![KJ-Goerge](https://www.udayavani.com/wp-content/uploads/2025/02/KJ-Goerge-415x249.jpg)
![KJ-Goerge](https://www.udayavani.com/wp-content/uploads/2025/02/KJ-Goerge-415x249.jpg)
Team Udayavani, Aug 1, 2023, 6:51 PM IST
ಕುಣಿಗಲ್ : ಆಟೋ ರಿಕ್ಷಾ ಕಿಟ್‌ಗಳಿಗೆ ರೀಫಿಲಿಂಗ್ ಮಾಡಲು ಆಕ್ರಮವಾಗಿ ಸಂಗ್ರಹಿಸಿ ಇಟ್ಟಿದ ಗ್ಯಾಸ್ ಸಿಲಿಂಡರ್ ಶೆಡ್ ಮೇಲೆ ಮಿಂಚಿನ ದಾಳಿ ನೆಡೆಸಿದ ಕುಣಿಗಲ್ ಪೊಲೀಸರು ವಿವಿಧ ಇಂಧನ ಕಂಪನಿಗೆ ಸೇರಿದ ಲಕ್ಷಾಂತರೂ ಮೌಲ್ಯದ 269 ಸಿಲಿಂಡರ್, ರೀಫಿಲಿಂಗ್ ಸಾಮಾಗ್ರಿ, ಬೊಲೆರೋ ವಾಹನವನ್ನು ವಶಕ್ಕೆ ಪಡೆದ, ಘಟನೆ ತಾಲೂಕಿನ ಕಸಬಾ ಹೋಬಳಿ ಬೋರಲಿಂಗನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಬೋರಲಿಂಗನಪಾಳ್ಯ ಗ್ರಾಮದ ಕುಮಾರ್ ಎಂಬುವರು ಆಟೋ ರಿಕ್ಷಾ ಕಿಟ್‌ಗಳಿಗೆ ರೀಫಿಲಿಂಗ್ ಮಾಡಲು ಬೋರಲಿಂಗನಪಾಳ್ಯ ಗ್ರಾಮದ ನೇರಳೆ ಮಾರಮ್ಮನ ದೇವಸ್ಥಾನದ ಹಿಂಭಾಗದ ಲೇಔಟ್ ಬಳಿಯ ತೆಂಗಿನ ತೋಟದ ಶೆಡ್‌ನಲ್ಲಿ ಆಕ್ರಮವಾಗಿ ಸಿಲಿಂಡರ್‌ಗಳನ್ನು ಶೇಖರಣೆ ಮಾಡಿ ಇಟ್ಟಿದ್ದರು, ಖಚಿತ ಮಾಹಿತಿ ಮೇರೆಗೆ ಕುಣಿಗಲ್ ವೃತ್ತ ನಿರೀಕ್ಷಕ ವಿ.ಎಂ.ಗುರುಪ್ರಸಾದ್ ಅವರ ನೇತೃತ್ವದಲ್ಲಿ ಪೊಲೀಸರು ಕಳೆದ ರಾತ್ರಿ ದಾಳಿ ನಡೆಸಲು ಮುಂದಾದರು ಪೊಲೀಸರ ವಾಹನ ಬರುವುದನ್ನು ಗಮನಿಸಿದ ಆರೋಪಿ ಕುಮಾರ್, ಶೆಡ್‌ಗೆ ಬೀಗ ಹಾಕಿ ಅಲ್ಲಿಂದ ಪರಾರಿಯಾದನ್ನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳಿಕ ಪೊಲೀಸರು ಶೆಡ್ ಬೀಗವನ್ನು ತೆಗೆದಾಗ ಶೆಡ್ ಒಳಗೆ ಗೋ ಗ್ಯಾಸ್ ಕಂಪನಿಯ ತುಂಬಿದ ಡೋಮಾಸ್ಟಿಕ್ ಸಿಲಿಂಡರ್ 160 ಖಾಲಿ ಸಿಲಿಂಡರ್ 20 ಹೆಚ್.ಪಿ ಕಂಪನಿಯ ತುಂಬಿದ ವಾಣಿಜ್ಯ ಸಿಲಿಂಡರ್ 18, ಖಾಲಿ ಸಿಲಿಂಡರ್ ೫೮, ಇಂಡಿಯನ್ ವಾಣಿಜ್ಯ ಸಿಲಿಂಡರ್ 2, ಮಿನಿ ಖಾಲಿ ಸಿಲಿಂಡರ್ 10, ಆಟೋ ಕಿಟ್ ಖಾಲಿ ಸಿಲಿಂಡರ್ 1 ಸೇರಿದಂತೆ ಒಟ್ಟು 269 ಸಿಲಿಂಡರ್ ಹಾಗೂ ಸಿಲಿಂಡರ್ ರೀಫಿಲಿಂಗ್ ಸಾಮಾಗ್ರಿಗಳು, ಸಿಲಿಂಡರ್ ಸಾಗಾಣೆ ಮಾಡುವ ಬೋಲೇರೋ ಗಾಡಿಯನ್ನು ವಶಕ್ಕೆ ಪಡೆದರು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ದಾಳಿಯಲ್ಲಿ ಕಾನ್ಸ್ಟೇಬಲ್‌ಗಳಾದ ಮಲ್ಲಿಕಾರ್ಜುನ್, ಪುಟ್ಟರಾಜು, ಷಡಕ್ಷರಿ ಮತ್ತಿತರರು ಪಾಲ್ಗೊಂಡಿದರು.
Kunigal: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.. ಮಹಿಳೆ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ
B.Y.Vijayendra: ನನಗೆ ನನ್ನ ತಂದೆಯೇ ರಾಜಕೀಯ ಗುರು; ಬಿ.ವೈ.ವಿಜಯೇಂದ್ರ
Congress: ಹೈಕಮಾಂಡ್ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್.ರಾಜಣ್ಣ
Tumkur: ಪರಂ, ರಾಜಣ್ಣ ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್
Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ
Pending: ಸರಕಾರಿ ಕಚೇರಿಗಳ 6 ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿ: ಸಚಿವ ಕೆ.ಜೆ.ಜಾರ್ಜ್
Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್
Mahakumbh; ಪ್ರಯಾಗ್‌ರಾಜ್ ಸಂಗಮ್ ನಿಲ್ದಾಣ ಫೆ.28ರ ವರೆಗೆ ಬಂದ್
ಹಾವು, ಮೊಸಳೆಗಳಿದ್ದ ಹಾದಿಯಲ್ಲಿ ದಿನಕ್ಕೆ 12 ಗಂಟೆ “ಅಕ್ರಮ’ ಪಯಣ
Champions Trophy; ಕರಾಚಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತದ ತ್ರಿವರ್ಣ ಧ್ವಜವಿಲ್ಲ?
You seem to have an Ad Blocker on.
To continue reading, please turn it off or whitelist Udayavani.