ನಕಲಿ ಇ ಮೇಲ್ ಐಡಿ ಮೂಲಕ 3.56 ಲ.ರೂ.ವಂಚನೆ
Team Udayavani, Aug 2, 2023, 12:13 AM IST
ಮಂಗಳೂರು: ಗೆಳೆಯನ ಹೆಸರಿನಲ್ಲಿ ನಕಲಿ ಇ ಮೇಲ್ ಐಡಿ ಸೃಷ್ಟಿಸಿ ಅದರ ಮೂಲಕ ಸಂದೇಶ ಕಳುಹಿಸಿ 3.56 ಲಕ್ಷ ರೂ. ಪಡೆದು ವಂಚಿಸಿದ ಘಟನೆ ನಡೆದಿದೆ.
ದೂರುದಾರರ ಸ್ನೇಹಿತನಾದ ಕ್ಯಾ| ಜಾನ್ ಪ್ರಸಾದ್ ಮಿನೇಜಸ್ ಅವರ ಹೆಸರಿನಲ್ಲಿ ನಕಲಿ ಇ ಮೇಲ್ ಐಡಿ ಸೃಷ್ಟಿಸಿದ ಆರೋಪಿ ತನ್ನನ್ನು ಜಾನ್ ಪ್ರಸಾದ್ ಮಿನೇಜಸ್ ಎಂದು ಬಿಂಬಿಸಿಕೊಂಡು ತಾನು ಮಗನ ಮಗುವನ್ನು ನೋಡಲು ಲಂಡನ್ಗೆ ಹೋಗಿದ್ದು ಅಲ್ಲಿಂದ ವಾಪಸ್ ಬರುವಾಗ ಪತ್ನಿಯ ಅನಾರೋಗ್ಯದ ಕಾರಣ ವಿಮಾನ ತಪ್ಪಿ ಹೋಗಿದೆ.
ಹಾಗಾಗಿ ಮತ್ತೆ ವಿಮಾನದ ಟಿಕೆಟ್ ಪಡೆಯಲು ಹಣ ಬೇಕಾಗಿದ್ದು ತುರ್ತಾಗಿ ಹಣ ಕಳುಹಿಸುವಂತೆ ಜು.26ರಂದು ಇ ಮೇಲ್ ಸಂದೇಶದ ಮೂಲಕ ಕೇಳಿಕೊಂಡಿದ್ದ. ಇದನ್ನು ನಂಬಿದ ದೂರುದಾರರು ಜು. 26ರಿಂದ 31ರ ವರೆಗೆ ಒಟ್ಟು 3.56 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ. ಅನಂತರ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ.
ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.