದ್ದಾರೆ. ಅಂಬೋಲಿ ಅರಣ್ಯ ಪ್ರದೇಶದಲ್ಲಿ ಜನ ಸಂಚಾರ ಇರುವುದಿಲ್ಲ. ಹೀಗಾಗಿ ಇಲ್ಲಿ ಬಾಂಬ್‌ ಸ್ಫೋಟ ಪ್ರಾಯೋಗಿಕ ಪರೀಕ್ಷೆ ನಡೆಸಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಜತೆಗೆ ರತ್ನಾಗಿರಿ, ಕೊಲ್ಲಾಪುರ, ಸತಾರಾಗಳಲ್ಲೂ ಬಾಂಬ್‌ ಸ್ಫೋಟ ಟ್ರಯಲ್‌ ನಡೆಸಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

ಬೆಳಗಾವಿ: ಪ್ರಾಚೀನ ಕಾಲದ ಬಾವಿಗಳಿಂದ ಪ್ರಸಿದ್ಧಿ ಹೊಂದಿದ ಅರಭಾಂವಿ

ಬೆಳಗಾವಿ: ಪ್ರಾಚೀನ ಕಾಲದ ಬಾವಿಗಳಿಂದ ಪ್ರಸಿದ್ಧಿ ಹೊಂದಿದ ಅರಭಾಂವಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.