ನೋಟು ಬದಲಾವಣೆ ಹೆಸರಲ್ಲಿ 25 ಲಕ್ಷ ವಂಚನೆ


Team Udayavani, Jul 31, 2023, 2:39 PM IST

tdy-6

ಬೆಂಗಳೂರು: ಐನೂರು ರೂ. ನೋಟುಗಳನ್ನು ನೀಡಿದರೆ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹೆಚ್ಚುವರಿಯಾಗಿ ನೀಡುವುದಾಗಿ ನಂಬಿಸಿ ಸಿವಿಲ್‌ ಕಂಟ್ರ್ಯಾಕ್ಟರ್‌ವೊಬ್ಬರಿಗೆ 25 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಸಿವಿಲ್‌ ಕಂಟ್ರ್ಯಾಕ್ಟರ್‌ ಸಿ.ಕೆ.ಸುರೇಶ್‌ ಎಂಬವರು ಮಹಾಲಕ್ಷ್ಮೀ ಲೇಔಟ್‌ ಠಾಣೆಯಲ್ಲಿ ಶಿವು, ಶಿವಕುಮಾರಸ್ವಾಮಿ, ಶ್ರೀನಿವಾಸ್‌ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪ್ರಕರಣವನ್ನು ಹೆಚ್ಚುವರಿ ತನಿಖೆಗಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ದೂರುದಾರ ಸುರೇಶ್‌ಗೆ ಎರಡು ತಿಂಗಳಿಂದ ಆರೋಪಿ ಶಿವು ನಿರಂತರವಾಗಿ ಕರೆ ಮಾಡಿ, ಸದ್ಯದಲ್ಲೇ ಕೇಂದ್ರ ಸರ್ಕಾರ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್‌ ಮಾಡಲಿದೆ. ತಮ್ಮ ಬಳಿ ಕೋಟ್ಯಂತರ ರೂ. 2 ಸಾವಿರ ರೂ. ಮುಖಬೆಲೆಯ ನೋಟುಗಳಿದ್ದು, ಅವುಗಳನ್ನು ಐನೂರು ರೂ. ಮುಖಬೆಲೆಯ ನೋಟುಗಳನ್ನಾಗಿ ಬದಲಾಯಿಸುತ್ತಿದ್ದೇವೆ. ನೀವು ನಮಗೆ ಐನೂರು ಮುಖಬೆಲೆಯ 25 ಲಕ್ಷ ರೂ. ನೀಡಿದರೆ ನಾವು ನಿಮಗೆ 2000 ಮುಖಬೆಲೆಯ 37.5 ಲಕ್ಷ ರೂ. ನೀಡುತ್ತೇವೆ ಎಂದು ನಂಬಿಸಿದ್ದರು. ಆರೋಪಿಗಳ ಮಾತು ನಂಬಿದ ಸುರೇಶ್‌, ಮೇನಲ್ಲಿ ತಮ್ಮ ಸ್ನೇಹಿತನೊಂದಿಗೆ ಮಂತ್ರಾಲಯಕ್ಕೆ ಹೊರಡಲು ಸಿದ್ಧರಾಗಿದ್ದರು. ಆದರೆ, ನಾವು ತಿರುಪತಿಯಲ್ಲಿ ಇದ್ದೇವೆ, ಇಲ್ಲಿಯೇ ಬನ್ನಿ’ ಎಂದು ಕರೆಸಿಕೊಂಡಿದ್ದಾರೆ.

ತಿರುಪತಿಗೆ ತೆರಳಿದ ಬಳಿಕ ಅಲ್ಲಿಂದ ನೆಲ್ಲೂರಿಗೆ ಕರೆಸಿಕೊಂಡು, ಶ್ರೀನಿವಾಸ್‌ ಎಂಬಾತನನ್ನು ಪರಿಚಿಯಸಿದ್ದಾರೆ. ಆಗ ಶ್ರೀನಿವಾಸ್‌, 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ತೋರಿಸಿದ್ದಾನೆ. ಬಳಿಕ ಎಲ್ಲವೂ ಒರಿಜಿನಲ್‌ ನೋಟು, ಯಾವ ಮೋಸವೂ ಇಲ್ಲ. ನೀವು ತಂದಿ ರುವ ಐನೂರು ನೋಟುಗಳನ್ನು ಕೊಡಿ ಎಂದು ಪಡೆದುಕೊಂಡಿದ್ದಾನೆ. ನಂತರ ನೀವು ಹೊರಗಡೆ ಕಾಯುತ್ತಿರಿ, ನಾವು ಬಂಡಲ್‌ ಮಾಡಿಕೊಂಡು ಬರುತ್ತೇವೆ’ ಎಂದು ಹೇಳಿ, ನಂತರ ಹೊರಗಡೆ ಬಂದಿದ್ದ ಮತ್ತೂಬ್ಬ ವ್ಯಕ್ತಿ ‘ನೀವು ಇಲ್ಲೇ ಇದ್ದರೆ ಯಾರಿಗಾದರೂ ಅನುಮಾನ ಬಂದು ಪೊಲೀಸರಿಗೆ ತಿಳಿಸುತ್ತಾರೆ. ಹಣವನ್ನು ನೆಲ್ಲೂರು ಟೋಲ್‌ ಬಳಿ ಕಲೆಕ್ಟ್ ಮಾಡಿಕೊಳ್ಳಿ’ ಎಂದು ತಿಳಿಸಿದ್ದಾನೆ.

ತಿರುಪತಿಯಲ್ಲಿ ಮತ್ತು ಬೆಂಗಳೂರಿನಲ್ಲಿ ವಿವಿಧೆಡೆಗೆ ಬರಹೇಳಿದ್ದಾರೆ. ಬಳಿಕ ಫೋನ್‌ ಸ್ವಿಚ್‌ ಆಫ್ ಮಾಡಿದ್ದು, ವಂಚನೆ ಗೊತ್ತಾತಿ ಕೇಸು ದಾಖಲಿಸಿದ್ದಾರೆ. ಆದರೆ, ಪ್ರಕರಣದಲ್ಲಿ ವ್ಯವಸ್ಥಿತ ಜಾಲ ಇರುವುದರಿಂದ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಹಣ ನೀಡುತ್ತೇವೆಂದು ಲೊಕೇಷನ್‌ ಬದಲಾವಣೆ: ಆರೋಪಿಗಳು ಹೇಳಿದಂತೆ ಟೋಲ್‌ ಬಳಿ ಬಹಳ ಹೊತ್ತು ಕಾದರೂ ಯಾರೂ ಬಂದಿಲ್ಲ. ಹೀಗಾಗಿ ಅನುಮಾನಗೊಂಡ ಸುರೇಶ್‌, ಆರೋಪಿ ಶಿವು ಮತ್ತು ಶಿವಕುಮಾರ್‌ ಸ್ವಾಮಿಗೆ ಕರೆ ಮಾಡಿದ್ದಾರೆ. ಆಗ ಆರೋಪಿಗಳು, ‘ತಾವು ತಿರುಪತಿಯಲ್ಲಿ 2 ಸಾವಿರ ರೂ. ಮುಖಬೆಲೆಯ ಐದು ಕೋಟಿ ಮೊತ್ತದ ಮತ್ತೂಂದು ವ್ಯವಹಾರದಲ್ಲಿದ್ದೇವೆ. ಇಲ್ಲಿಯೇ ಬನ್ನಿ’ ಎಂದು ಲೈವ್‌ ಲೊಕೇಷನ್‌ ಸಹ ಶೇರ್‌ ಮಾಡಿದ್ದಾರೆ. ಅದನ್ನು ನಂಬಿದ್ದ ಸುರೇಶ್‌ ಹಾಗೂ ಅವರ ಸ್ನೇಹಿತ ತಿರುಪತಿಗೆ ತೆರಳಿ ಕರೆ ಮಾಡಿದ್ದಾರೆ. ಆಗಲೂ ಆರೋಪಿಗಳು ‘ನಾವು ಬೆಂಗಳೂರಿಗೆ ತೆರಳಿದ್ದೇವೆ, ಅಲ್ಲಿಯೇ ನಿಮಗೆ ಹಣ ಕೊಡುತ್ತೇವೆ’ ಎಂದಿದ್ದಾರೆ. ಆದರೆ ಬೆಂಗಳೂರಿಗೆ ಬಂದು ಕರೆ ಮಾಡಿದಾಗ ಆರೋಪಿಗಳು ಕರೆ ಸ್ವೀಕರಿಸದೇ ವಂಚಿಸಿದ್ದಾರೆ. ಈ ಘಟನೆ ನಡೆದು ಎರಡು ತಿಂಗಳು ಕಾದ ಬಳಿಕ ವಂಚನೆಗೊಳಗಾದ ಸುರೇಶ್‌ ಠಾಣೆಗೆ ದೂರು ನೀಡಿದ್ದಾರೆ.

ಟಾಪ್ ನ್ಯೂಸ್

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

Daily Horoscope:

Daily Horoscope: ಹೇಗಿದೆ ನೋಡಿ ಶನಿವಾರದ ನಿಮ್ಮ ಗ್ರಹಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-flipkart

Flipkart Big Billion Day ಸೆ. 27 ರಿಂದ ಆರಂಭ

13-bng

Bengaluru: ನಮ್ಮ ಕ್ಲಿನಿಕ್‌ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ

10-bng

Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್‌ಸರ್ವೀಸ್‌ ಸೆಂಟರ್‌ಗೆ 12 ಸಾವಿರ ದಂಡ!

9-bng

Bengaluru: ʼರಾಹುಲ್‌ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್‌ ವಿರುದ್ಧ ಕೇಸ್‌

8-bng

Bengaluru: ಉದ್ಯಮಿಗೆ ಹನಿಟ್ರ್ಯಾಪ್‌ ಆರೋಪ: ಪೊಲೀಸರಿಂದ ಶೀಘ್ರ ಬಿ ರಿಪೋರ್ಟ್‌  

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.