ಗೊಲ್ಲರಹಟ್ಟಿಗಳಲ್ಲಿ ಇನ್ನೂ ಮೌಢ್ಯಾಚರಣೆ


Team Udayavani, Jul 31, 2023, 6:10 AM IST

1-sasdsadsadsad

ತುಮಕೂರು: ವಿಜ್ಞಾನ, ತಂತ್ರಜ್ಞಾನ ಬೆಳೆದಿ ರುವ 21ನೇ ಶತಮಾನದಲ್ಲಿಯೂ ಮಾನವೀಯತೆ ಮರೆತು ಮೌಢ್ಯಕ್ಕೆ ಒಳಗಾಗುತ್ತಿರುವ ಕಾಡುಗೊಲ್ಲ ಸಮುದಾಯದ ಹಟ್ಟಿಗಳಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿರುವ ಮೌಡ್ಯ ಆಚರಣೆಗೆ ಹಟ್ಟಿಗಳಲ್ಲಿ ಇರುವ ಜನರಿಗೆ ಶಿಕ್ಷಣದ ಕೊರತೆಯೇ ಮೂಲಕಾರಣವಾಗಿದೆ.

ಕಾಡು ಗೊಲ್ಲ ಸಮುದಾಯದವರು ಈ ಹಿಂದೆ ಅಲೆಮಾರಿಗಳು ಕಾಡು ಮೇಡುಗಳಲ್ಲಿ ವಾಸಿಸುತ್ತಿದ್ದ‌ರು, ಕುರಿ ಸಾಕಾಣಿಕೆ, ಹೈನುಗಾರಿಗೆ ಇವರ ಮೂಲ ಕಸಬು. ಅಲ್ಲಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದ ಈ ಜನರ ಜತೆಯಲ್ಲಿ ಕುರಿ, ಮೇಕೆ, ಹಸುಗಳು ಎಲ್ಲವೂ ಒಟ್ಟಿಗೆ ಇರುತ್ತಿದ್ದವು, ಈ ವೇಳೆಯಲ್ಲಿ ಋತುಮತಿಯಾದರೆ ಮತ್ತು ಬಾಣಂತಿಯಾದರೆ ಅವರ ಆರೋಗ್ಯದ ಮೇಲೆ ತೊಂದರೆ ಉಂಟಾ ಗುತ್ತದೆ ಎಂದು ಈ ಹಿಂದೆ ಪೂರ್ವಿಕರು ಅವರು ಬೇರೆ ಕಡೆ ಗುಡಿಸಲು ನಿರ್ಮಿಸಿ ಅಲ್ಲಿ ಸೌಲಭ್ಯ ಕಲ್ಪಿಸಿ ಇರಿಸುತ್ತಿದ್ದರು.

ಆನಂತರ ಅದು ಮೌಢ್ಯವಾಗಿ ಪರಿವರ್ತನೆ ಯಾಗಿ ಕಾಡುಗೊಲ್ಲ ಸಮುದಾಯದ ಆರಾಧ್ಯ ದೈವ ವೀರಗಾರರಾದ ಜುಂಜಪ್ಪ ದೇವರು, ಸಿದ್ಧಪ್ಪ ದೇವರು, ಯತ್ತಪ್ಪ ದೇವರಿಗೆ ಸೂತಕ ಆಗುತ್ತದೆ ಎನ್ನುವ ಭಾವನೆ ಬಂದು ಹಟ್ಟಿಯಿಂದ ಹೊರಗಡೆ ಇಡಲು ಆರಂಭಿಸಿದರು.

ಹೆಣ್ಣು ಮಕ್ಕಳು ಋತುಮತಿಯಾಗುವುದು, ಪ್ರತಿ ತಿಂಗಳ ಋತುಚಕ್ರ, ಹೆರಿಗೆಯಾದರೆ ಅದು ತೀವ್ರವಾದ ಸೂತಕವಾಗುತ್ತದೆ. ಅವರು ಹಟ್ಟಿಯಲ್ಲಿ ಇದ್ದರೆ ಆ ಸೂತಕ ಹಟ್ಟಿಗೂ ಹರಡಿ ದೇವರಿಗೆ ಮೈಲಿಗೆಯಾಗಿ ಇದರಿಂದ ಇಡೀ ಹಟ್ಟಿಗೆ ಕಷ್ಟ ಬರುತ್ತದೆ. ಮನೆಗೆ ಹಾವು, ಜೆರಿ, ಚೇಳುಗಳು ಬರುತ್ತವೆ. ಅಲ್ಲದೇ ದನ, ಕರು, ಕುರಿಗಳಿಗೂ ತೊಂದರೆಯಾಗುತ್ತದೆ ಎಂದು ನಂಬಿರುವ ಕಾಡುಗೊಲ್ಲ ಸಮುದಾಯದ ಹಲವರು ಇಂದಿಗೂ ತಮ್ಮ ಮೌಡ್ಯವನ್ನು ಬಿಡದೇ ಆಚರಣೆ ಮಾಡುತ್ತಲೇ ಇದ್ದಾರೆ.

ಯುವತಿ ಋತುಮತಿಯಾದರೆ, ಮಹಿಳೆ ಯರು ಪ್ರತೀ ತಿಂಗಳು ಋತುಚಕ್ರವಾದರೆ 5 ದಿನ ಹಟ್ಟಿಯಿಂದ ಆಚೆ ಗುಡಿಸಲಿನಲ್ಲಿ ಇರಬೇಕು, ವಿಶೇಷವಾಗಿ ಹೆರಿಗೆಯಾದರೆ ಅದು ತೀವ್ರವಾದ ಸೂತಕ. ಅವರನ್ನು ಹಟ್ಟಿಯಲ್ಲಿ ಇಟ್ಟುಕೊಳ್ಳಬಾ ರದು ಎಂದು 21 ದಿನದ ಸೂತಕ ಕಳೆಯುವವರೆಗೆ ಹೊರಗೆ ಇರಬೇಕು ಎಂದು ಹಟ್ಟಿಯಿಂದ ಆಚೆ ಗರಿಯಿಂದ ಗುಡಿಸಲು ಕಟ್ಟಿ ಅಲ್ಲಿಯೇ ಮಗು, ಬಾಣಂತಿ ಇರಬೇಕು. 21 ದಿನ ಕಳೆದ ಮೇಲೆ ಹಸುವಿನ ಗಂಜಲ ಹಾಕಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದ ಮೇಲೆ ಸೂತಕ ಹೋಗುತ್ತದೆ ಎನ್ನುವ ಸಂಪ್ರದಾಯ ಇವರದ್ದು.

ಹಟ್ಟಿಯಿಂದ ಆಚೆ ಗುಡಿಸಲಿನಲ್ಲಿ ಆಗ ತಾನೇ ಹುಟ್ಟಿದ ಹಸುಗೂಸು ಮತ್ತು ಬಾಣಂತಿ ಇರಬೇಕು. ಆ ವೇಳೆ ವಿಷಜಂತುಗಳು, ಕಾಡು ಪ್ರಾಣಿಗಳ ಭಯ ಇರುತ್ತದೆ. ಜತೆಗೆ ವಾತಾ ವರಣದ ಏರು ಪೇರಿನಿಂದ ಬಾಣಂತಿಗೆ ಮತ್ತು ಮಗುವಿಗೆ ಕಾಯಿಲೆಗಳು ಕಾಣುತ್ತವೆ. ಇದರಿಂದ ಸಾವು ನೋವುಗಳು ಅಧಿಕವಾಗಿರುತ್ತವೆ.

ಈಗ ತುಮಕೂರು ತಾಲೂಕಿನ ಮಲ್ಲೇನ ಹಳ್ಳಿಯ ಗೊಲ್ಲರ ಹಟ್ಟಿಯಲ್ಲಿ ಬಾಣಂತಿ ಮಗುವನ್ನು ಹಟ್ಟಿಯಿಂದ ಆಚೆ ಗುಡಿಸಲಿನಲ್ಲಿ ಇಟ್ಟ ಪರಿಣಾಮ ತೀವ್ರ ಶೀತದಿಂದ ಗುಡಿಸಲಿ ನಲ್ಲಿ ಇಟ್ಟಿದ್ದ ಮಗು ಸಾವನ್ನಪ್ಪಿತ್ತು, ಆದರೂ ಸೂತಕ ಎಂದು ಬಾಣಂತಿಯನ್ನು ಗುಡಿಸಲಿನ ಲ್ಲಿಯೇ ಇರಿಸಲಾಗಿತ್ತು, ಈ ಪ್ರಕರಣ ಮಾಧ್ಯಮಗಳಲ್ಲಿ ಬರುತ್ತಲೇ ನ್ಯಾಯಾಧೀಶರು ಗೊಲ್ಲರ ಹಟ್ಟಿಗೆ ಭೇಟಿ ನೀಡಿ ಗುಡಿಸಲುತೆರವು ಗೊಳಿಸಿ ಹಟ್ಟಿಯ ಜನರಲ್ಲಿ ಜಾಗೃತಿ ಮೂಡಿಸಿ ಮಹಿಳೆಯ ಮನೆಗೆ ಕಳುಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿಯ ಅಪ್ಪ, ಅಮ್ಮ ಮತ್ತು ಗಂಡನ ಮೇಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೈಕ್ಷಣಿಕ ಪ್ರಗತಿ ಸಾಧಿಸಿರುವ ಹಲವು ಗೊಲ್ಲರ ಹಟ್ಟಿಗಳಲ್ಲಿ ಇಂತಹ ಮೌಢ್ಯ ಪದ್ದತಿ ದೂರವಾಗಿದೆ. ಆದರೆ ಶಿಕ್ಷಣ ಇಲ್ಲದ ಹಲವು ಹಟ್ಟಿಗಳಲ್ಲಿ ಇಂತಹ ಮೌಡ್ಯ ಪದ್ಧತಿ ಇಂದಿಗೂ ಇದ್ದು ಈ ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಅಗತ್ಯತೆ ಇದೆ.

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

16

Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Apologize or give 5 crores: Another threat to actor Salman

Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.