ತನ್ನ ಭಾವನನ್ನೇ ರಸ್ತೆ ಅಪಘಾತದಲ್ಲಿ ಸಾಯಿಸಲು ಯತ್ನಸಿದ ಭಾವಮೈದುನ ಅರೆಸ್ಟ್
Team Udayavani, Aug 3, 2023, 8:23 AM IST
ಹೊಳೆಹೊನ್ನೂರು: ಸಮೀಪದ ಅರದೋಟ್ಲು ಬಳಿ ತನ್ನ ಭಾವನನ್ನು ರಸ್ತೆ ಅಪಘಾತದಲ್ಲಿ ಸಾಯಿಸಲು ಯತ್ನಿಸಿದ ಭಾವಮೈದುನನ್ನು ಪೊಲೀಸರು ಬಂಧಿಸಿದ್ದಾರೆ. ಭಾವಮೈದುನನ ವಿರುದ್ಧ 307 ಕೇಸ್ ದಾಖಲಾಗಿದೆ.
ಆನವೇರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಂಗಪ್ಪ(53) ಎಂಬವರಿಗೆ 17 ವರ್ಷಗಳ ಹಿಂದೆ ತನ್ನ ಅಕ್ಕನ ಮಗಳಾದ ಭಾಗ್ಯರನ್ನು ಮದುವೆಯಾಗಿದ್ದು ಅವರು ಸಹ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು.
ಈಗೆ ಎರಡುವರೆ ವರ್ಷಗಳ ಹಿಂದೆ ಉಪನ್ಯಾಸಕರಿಗೆ ಮತ್ತು ಹೆಂಡತಿ ಭಾಗ್ಯರಿಗೆ ಕುಟುಂಬದ ವಿಚಾರದಲ್ಲಿ ತಕಾರಾರು ಉಂಟಾಗಿದ್ದು ಮೂರು ಜನ ಮಕ್ಕಳಲ್ಲಿ ಒಬ್ಬಳು ಉಪನ್ಯಾಸಕರ ಬಳಿ ವಾಸವಾಗಿದ್ದರೆ ಉಳಿದ ಇಬ್ಬರು ಭಾಗ್ಯರವರ ಬಳಿ ವಾಸಿಸುತ್ತಿರುತ್ತಾರೆ.
ಹೆಂಡತಿ ಭಾಗ್ಯ ರಂಗಪ್ಪರನ್ನು ಬಿಟ್ಟು ಹೋದ ಮೇಲೂ ಆಗಿಂದಾಗ್ಗೆ ಪೋನ್ ಮಾಡಿ ಆಸ್ತಿ ಕೊಡು ಇಲ್ಲ ಅಂದ್ರೆ ನನ್ನ ತಮ್ಮ ಅಶೋಕ ಮತ್ತು ಅಣ್ಣಪ್ಪನಿಗೆ ಹೇಳಿ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಂಗಪ್ಪನವರು ಆಸ್ತಿ ಎಲ್ಲಾ ನಿನಗೆ ಕೊಡುತ್ತೇನೆ. ಮನೆಗೆ ಬಾ ಎಂದು ಕರೆದರೂ ಶಿಕ್ಷಕಿ ಮನೆಗೆ ಬಾರದೆ ಕಲ್ಲಿಹಾಳ್ ಸರ್ಕಲ್ ನಲ್ಲಿ ಅಣ್ಣನ ಮಗ ಅಣಪ್ಪ @ ಗುಂಡನೊಂದಿಗೆ ವಾಸವಾಗಿರುತ್ತಾರೆ. ನಿನ್ನೆ ಬೆಳಿಗ್ಗೆ ರಂಗಪ್ಪನವರು ದಾನವಾಡಿಯಿಂದ ಭದ್ರಾವತಿಗೆ ಹೋಗಿ ನೂತನವಾಗಿ ಕಟ್ಟಿಸುತ್ತಿರುವ ಮನೆಯನ್ನು ನೋಡಿಕೊಂಡು ವಾಪಸು ದಾನವಾಡಿ ಗ್ರಾಮಕ್ಕೆ ಹೋಗಲು ಅರದೊಟ್ಲು ಗ್ರಾಮದ ಮುಖಾಂತರ ಹೋಗುತ್ತಿರುವಾಗ ಹಿಂದಿನಿಂದ ಬಂದ ಲಗೇಜ್ ವಾಹನ ಉಪನ್ಯಾಸಕರ ಬೈಕ್ ಗೆ ಏಕಾಏಕಿ ಡಿಕ್ಕಿ ಹೊಡೆದಿದೆ.
ಈ ಪರಿಣಾಮ ಉಪನ್ಯಾಸಕ ಬೈಕ್ ಸಮೇತ ರಸ್ತೆಯ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದಿದ್ದಾರೆ. ನಂತರ ಸ್ಥಳೀಯರು ಡಿಕ್ಕಿ ಹೊಡೆದ ಲಗೇಜ್ ವಾಹನವನ್ನು ತಡೆದು ನಿಲ್ಲಿಸಿದ್ದು, ಅದರಲ್ಲಿದ್ದ ಚಾಲಕ ಮತ್ತು ಇನ್ನೊಬ್ಬನನ್ನು ಪ್ರಶ್ನಿಸಿದ್ದಾರೆ.
ವಾಹನದಲ್ಲಿ ರಂಗಪ್ಪನವರ ಪತ್ನಿಯ ಸಹೋದರ ಅಶೋಕ ಇರುವುದು ತಿಳಿದು ಬಂದಿದ್ದು, ಇನ್ನೊಬ್ಬ, ಚಾಲಕನ ಹೆಸರು ತಿಳಿದು ಬಂದಿಲ್ಲ. ನಂತರ ಗಾಯಗೊಂಡ ಉಮನ್ಯಾಸಕನನ್ನ ಹೊಳೆಹೊನ್ನೂರು ಸರಕಾರಿ ಆಸ್ಪತ್ರೆಗೆ ಹಾಗೂ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ಪ್ರಕರಣ ಹೊಳೆಹೊನ್ನೂರು ಠಾಣೆಯಲ್ಲಿ ದಾಖಲಿಸಲಾಗಿದೆ. ಕೊಲೆಗೆ ಯತ್ನಿಸಿದ ಭಾವಮೈದುನ ಅಶೋಕನನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Sagara: ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.