ತಂಬಾಕು ಉತ್ಪನ್ನಗಳ ರಫ್ತಿಗೆ ಸ್ವಯಂಚಾಲಿತ ತೆರಿಗೆ ರಿಫಂಡ್ ಇಲ್ಲ
Team Udayavani, Aug 2, 2023, 7:36 AM IST
ನವದೆಹಲಿ: ತಂಬಾಕು, ಪಾನ್ ಮಸಾಲಾ ಸೇರಿದಂತೆ ಹಲವು ವಸ್ತುಗಳ ರಫ್ತಿಗೆ ಅಕ್ಟೋಬರ್ 1ರಿಂದ ಏಕೀಕೃತ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್ಟಿ) ಅನ್ವಯ ಸ್ವಯಂ ಚಾಲಿತವಾಗಿ ತೆರಿಗೆ ಮೊತ್ತ ರಿಫಂಡ್ ಆಗಲಾರದು. ಅಂಥ ವಸ್ತುಗಳನ್ನು ರಫ್ತು ಮಾಡುವ ವ್ಯಕ್ತಿಗಳು, ಸಂಸ್ಥೆಗಳು ತಮ್ಮ ತಮ್ಮ ವ್ಯಾಪ್ತಿಯ ತೆರಿಗೆ ಕಚೇರಿಗಳ ಮೂಲಕ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಕ್ಲೇಮು ಮಾಡುವ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ತಿಳಿಸಿದೆ. ತಂಬಾಕು, ಪಾನ್ ಮಸಾಲಾ, ಗುಟ್ಕಾ, ಸಿಗರೇಟ್ ಮತ್ತು ಸಿಗಾರ್ಗಳಿಗೆ ಬಳಕೆ ಮಾಡುವ ತಂಬಾಕು ಉತ್ಪನ್ನಗಳಿಗೆ ಸೇರಿಸುವ ಅಂಶಗಳು, ಹುಕ್ಕಾಗಳಿಗೆ ಐಜಿಎಸ್ಟಿ ಮೂಲಕ ಸ್ವಯಂಚಾಲಿತವಾಗಿ ತೆರಿಗೆ ರಿಫಂಡ್ ಆಗುತ್ತಿತ್ತು. ಜತೆಗೆ ಆ ವಸ್ತುಗಳಿಗೆಲ್ಲ ಶೇ.28 ಐಜಿಎಸ್ಟಿ ಮತ್ತು ಸೆಸ್ ವಿಧಿಸಲಾಗುತ್ತಿದೆ.
ವಿವಿಧ ಹಂತಗಳಲ್ಲಿ ಅಧಿಕಾರಿಗಳೇ ಉತ್ಪನ್ನಗಳನ್ನು ಪರಿಶೀಲನೆ ಮಾಡುವ ಮೂಲಕ ತೆರಿಗೆ ವಂಚನೆ ತಡೆಯುವುದು, ಎಲ್ಲ ಹಂತದಲ್ಲಿಯೂ ಕ್ರಮಬದ್ಧವಾಗಿ ತೆರಿಗೆ ಪಾವತಿ ನಿಯಮಿತವಾಗಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.