ಶಾಲೆಗಳಲ್ಲಿ ನೈತಿಕ ಶಿಕ್ಷಣ, ಸಮುದಾಯದ ಜವಾಬ್ದಾರಿ
Team Udayavani, Aug 1, 2023, 6:34 AM IST
ಶಾಲೆಗಳಲ್ಲಿ ಈಗಿರುವ ಪಠ್ಯಗಳಲ್ಲೇ ನೈತಿಕ ಶಿಕ್ಷಣವನ್ನು ಹೇಗೆ ಕೊಡಬಹುದು ಎಂಬುದನ್ನು ತಿಳಿಯುವ ಅಗತ್ಯವಿದೆ. ಶಿಕ್ಷಣ ಪ್ರತಿಯೊಬ್ಬರ ಭವಿಷ್ಯದ ಅಡಿಪಾಯ. ನೈತಿಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬೋಧನಾ ಕ್ರಮದಲ್ಲಿಯೂ ಬದಲಾವಣೆ ತರುವ ಅಗತ್ಯವಿದೆ.
ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಅನಿವಾರ್ಯತೆಯಿದೆ ಎಂಬ ಕೂಗು ಹೊಸ ಸಂಗತಿಯಲ್ಲ. ಶಾಲೆಗಳಲ್ಲಿ ಇದು ಬೇಕು ಎಂಬ ಬಗ್ಗೆ ವಿವಾದಗಳಿಲ್ಲ. ಹೇಗೆ ಅಳವಡಿಸುವುದು, ಅದಕ್ಕೆ ಬೇಕಾಗುವ ಪಠ್ಯ ಯಾವುದು….? ಈ ವಿಷಯವಾಗಿ ವಾದ ವಿವಾದಗಳು ಇವೆ. ನೈತಿಕ ಶಿಕ್ಷಣಕ್ಕೆ ಶಾಲೆಗಳಲ್ಲಿ, ಆಯಾ ತರಗತಿಗಳಿಗೆ ಈಗಾಗಲೇ ಇರುವ ಪಠ್ಯಗಳೇ ಸಾಲದೇ ಅಥವಾ ನೈತಿಕ ಶಿಕ್ಷಣದ ಹೆಸರಲ್ಲಿ ಇನ್ನಷ್ಟು ಪಠ್ಯಗಳ ಭಾರವನ್ನು ಮಕ್ಕಳಿಗೆ ಹೊರಿಸುವುದೇ….? ಎಂಬ ಪ್ರಶ್ನೆಗಳೂ ಇವೆ. ಇರುವ ಪಠ್ಯಗಳ ಬಗ್ಗೆಯೇ ಚರ್ಚೆ, ವಾದಗಳು. ಇನ್ನೂ ಹೆಚ್ಚುವರಿಯಾಗಿ ಅದೂ ನೈತಿಕ ಶಿಕ್ಷಣದ ಹೆಸರಲ್ಲಿ ಪಠ್ಯಗಳನ್ನು ಅಳವಡಿಸ ಹೊರಟರೆ ಶಾಲೆಗಳ ಗತಿ, ಮಕ್ಕಳ ಪರಿಸ್ಥಿತಿ ಏನಾದೀತು…? ಮತ್ತೆ ಪ್ರಶ್ನೆಗಳೇ…
ಸದ್ಯ ಎಲ್ಲ ತರಗತಿಗಳಿಗೆ ಇರುವ ಪಠ್ಯಗಳ ಭಾರ ನೋಡಿ ದರೆ (ತೂಕದಲ್ಲಿ, ವಿಷಯದಲ್ಲಿ). ಇರುವ ಒಂದಷ್ಟು ನೈತಿಕ ಮೌಲ್ಯಗಳು ಉಳಿದದ್ದೇ ದೊಡ್ಡ ಸಂಗತಿ. ಪ್ರಸ್ತುತ ಸಾಮಾಜಿಕ, ರಾಜಕೀಯ ವಾತಾವರಣದಲ್ಲಿ ಮಕ್ಕಳಿಗೆ ನೈತಿಕತೆಯ ಪಾಠ ಬೇಕು ಎಂದು ಹೇಳಲು ಯಾರಿಗಾದರೂ ನೈತಿಕತೆ ಇದೆಯೇ ಎಂದು ಮಕ್ಕಳೇ ಕೇಳಿದರೆ….?! ಆಗ ಎದುರಾಗುವ ನೈತಿಕತೆಯ ಸವಾಲು ಬೇರೆಯೇ.
ಸವಾಲು ಇರುವುದೇ ಇಲ್ಲಿ. ಮಕ್ಕಳಿಗೆ ನೈತಿಕತೆಯ ಬಗ್ಗೆ ಹೇಳು ವವರಲ್ಲಿ, ಪಾಠ ಮಾಡುವವರಲ್ಲಿ ಎಷ್ಟು ನೈತಿಕತೆ ಇದೆ? ಪ್ರಶ್ನೆ ನಮಗೆ ನಾವೇ ಹಾಕಿಕೊಳ್ಳಬೇಕು. ಮಕ್ಕಳಿಗೆ ಶಾಲೆಗಳಲ್ಲಿ ನೈತಿಕತೆಯ ಪಾಠ, ಬೋಧನೆ ಮಾಡಿದೆವು ಅಥವಾ ಪಾಠ ಅಳವಡಿಸಿದೆವು ಎಂದೇ (ಈಗಾಗಲೇ ಇದೆ)ಇಟ್ಟುಕೊಳ್ಳೋಣ. ಪಾಠ ಕೇಳಿದ ಮಗುವಿಗೆ ಆ ನೈತಿಕ ಮೌಲ್ಯಗಳ ದರ್ಶನ, ಅನುಭವ ಶಾಲಾ ಕೋಣೆಯ ಹೊರ ಪ್ರಪಂಚದಲ್ಲಿ ಆಗಬೇಡವೇ…? ಮಗುವಿನ ಸುತ್ತ ಮುತ್ತಲಿನ ಜನರ ಮಾತು ಮತ್ತು ಕೃತಿಗಳಲ್ಲಿ (ವರ್ತನೆಗಳಲ್ಲಿ)ನೈತಿಕ ಮೌಲ್ಯಗಳು ಢಾಳಾಗಿ ಕಾಣಿಸಬೇಡವೇ…? ಕಾಣಲೇಬೇಕು. ಅದರ ಹೊರತಾಗಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ ಎಂದು ಕರೆ ಕೊಡುವುದು, ಭಾಷಣ ಬಿಗಿಯುವುದು ಎಷ್ಟು ಸರಿ…? ಆದರೂ ಮಕ್ಕಳಿಗೆ ನೈತಿಕ ಶಿಕ್ಷಣ ಬೇಕು.
ತರಗತಿ ಕೋಣೆಗಳು ಸಮಾಜದ ಪ್ರತಿಬಿಂಬ. ಶಿಕ್ಷಣ ಪಡೆದು ಶಿಕ್ಷಣ ಸಂಸ್ಥೆಗಳಿಂದ ಹೊರ ಬರುವ ಮಕ್ಕಳೇ ನಾಳಿನ ಪ್ರಜೆಗಳು. ಸಮಾಜವೆಂದರೆ ನಾವೇ ಹೊರತು ಬೇರೆ ಯಾವುದೂ ಅಲ್ಲ. ಹಾಗಾಗಿ ನಮ್ಮನ್ನು, ನಮ್ಮ ಪರಿಸರವನ್ನು ಬಿಟ್ಟು ಸಮಾಜಕ್ಕೆ ಬೇರೆ ಅಸ್ತಿತ್ವವಿಲ್ಲ.
ನೈತಿಕತೆ ಸಾಮಾಜಿಕ ವ್ಯವಸ್ಥೆಯ ತಳಪಾಯವಾಗಬೇಕು. ಹೇಗೆ ಆರ್ಥಿಕ ಸಂಪತ್ತನ್ನು ಅಭಿವೃದ್ಧಿ ಎನ್ನುತ್ತೇವೊ
ಅಂತೆಯೇ ಸಮುದಾಯದ ನೈತಿಕತೆ ಮಟ್ಟವೂ ಅಭಿವೃದ್ಧಿಯ ಭಾಗವಾಗಿ ಲೆಕ್ಕ ಹಾಕಲ್ಪಡಬೇಕು. ಕೇವಲ ಆರ್ಥಿಕತೆಯ ಲೆಕ್ಕಾಚಾರ, ಸಂಪತ್ತಿನ ಸಂಗ್ರಹ, ವಾಣಿಜ್ಯ ದೃಷ್ಟಿಕೋನದ ಅಭಿವೃದ್ಧಿಯನ್ನೇ ಅಭಿವೃದ್ಧಿ ಎನ್ನುವುದು ಪಾರ್ಶ್ವ ಪೀಡಿತ, ರೋಗಗ್ರಸ್ತ ವ್ಯವಸ್ಥೆ. ಅದು ಹೆಚ್ಚಾಗುವಿಕೆ ಅಷ್ಟೆ ಬೆಳವಣಿಗೆಯಲ್ಲ.
ಶಿಕ್ಷಣ ಎಲ್ಲದಕ್ಕೂ ತಳಪಾಯ. ಅದಕ್ಕಾಗಿ ಶೈಕ್ಷಣಿಕವಾಗಿ ಏನು ಮಾಡಬೇಕು ಎಂಬುದೇ ದೊಡ್ಡ ಸವಾಲು. ಸದ್ಯದ ಶೈಕ್ಷಣಿಕ ಪರಿಸರದಲ್ಲಿ ಇದು ಅಪ ರಿಹಾರ್ಯ. ಪರಿಹಾರಾತ್ಮಕ ವಾಗಿ ಹೇಳುವುದಾದರೆ, ನೈತಿಕ ಶಿಕ್ಷಣಕ್ಕೆ ಈಗಿರುವ ಪಠ್ಯಗಳೇ ಸಾಕು. ಪ್ರತೀ ತರಗತಿಗಳ, ಪ್ರತೀ ಪಾಠಗಳಿಗೆ ಅದರದ್ದೇ ಆದ ಆಶಯಗಳಿವೆ. ಆ ಆಶಯಗಳೇ ನೈತಿಕತೆಯನ್ನು (ನೈತಿಕತೆ ಎಂದರೇನು ಎಂಬುದು ಬೇರೆಯೇ ವಿಚಾರ)ಬೆಳೆಸುವ, ಬದುಕಿನ ಅನುಭವ ನೀಡುವ, ವಾಸ್ತವ ಪ್ರಪಂಚದ ಅರಿವು ಮೂಡಿಸುವ, ನಾಗರಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ, ಶ್ರಮ ಮತ್ತು ಕುಟುಂಬ ಸಂಸ್ಕೃತಿಯನ್ನು ಪೋಷಿಸುವ, ರಾಷ್ಟ್ರಭಕ್ತಿಯನ್ನು ಉದ್ದೀಪಿಸುವುದೇ ಮೊದಲ ವೈಯಕ್ತಿಕ ಮತ್ತು ಸಾಮುದಾಯಿಕ ನೈತಿಕತೆಯ ಪಾಠಗಳೇ ಆಗಿವೆ. ಮೊದಲಾಗಿ ಇಂತಹ ಆಶಯಗಳನ್ನು ಈಡೇರಿಸುವ ನೆಲೆ ಯಲ್ಲಿ ಬೋಧನಾ ಪ್ರಕ್ರಿಯೆಗಳು ನಡೆಯುವಂತೆ ಮಾಡಲು ಶೈಕ್ಷಣಿಕ ವ್ಯವಸ್ಥೆಯನ್ನು ಬದಲು ಮಾಡಬೇಕು.
ಇವತ್ತು ಶಾಲೆಗಳೆಲ್ಲ ಕೇವಲ ಅಂಕಕ್ಕಾಗಿ, ಪಾಸು ಮಾಡು ವುದಕ್ಕಾಗಿ, ಸ್ಪರ್ಧೆಗಾಗಿ, ಔದ್ಯೋಗಿಕ ಉದ್ದೇಶಗಳಿಗಾಗಿ ಮಕ್ಕಳನ್ನು ತಯಾರು ಮಾಡುವ ಅಖಾಡಗಳಾಗಿವೆ. ಇದನ್ನು ಬದಲಾಯಿಸಲು ಕಲಿಸುವ ವ್ಯವಸ್ಥೆಯನ್ನು ಬಲಪಡಿಸಬೇಕು. ಕೊರತೆಯಲ್ಲೇ ಸಾಗುವ ಶಾಲೆಗಳನ್ನು ಯಾವುದೇ ತಾರತಮ್ಯವಿಲ್ಲದೆ, ಏಕರೂಪದ ಶೈಕ್ಷಣಿಕ ವ್ಯವಸ್ಥೆಯಡಿಗೆ ತರಬೇಕು. ಪಾಸು-ಫೈಲಿಗಷ್ಟೇ (ಶೈಕ್ಷಣಿಕವಾಗಿ ಫೈಲು ಎಂಬ ವ್ಯವಸ್ಥೆ ಅವೈಜ್ಞಾನಿಕ, ಅನೈತಿಕ) ಸೀಮಿತವಾಗಿರುವ ಪರೀಕ್ಷೆ ಫಲಿತಾಂಶ ಪದ್ಧತಿಯನ್ನು ಕೈಬಿಡಬೇಕು. ಶೈಕ್ಷಣಿಕ ಆದ್ಯತೆಗಳೆಲ್ಲ ಮಗು ಕೇಂದ್ರಿತವಾಗಿ ಮರು ನಿರೂಪಿತವಾಗಬೇಕು ಮತ್ತು ನಾವೆಲ್ಲ ಬಯಸುವ, ನಿರೀಕ್ಷಿಸುವ ನೈತಿಕತೆಯನ್ನು ಬೆಳೆಸುವ ತಳಪಾಯದಲ್ಲಿ ಶಿಕ್ಷಣ ಸಂಸ್ಥೆಗಳು ಬದಲಾಗಬೇಕು.
- ರಾಮಕೃಷ್ಣ ಭಟ್,
ಚೊಕ್ಕಾಡಿ ಬೆಳಾಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.