ಚಳ್ಳಕೆರೆ ಟೊಮೇಟೊಗೆ ಭಾರೀ ಬೇಡಿಕೆ
Team Udayavani, Aug 1, 2023, 6:04 AM IST
ಹಲವು ದಿನಗಳ ಕಾಲ ಕೊಳೆಯದೇ ಸಂಗ್ರಹಿಸಿಡಬಹುದಾದ ಟೊಮೇಟೊ
ಬೆಂಗಳೂರು: ರಾಜ್ಯದ ಅತಿದೊಡ್ಡ ಟೊಮೇಟೊ ಮಾರುಕಟ್ಟೆ ಎನಿಸಿರುವ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಟೊಮೇಟೊ ಬೆಲೆ ಮತ್ತೆ ಜಿಗಿತ ಕಂಡಿದೆ. ಅದರಲ್ಲೂ ಚಳ್ಳಕೆರೆ ಭಾಗದಿಂದ ಪೂರೈಕೆ ಆಗುತ್ತಿರುವ, ಕೆಲವು ದಿನಗಳ ಕಾಲ ಸಂಗ್ರಹಿಸಿಡಬಹುದಾದ ಶ್ರೇಷ್ಠ ಗುಣಮಟ್ಟದ 15 ಕೆ.ಜಿ. ಬಾಕ್ಸ್ನ ಟೊಮೇಟೊ 2,200 ರೂ.ಗೆ ಮಾರಾಟವಾಗಿದೆ.
ಎರಡು ದಿನಗಳ ಹಿಂದೆ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 15 ಕೆ.ಜಿ. ಬಾಕ್ಸ್ ಟೊಮೇಟೊ 1,600ರಿಂದ 2,000 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಮತ್ತೆ ಬಾಂಗ್ಲಾ ಗಡಿ ಪ್ರದೇಶಗಳಿಗೆ ಟೊಮೇಟೊ ಬೇಡಿಕೆ ಹೆಚ್ಚಿದೆ. ಜತೆಗೆ ಛತ್ತೀಸ್ಗಢ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ದಿಲ್ಲಿ ಸಹಿತ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬೇಡಿಕೆ ಇರುವುದರಿಂದ ಈಗ ರಾಜ್ಯದ ಮಾರುಕಟ್ಟೆಗಳಲ್ಲಿ ಟೊಮೇಟೊ ಬೆಲೆಗಳಲ್ಲಿ ಏರಿಕೆಯಾಗಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ಭಾಗದಿಂ ದಲೂ ಕೆಲವು ದಿನಗಳಿಂದ ರಾಜ್ಯದ ಕೋಲಾರ ಮಾರುಕಟ್ಟೆಗೆ ಟೊಮೇಟೊ ಪೂರೈಕೆ ಆಗುತ್ತಿದೆ. ಆದರೆ ಅವು ಉತ್ತಮ ಗುಣಟ್ಟದಲ್ಲ, ಜತೆಗೆ ಬಹಳ ದಿನಗಳ ಕಾಲ ಸಂಗ್ರಹಿಸಿಟ್ಟುಕೊಳ್ಳಲು ಆಗುವುದಿಲ್ಲ. ಹೀಗಾಗಿ ಅವು 1,600ರೂ.ನಿಂದ 2000ರೂ. ವರೆಗೂ ಖರೀದಿ ಆಗುತ್ತಿವೆ ಎಂದು ಕೋಲಾರ ಎಪಿಎಂಸಿ ವ್ಯಾಪಾರಿಗಳು ಹೇಳುತ್ತಾರೆ.
ಬೆಳೆ ಕುಂಠಿತ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ಟೊಮೇಟೊ ಬೆಳೆಯಲ್ಲಿ ಬಿಳಿನೊಣದ ಹಾವಳಿ ಕಂಡುಬಂದಿದ್ದು ಬೆಳೆ ಕುಂಠಿತವಾಗಿದೆ.
ಬಾಕ್ಸ್ಗೆ 2,800ರಿಂದ
3000 ಸಾವಿರ ರೂ.
ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಟೊಮೇಟೊ ಬೆಲೆ ಈ ಹಿಂದೆ ಪ್ರತಿ ಕೆ.ಜಿಗೆ 120ರಿಂದ 130 ರೂ. ಇದ್ದುದು ಈಗ 150ರಿಂದ 160 ರೂ. ತಲುಪಿದೆ. ನಾಲ್ಕೈದು ದಿನಗಳಿಂದ ಮಾರುಕಟ್ಟೆಗಳಲ್ಲಿ ಬೆಲೆಯಲ್ಲಿ ಜಿಗಿತ ಕಂಡು ಬಂದಿದೆ. ಹೊಸ ಬೆಳೆ ಪೂರೈಕೆ ಆಗುವವರಿಗೂ ಇದೇ ಪರಿಸ್ಥಿತಿ ಇರಲಿದೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ.
-ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ
Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.