ಭರವಸೆ ಈಡೇರಿಸಲು ವಿಫಲ: ತನ್ನ ಕೆನ್ನೆಗೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡ ಕಾರ್ಪೋರೇಟರ್
Team Udayavani, Aug 1, 2023, 2:36 PM IST
ಆಂಧ್ರಪ್ರದೇಶ: ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸದ ಕಾರಣಕ್ಕೆ ಅನಕಪಲ್ಲಿ ಜಿಲ್ಲೆಯ ಕೌನ್ಸಿಲರ್ ಸೋಮವಾರ ಸಭೆಯ ಮಧ್ಯದಲ್ಲಿ ಮಾತನಾಡುತ್ತಾ ತನ್ನ ಚಪ್ಪಲಿಯಿಂದ ತನ್ನ ಕೆನ್ನೆಗೆ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ.
ನರಸೀಪಟ್ಟಣ ಪುರಸಭೆಯ (ವಾರ್ಡ್ 20) ಕೌನ್ಸಿಲರ್ ಮುಲಪರ್ತಿ ರಾಮರಾಜು ಕೌನ್ಸಿಲ್ ಸಭೆಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾನು ಕೌನ್ಸಿಲರ್ ಆಗಿ ಆಯ್ಕೆಯಾಗಿ 31 ತಿಂಗಳಾಗಿದೆ ಆದರೆ ನನ್ನ ವಾರ್ಡ್‌ನಲ್ಲಿನ ಒಳಚರಂಡಿ, ವಿದ್ಯುತ್, ನೈರ್ಮಲ್ಯ, ರಸ್ತೆ ಸೇರಿದಂತೆ ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ನನಗೆ ಸಾಧ್ಯವಾಗುತ್ತಿಲ್ಲ, ”ಎಂದು ರಾಮರಾಜು ಅಸಮಾಧಾನ ತೋಡಿಕೊಂಡಿದ್ದಾರೆ, ಅಧಿಕಾರಿಗಳು ಬೇರೆ ಎಲ್ಲ ವಾರ್ಡ್ ನ ಸಮಸ್ಯೆಗಳಿಗೆ ಗಮನ ಕೊಟ್ಟಿದ್ದಾರೆ ಕೇವಲ ನನ್ನ ವಾರ್ಡಿನ ಸಮಸ್ಯೆಗಳನ್ನು ಮಾತ್ರ ಈಡೇರಿಸಲಿಲ್ಲ, ಇದೆ ಬೇಸರದಲ್ಲಿದ್ದ ಕೌನ್ಸಿಲರ್ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ತನ್ನ ಅಳಲನ್ನು ತೋಡಿಕೊಂಡು ತನ್ನದೇ ಚಪ್ಪಲಿಯಿಂದ ಕೆನ್ನೆಗೆ ಹೊಡೆದುಕೊಂಡಿದ್ದಾರೆ.
ಆಟೋರಿಕ್ಷಾ ಓಡಿಸುವ ಮೂಲಕ ಜೀವನ ಸಾಗಿಸುತ್ತಿರುವ 40 ವರ್ಷ ವಯಸ್ಸಿನ ಕೌನ್ಸಿಲರ್ ಊರಿನ ಜನರ ಒಮ್ಮತದ ಮೇಲೆ ಕೌನ್ಸಿಲರ್ ಆಗಿ ನೇಮಕಗೊಂಡಿದ್ದರು ಆದರೆ ಕೌನ್ಸಿಲರ್ ಆಗಿ ನೇಮಕವಾದಾಗಿನಿಂದ ಇಂದಿನ ವರೆಗೆ ನನ್ನ ವಾರ್ಡಿನ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ ಎಂದು ಕೊರಗಿದ್ದಾರೆ.
During the Narsipatnam municipal meeting of the Anakapalli district, #AndhraPradesh #TDP councillor Ramaraju hit himself with his slippers, blaming his own fate, to express his frustration because despite winning for 30 months, he could not do any task. pic.twitter.com/1ZeLWSOSXj
— Mohd Lateef Babla (@lateefbabla) July 31, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.