Special Gift! ನಿವೃತ್ತಿ ದಿನ ಎಸಿ ಕಾರಿನಲ್ಲಿ ಮನೆಗೆ ತೆರಳಿದ ಡಿ ದರ್ಜೆ ನೌಕರ!
Team Udayavani, Jul 31, 2023, 8:28 PM IST
ಸಾಗರ: ತಮ್ಮ ಅಧಿಕಾರ ಕಳೆದುಕೊಂಡ ಜನಪ್ರತಿನಿಧಿಗಳು ಅಂತಿಮವಾಗಿ ಸರ್ಕಾರಿ ಸೌಲಭ್ಯಗಳನ್ನು ಬಿಟ್ಟು ಕೊನೆಯ ದಿನ ತಮ್ಮ ವಾಹನ, ವ್ಯವಸ್ಥೆಯಲ್ಲಿ ಮನೆಗೆ ಮರಳುವುದನ್ನು ನೋಡುವುದು ಸಾಮಾನ್ಯವಾಗಿರುವಾಗ ಸಾಗರದ ಉಪವಿಭಾಗೀಯ ಕಚೇರಿಯಲ್ಲಿ ಕೆಲಸ ಮಾಡುವ ಡಿ ದರ್ಜೆ ನೌಕರರೊಬ್ಬರು ತಮ್ಮ ವೃತ್ತಿಯ ಕೊನೆಯ ದಿನದ ಕೆಲಸ ಮುಗಿಸಿ ಉಪವಿಭಾಗೀಯ ಅಧಿಕಾರಿಗಳ ಅಧಿಕೃತ ಕಾರಿನಲ್ಲಿ ಎಸಿ ಕುಳಿತುಕೊಳ್ಳುವ ಮುಂದುಗಡೆಯ ಸೀಟಿನಲ್ಲಿ ಕುಳಿತು ಮನೆಗೆ ತೆರಳಿದ ಅಪರೂಪದ ದೃಶ್ಯ ಸೋಮವಾರ ಸಾಗರದಲ್ಲಿ ಕಾಣಸಿಕ್ಕಿತು.
ಇಂತದೊಂದು ಗೌರವ ಸಿಗಲು ಕಾರಣರಾದ ಸಾಗರ ಉಪವಿಭಾಗದ ಸಹಾಯಕ ಆಯುಕ್ತೆ ಪಲ್ಲವಿ ಸಾತೇನಹಳ್ಳಿ ಸ್ವತಃ ತಮ್ಮದೇ ಕಾರಿನಲ್ಲಿ ಹಿಂದೆ ಕುಳಿತು ನಿವೃತ್ತ ನೌಕರನ ಮನೆಯವರೆಗೂ ತೆರಳಿ ಗಮನ ಸೆಳೆದರು.
ಎಸಿ ಕಚೇರಿಯಲ್ಲಿ ದಫೇದಾರ್ ಆಗಿ ನಿವೃತ್ತರಾದ ಕೃಷ್ಣಪ್ಪ ಅವರನ್ನು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ತಿಂಗಳ ಕೊನೆಯ ದಿನವಾದ ಸೋಮವಾರ ಎಸಿ ಕಚೇರಿಯಲ್ಲಿ ಕೃಷ್ಣಪ್ಪ ಅವರ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಕಚೇರಿಯ ನೌಕರ ವರ್ಗದ ಮಂಜುಳಾ ಭಜಂತ್ರಿ, ಕಲ್ಪಪ್ಪ ಮೆಣಸಿನಹಾಳ್, ದೇವರಾಜ್, ಪ್ರಶಾಂತ್, ಗುರು, ಮಂಜುನಾಥ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ನಿವೃತ್ತಿಯ ಹಾರ ತುರಾಯಿ, ಉಡುಗೊರೆಗಳನ್ನು ಪಡೆದು ಮನೆಗೆ ಮರಳಲು ಯೋಚಿಸುತ್ತಿದ್ದ ಕೃಷ್ಣಪ್ಪ ಅವರಿಗೆ ಅಚ್ಚರಿ ಕಾದಿತ್ತು. ಸ್ವತಃ ಎಸಿ ಪಲ್ಲವಿ ತಮ್ಮ ಕಾರಿನಲ್ಲಿ ಮನೆಗೆ ತೆರಳುವ ಅವಕಾಶವನ್ನು ಕೃಷ್ಣಪ್ಪ ಅವರಿಗೆ ನೀಡಿ ಕಾರಿನಲ್ಲಿ ಕುಳಿತುಕೊಳ್ಳಲು ಆಹ್ವಾನಿಸಿದರು.
ಸಂಕೋಚದಿಂದಲೇ ಕಾರಿನಲ್ಲಿ ಡ್ರೈವರ್ ಪಕ್ಕದ ಸೀಟ್‌ನಲ್ಲಿ ಕುಳಿತ ಕೃಷ್ಣಪ್ಪ ಮನೆಗೆ ತಲುಪಿದಾಗ ಎಸಿಯವರನ್ನು ಆಹ್ವಾನಿಸಿದರು. ಎಸಿ ಪಲ್ಲವಿ ಮನೆಗೂ ತೆರಳಿ ಕೆಲಕಾಲ ಮನೆಯವರನ್ನು ವಿಚಾರಿಸಿ ವಾಪಾಸಾದರು. ಈ ವೇಳೆ ಸ್ವತಃ ಎಸಿ ವಿದಾಯದ ಪಯಣದಲ್ಲಿ ಬಂದಿದ್ದನ್ನು ಮನೆಯವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಹರ್ಷಿಸಿದರು. ಹೃದಯಸ್ಪರ್ಶಿ ಬೀಳ್ಕೊಡಿಗೆಯನ್ನು ಡಿ ದರ್ಜೆ ನೌಕರ ಎಂಬ ಅಲಕ್ಷ್ಯ ತೋರದೆ ವಿಶೇಷ ಮನ್ನಣೆ ನೀಡಿರುವುದು ಅಪರೂಪದ ವರ್ತನೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.