ಕಾಡ ಜನರ ಆತಂಕದ ಕಾರ್ಮೋಡ ಕರಗುತ್ತಲೇ ಇಲ್ಲ!

ಕಸ್ತೂರಿ ಕಂಟಕ, ಅರಣ್ಯ ಸಚಿವರ ಹೇಳಿಕೆ ತಂದ ಆತಂಕ

Team Udayavani, Jul 31, 2023, 7:45 AM IST

ಕಾಡ ಜನರ ಆತಂಕದ ಕಾರ್ಮೋಡ ಕರಗುತ್ತಲೇ ಇಲ್ಲ!

ಕಾರ್ಕಳ: ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಡಾ| ಕೆ. ಕಸ್ತೂರಿ ರಂಗನ್‌ ವರದಿ ಜಾರಿ ವಿಚಾರಕ್ಕೆ ಮತ್ತೆ ಮರುಜೀವ ಬಂದಿದೆ. ಕಸ್ತೂರಿ ರಂಗನ್‌ ಜಾರಿಗೆ ಬದ್ಧ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ ಮಲೆನಾಡಿನ ಕಾಡಂಚಿನ ನಿವಾಸಿಗಳಲ್ಲಿ ಮತ್ತೆ ನಡುಕವನ್ನುಂಟು ಮಾಡಿದೆ.

ಯೋಜನೆಗೆ ಪಶ್ಚಿಮ ಘಟ್ಟ ಪ್ರದೇಶಗಳ ತಪ್ಪಲು ಪ್ರದೇಶಗಳ ಗ್ರಾಮದ ಜನತೆಯ ತೀವ್ರ ವಿರೋಧಗಳಿವೆ. ಈವರೆಗೂ ಹೋರಾಟ, ಒತ್ತಡಗಳಿಂದ ಬೀಸುವ ದೊಣ್ಣೆಯಿಂದ ತಪ್ಪಿಸಿ ಕೊಳ್ಳುತ್ತಲೇ ಬರಲಾಗಿತ್ತು. ಆದರೀಗ ಸಚಿವರ ಹೇಳಿಕೆಗೆ ಮಲೆನಾಡು, ಕರಾವಳಿ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸರಕಾರ ವರದಿ ಜಾರಿಗೆ ತರಾತುರಿ ಮಾಡುತ್ತಿದೆಯೋ ಎನ್ನುವ ಅನುಮಾನ ಹುಟ್ಟಿಕೊಂಡಿದೆ.

2013ರ ನವೆಂಬರ್‌ 30ರಂದು ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯವು ಕಸ್ತೂರಿ ರಂಗನ್‌ ವರದಿಯ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಕೇಂದ್ರ ಮೊದಲ ಕರಡು ಅಧಿಸೂಚನೆ ಹೊರಡಿಸಿದ್ದು 2014ರ ಮಾ.10ರಂದು. ಎರಡನೇ ಕರಡು ಅಧಿಸೂಚನೆಯನ್ನು 2015ರ ಸೆ.4ರಂದು ಹೊರಡಿಸಿತ್ತು. 3ನೇ ಕರಡು ಅಧಿಸೂಚನೆಯನ್ನು 2017ರ ಫೆ. 27ರಂದು ಹೊರಡಿಸಿತ್ತು. ಕೇಂದ್ರ ದಿಂದ ನಿರಂತರವಾಗಿ ಕರಡು ಅಧಿಸೂಚನೆ ಹೊರಬೀಳುತ್ತಲೇ ಇದೆ.

ಹಿಂದಿನ ಬಿಜೆಪಿ ಸರಕಾರ ಕಸ್ತೂರಿ ರಂಗನ್‌ ವರದಿ ಜಾರಿ ಸಂಬಂಧ ಆಗಿನ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದ ಸಂಸದರು ಮತ್ತು ಶಾಸಕರ ನಿಯೋಗ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಅವರನ್ನು ಭೇಟಿ ಮಾಡಿ ಬಾಧಿತ ಭಾಗದ ವಸ್ತುಸ್ಥಿತಿ ಅರಿವು ಮಾಡಿಸಿದ್ದರು. ಅಧ್ಯಯನ ಸಮಿತಿ ರಚಿಸಿಕೊಂಡು ಪಶ್ಚಿಮ ಘಟ್ಟ ತಪ್ಪಲಿನಲ್ಲಿ 1 ವರ್ಷಗಳ ಕಾಲ ಅಧ್ಯಯನ ನಡೆಸಲು ನಿರ್ಧರಿಸಿತ್ತು. ಸ್ಯಾಟಲೈಟ್‌ ಸಮೀಕ್ಷೆ ಬದಲಿಗೆ ಸ್ಥಳಕ್ಕೆ ಬಂದು ವಾಸ್ತವ ಪರಿಸ್ಥಿತಿ ಅರಿತು ವರದಿ ರಚಿಸುವ ನಿರ್ಧಾರಕ್ಕೆ ಬಂದಿತ್ತು. ಇದೇ ವೇಳೆ ಕೇಂದ್ರ ಸರಕಾರವೇ ನಿವೃತ್ತ ಐಎಫ್ಎಸ್‌ ಅಧಿಕಾರಿ ಸಂಜಯ್‌ ಕುಮಾರ್‌ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿತ್ತು. ಆದರೆ ಸ್ಥಳಕ್ಕೆ ತೆರಳಿ ಅಧ್ಯಯನ ಈ ವರೆಗೂ ಆಗಿಲ್ಲ .

ತರಾತುರಿ ಜಾರಿಯ ಉದ್ದೇಶವೇನು?
ಅಧ್ಯಯನ ವೇಳೆ ನೈಸರ್ಗಿಕ ಭೂ ಪ್ರದೇಶ, ಈ ಭಾಗದಲ್ಲಿ ಬೆಳೆಯುವ ಬೆಳೆಯ ಬಗ್ಗೆ ಸ್ಥಳಿಯರೊಂದಿಗೆ ಮಾಹಿತಿ ಪಡೆಯುವುದು. ಸಾಧಕ-ಬಾಧಕಗಳ ಬಗ್ಗೆ ಪಾರ ದರ್ಶಕ ವರದಿ ಸಿದ್ಧಪಡಿಸಬೇಕಿದೆ. ಸ್ಥಳೀಯ ಸಮಸ್ಯೆಗಳ ಕುರಿತಂತೆ ಅವರಿಗೆ ವಿವರಿಸುವುದು. ಅರಣ್ಯ ದೊಳಗೆ ಜೀವನ ಕಟ್ಟಿಕೊಂಡಿದ್ದಲ್ಲಿ ವರದಿ ಜಾರಿಯಾದರೆ ಮುಂದೇನು ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳನ್ನು ಅಧ್ಯಯನ ತಂಡದ ಮುಂದಿರಿಸಬೇಕಿದೆ. ಅದಾಗದೆ ಸ್ಯಾಟಲೈಟ್‌ ಆಧಾರಿತ ವರದಿಯನ್ನೇ ಆಧಾರವಾಗಿರಿಸಿ ಡಿಸೆಂಬರ್‌ ವೇಳೆಗೆ ಜಾರಿಯ ಆಸಕ್ತಿಯಲ್ಲಿ ರಾಜ್ಯ ಸರಕಾರವಿದೆ ಎನ್ನುವ ಆತಂಕ ಈ ಭಾಗದ ಜನರಲ್ಲಿ ಮನೆ ಮಾಡಿದೆ.

ಏಟಿನ ಮೇಲೆ ಕಾಯ್ದೆ ಗಾಯ !
ಒಂದೆಡೆ ಹವಾಮಾನ ವೈಪರಿತ್ಯ, ಇನ್ನೊಂದೆಡೆ ಅಡಿಕೆ, ತೆಂಗು, ಕಾಫಿ, ಕಾಳುಮೆಣಸು, ಏಲಕ್ಕಿ ಸೇರಿದಂತೆ ವಾಣಿಜ್ಯ ಬೆಳೆಗಳಿಗೆ ರೋಗರುಜಿನಗಳು ತಗಲಿ ತತ್ತರಿಸಿ ಹೋಗಿ ಜನಜೀವನ ದುಸ್ತರವಾಗಿದೆ. ಈ ನಡುವೆ ಕಾಯ್ದೆಗಳ ಜಾರಿ ಸದ್ದು ಮಾಡುತ್ತಿವೆ. ಇದು ಈ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿರುವ ಕುಟುಂಬಗಳ ನಿದ್ದೆಗೆಡಿಸಿದೆ.

ಹೊಯ್ದಾಟಕ್ಕೆ ಕೊನೆಯಿಲ್ಲವೇ?
ಪ್ರತೀ ಬಾರಿ ಆಡಳಿತದಲ್ಲಿದ್ದ ರಾಜ್ಯ ಸರಕಾರಗಳು ಅಧಿಸೂಚನೆಯನ್ನು ವಿರೋಧಿಸುತ್ತಲೇ ಬಂದಿದೆ. ರಾಷ್ಟ್ರೀಯ ನ್ಯಾಯಧೀಕರಣ ಕೂಡ ಆಗಿಂದಾಗ್ಗೆ ಒತ್ತಡಗಳನ್ನು ತರುತ್ತಲೇ ಇದೆ. ಕರಾವಳಿ, ಮಲೆನಾಡಿನ ಪ್ರತಿನಿಧಿಗಳ ಒತ್ತಡದ ನಡುವೆಯೂ ರಾಜ್ಯದ ಸಂಸದರು ಕೇಂದ್ರಕ್ಕೆ ಸರಿಯಾಗಿ ಮನದಟ್ಟು ಮಾಡಿ ಯೋಜನೆ ಸ್ಥಗಿತಕ್ಕೆ ತಾರ್ಕಿಕ ಅಂತ್ಯ ಕಾಣುವುದಕ್ಕೆ ಸಾಧ್ಯವಾಗಿಲ್ಲ. ಕಾಡಿನಂಚಿನ ಜನರ ಹೊಯ್ದಾಟಕ್ಕೆ ಕೊನೆಯೇ ಇಲ್ಲದಂತಾಗಿದೆ.

ರಾಜ್ಯದ 1,576 ಗ್ರಾಮಗಳಲ್ಲಿ ಆತಂಕ
ರಾಜ್ಯದ 1,576 ಗ್ರಾಮಗಳು ಹಾಗೂ ಪಶ್ಚಿಮ ಘಟ್ಟ ಪ್ರದೇಶಕ್ಕೆ ಹಬ್ಬಿಕೊಂಡಿರುವ ಆರು ರಾಜ್ಯಗಳ 4,156 ಗ್ರಾಮಗಳು ಸೂಕ್ಷ್ಮ ಪ್ರದೇಶ ಪಟ್ಟಿಯಲ್ಲಿವೆ. ಉಡುಪಿ ಜಿಲ್ಲೆಯ 37 ಗ್ರಾಮಗಳು ದ.ಕ. ಜಿಲ್ಲೆಯ 46 ಗ್ರಾಮಗಳು ಶಿವಮೊಗ್ಗ ಜಿಲ್ಲೆಯ 570 ಗ್ರಾಮಗಳು, ಚಿಕ್ಕಮಗಳೂರು ಜಿಲ್ಲೆಯ 147 ಗ್ರಾಮಗಳು, ಬೆಳಗಾವಿಯ 63, ಮೈಸೂರಿನ 62 ಚಾಮರಾಜನಗರ 21, ಹಾಸನ ಜಿಲ್ಲೆಯ 35 ಗ್ರಾಮಗಳು ಪಟ್ಟಿಯಲ್ಲಿ ಸೇರಿವೆ.

ಗಡಿ ಗುರುತೇ ನಡೆದಿಲ್ಲ
ಪ. ಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ವಲ ಯದ ಗಡಿ ಗುರುತು ಇನ್ನೂ ನಡೆದಿಲ್ಲ. ತಪ್ಪಲು ಪ್ರದೇಶಗಳ ಸ್ಥಳೀಯಾಡಳಿತ, ಜನಪ್ರತಿನಿಧಿ, ನಾಗರಿಕ ರಲ್ಲಿ ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಪರಿಸರ ಸೂಕ್ಷ್ಮ ಪ್ರದೇಶದಿಂದ ಜನವಸತಿ ಪ್ರದೇ ಶಕ್ಕೆ 10 ಕಿ. ಮೀ. ವ್ಯಾಪ್ತಿಯಲ್ಲಿ ಮನೆ, ಕೃಷಿ ತೋಟ, ಜಮೀನು ಬಯಲು ಎಂದೆಲ್ಲವಿದ್ದರೂ ಗಡಿಗುರುತು ಇನ್ನೂ ಸ್ಪಷ್ಟವಾಗದೆ ಕಗ್ಗಂಟಾಗಿಯೇ ಉಳಿದಿದೆ.

ಕಸ್ತೂರಿ ರಂಗನ್‌ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡಲಾಗುವುದು ಎಂಬ ಅರಣ್ಯ ಸಚಿವರ ಹೇಳಿಕೆ ತೀವ್ರ ಕಳವಳಕಾರಿ ಸಂಗತಿ. ಇದಕ್ಕೆ ಅವಕಾಶ ನೀಡುವುದಿಲ್ಲ. ಯೋಜನೆಯಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ ಜನಜೀವನಕ್ಕೆ ಸಮಸ್ಯೆಯಾಗಿ ಬದುಕು ಹೈರಣಾಗುತ್ತದೆ ಎಂಬುದನ್ನು ಸ್ಪಷ್ಟ ಪಡಿಸುತ್ತಲೇ ಬಂದ ಮೇಲೂ ಈ ಹೇಳಿಕೆ ಆತಂಕ ಸೃಷ್ಟಿಸುವಂತಿದೆ.
 -ವಿ. ಸುನಿಲ್‌ಕುಮಾರ್‌
ಮಾಜಿ ಸಚಿವರು, ಶಾಸಕರು

ರಾಜ್ಯದ ಪಶ್ಚಿಮ ಘಟ್ಟ ಪ್ರದೇಶ
-ಒಟ್ಟು ವಿಸ್ತೀರ್ಣ-44, 448 ಚ.ಕಿ.ಮೀ
-ಪರಿಸರ ಸೂಕ್ಷ್ಮ- 20, 668 ಚ.ಕಿ.ಮೀ
-ಒಟ್ಟು ಜನವಸತಿ ಪ್ರದೇಶಗಳು
-1,576 ಗ್ರಾಮಗಳು
-ಜಿಲ್ಲೆಗಳು -ಉತ್ತರ ಕನ್ನಡ, ದ.ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಬೆಳಗಾವಿ

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.