![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 3, 2023, 4:53 PM IST
ಚೆನ್ನೈ: ಇತ್ತೀಚೆಗಷ್ಟೇ ಖ್ಯಾತ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆಗೆ ಶರಣಾಗಿದ್ದ ಸುದ್ದಿಯ ಬೆನ್ನಲ್ಲೇ ಇದೀಗ 1980-90ರ ದಶಕದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದ ಖ್ಯಾತ ಹಾಸ್ಯ ನಟ ಮೋಹನ್ (60ವರ್ಷ) ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ ತಮಿಳುನಾಡಿನ ಮದುರೈನ ತಿರುಪರಂಕುಂದ್ರಂನ ಬೀದಿಯಲ್ಲಿ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:BJP ಅಧಿಕಾರಕ್ಕೆ ಬಂದಿದ್ದೆ ರಕ್ತ ಕ್ರಾಂತಿ ಮಾಡಿ: ಆರ್.ಎಂ.ಮಂಜುನಾಥ್ ಗೌಡ
ಕಮಲ್ ಹಾಸನ್ ನಟನೆಯ ಸೂಪರ್ ಹಿಟ್ ಸಿನಿಮಾ ತಮಿಳಿನ ಅಪೂರ್ವ ಸಹೋದರ್ ಗಳ್ ಹಾಗೂ ನಾನ್ ಕಡವುಳ್ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ಮೋಹನ್ ನಟಿಸಿದ್ದರು. ಆದರೆ ಇತ್ತೀಚೆಗೆ ಅವರಿಗೆ ಅವಕಾಶಗಳ ಕೊರತೆಯಿಂದಾಗಿ ತೀವ್ರ ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು. ಅಷ್ಟೇ ಅಲ್ಲ ನಟ ಮೋಹನ್ ತಿರುಪರಂಕುಂದ್ರಂನ ದೇವಸ್ಥಾನದ ಸಮೀಪ ಭಿಕ್ಷೆ ಬೇಡಿ ಜೀವನ ಕಳೆಯುತ್ತಿದ್ದರು ಎಂದು ವರದಿ ವಿವರಿಸಿದೆ.
ರಸ್ತೆಯಲ್ಲಿಯೇ ಕೊನೆಯುಸಿರೆಳೆದ ಮೋಹನ್ ಬಗ್ಗೆ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ನಂತರ ಗುರುತುಪತ್ತೆ ಹಚ್ಚಲಾಗಿತ್ತು ಎಂದು ವರದಿ ತಿಳಿಸಿದೆ.
ಬಾಲಾ ನಿರ್ದೇಶನದ ನಾನ್ ಕಡವುಳ್ ತಮಿಳು ಸಿನಿಮಾ 2009ರಲ್ಲಿ ತೆರೆಕಂಡಿತ್ತು. ಚಿತ್ರ ಭರ್ಜರಿ ಕಲೆಕ್ಷನ್ ಕೂಡಾ ಮಾಡಿತ್ತು. ಆದರೆ ಈ ಸಿನಿಮಾದಲ್ಲಿ ಮೋಹನ್ ನಟಿಸಿದ ನಂತರ ಯಾವುದೇ ಅವಕಾಶಗಳು ಸಿಕ್ಕಿರಲಿಲ್ಲವಾಗಿತ್ತು. ಈ ಹಿನ್ನೆಲೆಯಲ್ಲಿ ಮೋಹನ್ ತಮ್ಮ ಊರಾದ ತಿರುಪರಂಕುಂದ್ರಂಗೆ ತೆರಳಿದ್ದರು. ಕುಬ್ಜ ದೇಹದ ಮೋಹನ್ ಗೆ ಅಲ್ಲಿಯೂ ಸೂಕ್ತವಾದ ಕೆಲಸ ಸಿಗದೇ, ರಸ್ತೆಯಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವ ಸ್ಥಿತಿ ಬಂದೊದಗಿತ್ತು.
ಸುಮಾರು 10 ವರ್ಷಗಳ ಹಿಂದೆ ಮೋಹನ್ ಅವರ ಪತ್ನಿ ತೀರಿಕೊಂಡಿದ್ದರು. ಜುಲೈ 31ರಂದು ಮೋಹನ್ ಮೃತದೇಹ ಪತ್ತೆಯಾಗಿದ್ದು, ನಟನ ದೇಹ ಗುರುತಿಸಲಾಗದ ಸ್ಥಿತಿಯಲ್ಲಿದ್ದಿರುವುದಾಗಿ ವರದಿ ತಿಳಿಸಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.