ಹೊಸ ರೈಲ್ವೆ ಮಾರ್ಗ ಸಮೀಕ್ಷೆ ಏನಾಯ್ತು?
Team Udayavani, Aug 2, 2023, 3:24 PM IST
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ಹಾಗೂ ಗೌರಿ ಬಿದನೂರು ನಡುವೆ ಹೊಸ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸರ್ವೆ ಕಾರ್ಯ ನಡೆಸಿ ವರದಿ ನೀಡುವಂತೆ ಕೇಂದ್ರ ರೈಲ್ವೆ ಮಂಡಳಿ ಆದೇಶಿಸಿ ವರ್ಷ ಕಳೆದರೂ ಇಲ್ಲಿವರೆಗೂ ಹೊಸ ರೈಲು ಮಾರ್ಗಕ್ಕೆ ಸಮೀಕ್ಷೆ ನಡೆಯಿತಾ ಅಥವಾ ಇಲ್ಲವಾ? ಮಾರ್ಗ ಸಮೀಕ್ಷೆ ನಡೆದಿದ್ದರೆ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಏಕೆ ಆರಂಭಗೊಳ್ಳಲಿಲ್ಲ ಎಂಬ ಪ್ರಶ್ನೆ ಜಿಲ್ಲೆಯ ನಾಗರಿಕರಲ್ಲಿ ಮೂಡಿದೆ.
ರಾಷ್ಟ್ರ ರಾಜಧಾನಿ ದೆಹಲಿಗೆ ಕರ್ನಾಟದಿಂದ ಹೆಚ್ಚು ರೈಲ್ವೆ ಸಂಪರ್ಕ ಜಾಲ ಹೊಂದಿರುವ ಜಿಲ್ಲೆಯ ಗೌರಿ ಬಿದ ನೂರಿನಿಂದ ಚಿಕ್ಕಬಳ್ಳಾಪುರಕ್ಕೆ ಹೊಸ ರೈಲು ಮಾರ್ಗಕ್ಕೆ ಅಂತಿಮ ಸರ್ವೆ ನಡೆಸಲು 2022ರ ಜುಲೈ 26 ರಂದು ಕೇಂದ್ರ ಸರ್ಕಾರದ ರೈಲ್ವೆ ಮಂಡಳಿ ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಬಹುಪಾಲು ರೈಲು ಗೌರಿಬಿದನೂರು ಮೂಲಕ: ಆದರೆ, ವರ್ಷ ಕಳೆದರೂ ಹೊಸ ರೈಲ್ವೆ ಮಾರ್ಗ ಸ್ಥಾಪನೆಗೆ ಸಮೀಕ್ಷೆ ನಡೆಯಿತಾ, ಇಲ್ಲವಾ ಎನ್ನುವುದರ ಬಗ್ಗೆ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಚಕಾರ ಎತ್ತದೇ ಮೌನವಹಿಸಿರುವುದು ಎದ್ದು ಕಾಣುತ್ತಿದೆ. ಈಗಾಗಲೇ ಜಿಲ್ಲೆಯ ಗುಡಿಬಂಡೆ, ಬಾಗೇಪಲ್ಲಿ ಬಿಟ್ಟರೆ ಎಲ್ಲಾ ತಾಲೂಕುಗಳಿಗೆ ರೈಲ್ವೆ ಸಂಪರ್ಕ ಇದೆ. ಅದರಲ್ಲೂ ಜಿಲ್ಲೆಯ ಆಂಧ್ರದ ಗಡಿಯಲ್ಲಿರುವ ಅನಂತ ಪುರ, ಹಿಂದೂಪುರಕ್ಕೆ ಕೂಗಳತೆಯ ದೂರದಲ್ಲಿರುವ ಗೌರಿಬಿದನೂರು ಹೆಚ್ಚು ರೈಲ್ವೆ ಸೌಲಭ್ಯ ಹೊಂದಿದ್ದು, ದೆಹಲಿ ಸೇರಿದಂತೆ ಉತ್ತರ ಭಾರತದ ಕಡೆ ಪ್ರಯಾ ಣಿಸುವ ಬಹುಪಾಲು ರೈಲುಗಳು ಗೌರಿಬಿದನೂರು ಮೂಲಕವೇ ಹಾದು ಹೋಗುತ್ತವೆ.
ಹೆಚ್ಚು ರೈಲು ಸಂಪರ್ಕ ನಿರೀಕ್ಷೆ: ಇಂತಹ ಸಂದರ್ಭ ದಲ್ಲಿ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಡುವೆ ರೈಲ್ವೆ ಸಂಪರ್ಕ ಕಲ್ಪಿಸಲು ಕೇಂದ್ರದ ರೈಲ್ವೆ ಮಂಡಳಿ ಹೊಸ ಮಾರ್ಗ ಸ್ಥಾಪನೆಗೆ ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು. ಇದು ಸಹಜವಾಗಿಯೇ ಜಿಲ್ಲೆಯ ರೈಲ್ವೆ ಪ್ರಯಾಣಿಕರಲ್ಲಿ ಹರ್ಷ ತಂದಿತ್ತು. ಸಂಪರ್ಕ ಕಲ್ಪಿಸುವು ದರಿಂದ ಚಿಕ್ಕಬಳ್ಳಾಪುರ ವಯಾ ಗೌರಿಬಿದನೂರಿಗೆ ಹಾಗೂ ಗೌರಿಬಿದನೂರು ವಯಾ ಚಿಕ್ಕಬಳ್ಳಾಪುರ ಮೂಲಕ ಕೋಲಾರ, ಬಂಗಾರಪೇಟೆ ಆ ಮೂಲಕ ಚೆನ್ನೈ, ತಿರುಪತಿಗೆ ಹೆಚ್ಚು ರೈಲ್ವೆ ಸೌಕರ್ಯ ಸಿಗುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ ಇದ್ದರು.
ಸಂಸದರ ನಿರ್ಲಕ್ಷ್ಯ: ಆದರೆ, ಸಮೀಕ್ಷೆ ಕಾರ್ಯ ಮುಗಿದಿದೆಯೆ? ಇಲ್ಲವಾ? ಸಮೀಕ್ಷೆ ಕಾರ್ಯ ಎಲ್ಲಿಗೆ ಬಂದು ನಿಂತಿದೆ. ಸಮೀಕ್ಷೆ ಮುಗಿದಿದ್ದರೆ ರೈಲ್ವೆ ಕಾಮಗಾರಿ ಯಾವಾಗ ಶುರುವಾಗುತ್ತದೆ ಎಂಬುದರ ಬಗ್ಗೆ ಬೆನ್ನತ್ತಬೇಕಿದ್ದ ಜಿಲ್ಲೆಯ ಸಂಸದರು, ಜಿಲ್ಲೆಗೂ ತಮಗೂ ಸಂಬಂಧ ಇಲ್ಲದಂತೆ ಹಲವು ತಿಂಗಳಿಂದ ಜಿಲ್ಲೆಯನ್ನು ಸಂಪೂರ್ಣ ಮರೆತು ಬಿಟ್ಟಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
1.10 ಕೋಟಿ ಅನುದಾನ ಬಿಡುಗಡೆ: ಜಿಲ್ಲಾ ಕೇಂದ್ರವಾಗಿರುವ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಡುವೆ ಬರೋಬ್ಬರಿ 44 ಕಿ.ಮೀ ಅಂತರ ಇದ್ದು, 44 ಕಿ.ಮೀ ರೈಲ್ವೆ ಹಳಿ ನಿರ್ಮಾಣಕ್ಕೆ ಸರ್ವೆ ಕಾರ್ಯ ನಡೆಸುವಂತೆ ಹುಬ್ಬಳ್ಳಿಯ ನೈರುತ್ಯ ಇಲಾಖೆಯ ಜನರಲ್ ಮ್ಯಾನೇಜರ್‌ಗೆ ಕೇಂದ್ರದ ರೈಲ್ವೆ ಮಂಡಳಿ ಆದೇಶೀಸಿತ್ತು. ಇದಕ್ಕಾಗಿ ಬರೋಬ್ಬರಿ 1.10 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.
ಜಿಲ್ಲೆಗಿಲ್ಲ ಹೆಚ್ಚು ರೈಲು ಸೌಲಭ್ಯ: ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ ತಾಲೂಕುಗಳಿಗೆ ರೈಲ್ವೆ ಸಂಪರ್ಕ ಇದೆಯಾದರೂ ಹೆಚ್ಚಿನ ರೈಲುಗಳ ಓಡಾಟ ಇಲ್ಲ. ಪ್ಯಾಸೆಂಜರ್ ರೈಲುಗಳು ಹೊರತುಪಡಿಸಿದರೆ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಮೊದಲೇ ಇಲ್ಲ. ಇಂತಹ ಸಂದರ್ಭದಲ್ಲಿ ಕೇಂದ್ರದ ರೈಲ್ವೆ ಮಂಡಳಿ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ನಡುವೆ ಹೊಸ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ನೀಡಿ ವರ್ಷ ಕಳೆದರೂ ಸಮೀಕ್ಷೆ ವಿಚಾರದಲ್ಲಿ ಏನಾಗಿದೆ ಎಂಬುದರ ಬಗ್ಗೆ ಜಿಲ್ಲೆಯ ಜನತೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಪ್ರಯಾಣಿಕರಿಗೆ ಅನುಕೂಲ: ಚಿಕ್ಕಬಳ್ಳಾಪುರ ಜಿಲ್ಲೆಯಾದ ನಂತರ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆ, ಉತ್ತಮ ಶಿಕ್ಷಣ ಸೌಲಭ್ಯವಿರುವುದರಿಂದ ಉನ್ನತ ವ್ಯಾಸಂಗ, ತರಕಾರಿ, ಹೂ ಹಣ್ಣಿನ ವ್ಯಾಪಾರ ಕೇಂದ್ರವಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಕೂಲಿ ಕಾರ್ಮಿಕರು ಸೇರಿದಂತೆ ಸಾವಿರಾರು ಜನ ಓಡಾಡು ತ್ತಾರೆ. ನಂದಿ ಬೆಟ್ಟ ಸುತ್ತಮುತ್ತಲಿನ ಪ್ರದೇಶಗಳಿ ಗೂ ಭೇಟಿ ನೀಡುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರ ತ್ವರಿತವಾಗಿ ಗೌರಿಬಿದನೂರು-ಚಿಕ್ಕಬಳ್ಳಾಪುರ ನಡುವೆ ಶೀಘ್ರ ರೈಲ್ವೆ ಮಾರ್ಗ ನಿರ್ಮಿಸಿ ರೈಲು ಸೌಲಭ್ಯ ಒದಗಿಸಿದರೆ ಅನು ಕೂಲವಾಗಲಿದೆ ಎನ್ನುತ್ತಾರೆ ಮಂಚೇನಹಳ್ಳಿ ತಾಲೂಕಿನ ಹಳೇಹಳ್ಳಿಯ ಎಚ್.ಎನ್.ಕಿರಣ್ ಕುಮಾರ್.
2019 ರಲ್ಲಿ ಪತ್ರ ಬರೆದಿದ್ದ ಶಿವಶಂಕರರೆಡ್ಡಿ : ಜಿಲ್ಲೆಯ ಗೌರಿಬಿದನೂರು – ಚಿಕ್ಕಬಳ್ಳಾಪುರ ನಗರಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಚಿಕ್ಕಬಳ್ಳಾಪುರಕ್ಕೆ ಹೋಗಿ ಬರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು 2019 ರಲ್ಲಿ ರೈಲ್ವೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಅವರನ್ನು ಖುದ್ದು ಭೇಟಿಯಾಗಿ ಗೌರಿಬಿದನೂರು- ಚಿಕ್ಕಬಳ್ಳಾಪುರ ನಗರಕ್ಕೆ ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೋರಿ ಗೌರಿಬಿದನೂರು ಕ್ಷೇತ್ರದ ಆಗಿನ ಶಾಸಕರಾಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಮನವಿ ಸಲ್ಲಿಸಿದ್ದರು.
ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ನಡುವೆ ಹೊಸ ಮಾರ್ಗ ಸಮೀಕ್ಷೆ ಕಾರ್ಯಕ್ಕೆ ಒಂದು ವರ್ಷದ ಹಿಂದೆಯೇ ಕೇಂದ್ರದ ರೈಲ್ವೆ ಮಂಡಳಿ ಆದೇಶಿಸಿ ಅನುದಾನ ಸಹ ಬಿಡುಗಡೆ ಮಾಡಿತ್ತು. ಆದರೆ, ಈ ಬಗ್ಗೆ ಏನಾಗಿದೆ ಎಂದು ಕ್ಷೇತ್ರದ ಸಂಸದರು ಕೇಳಬೇಕು, ಸಂಬಂಧಪಟ್ಟ ರೈಲ್ವೆ ಸಚಿವರ ಬಳಿ ಹೋಗಿ ಸಂಸದರು ಒತ್ತಡ ತಂದರೆ ರೈಲ್ವೆ ಕಾಮಗಾರಿ ಆರಂಭವಾಗುತ್ತದೆ. -ಡಾ.ಜಿ.ವಿ.ಮಂಜುನಾಥ, ಕೇಂದ್ರ ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿ ಸದಸ್ಯರು, ಚಿಕ್ಕಬಳ್ಳಾಪುರ
– ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.