Sagara: ಗಾಂಜಾ ಸಾಗಾಣಿಕೆ; ಒಬ್ಬನ ಬಂಧನ
Team Udayavani, Aug 3, 2023, 4:02 PM IST
ಸಾಗರ: ಇಲ್ಲಿನ ವರದಹಳ್ಳಿ ಸರ್ಕಲ್‌ನ ಸೌಪರ್ಣಿಕ ಹೋಟೆಲ್ ಬಳಿ ಅಬಕಾರಿ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಗಾಂಜಾ ಸಾಗಿಸುತ್ತಿದ್ದ ಓರ್ವನನ್ನು ಆ.3 ರ ಗುರುವಾರ ವಶಕ್ಕೆ ಪಡೆದಿದ್ದಾರೆ.
ರಾಮನಗರದ ಅಹ್ಮದ್ ಹುಸೇನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಗಸ್ತಿನಲ್ಲಿದ್ದ ಅಬಕಾರಿ ಇಲಾಖೆ ಸಿಬ್ಬಂದಿಗಳು ಅಹ್ಮದ್ ಹುಸೇನ್ ನನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಬಳಿಯಿದ್ದ 53 ಗ್ರಾಂ. ಒಣ ಗಾಂಜಾ ಪತ್ತೆ ಮಾಡಲಾಗಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಸಂದೀಪ್ ಎಲ್.ಸಿ., ಉಪನಿರೀಕ್ಷಕ ಸಂತೋಷ್ ರಡ್ಡೇರ್, ವಿನ್ನಿ ಲೋಬೋ, ಸಿಬ್ಬಂದಿಗಳಾದ ಗುರುಮೂರ್ತಿ, ಅರುಣ್ ಜಿ.ಎಂ., ದೀಪಕ್ ಯು.ಪಿ., ಕನ್ನಯ್ಯ, ಮಹಾಬಲೇಶ್, ವಾಹನ ಚಾಲಕ ಗಣಪತಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಆತಂಕ ತಂದಿದ್ದ ʼಚೀನಾ ಬೆಳ್ಳುಳ್ಳಿ’; ಸುರಕ್ಷಿತ ಎಂದ ಲ್ಯಾಬ್ ವರದಿ
Sagara: ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿತನ: ಪೊಲೀಸರಿಂದ ಎಚ್ಚರಿಕೆ
Anandapura: ಮೋರಿ ಕುಸಿದು ಭಾರಿ ಗಾತ್ರದ ಗುಂಡಿ; ಗ್ರಾಮಸ್ಥರ ಆಕ್ರೋಶ
Sagara: ಒಂಬತ್ತನೇ ದಿನಕ್ಕೆ ಕಾಲಿರಿಸಿದ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
Sagara: ಕರ್ತವ್ಯ ಮಾಡಲು ಇಷ್ಟ ಇಲ್ಲ ಎಂದರೆ ಬೇರೆಡೆ ಹೋಗಿ; ಶಾಸಕ ಗೋಪಾಲಕೃಷ್ಣ ಬೇಳೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.