ಕನವಳ್ಳಿಯಲ್ಲಿ 17ನೇ ಶತಮಾನದ ಅಪರೂಪದ ಶಿಲಾ ಶಾಸನ ಪತ್ತೆ
ಸಂಶೋಧಕ ಡಾ| ಶರಣಪ್ಪ ಬಸಪ್ಪ ಜಗ್ಗಲ ಅವರು ಈ ಶಾಸನ ಪತ್ತೆ ಮಾಡಿದ್ದಾರೆ.
Team Udayavani, Aug 3, 2023, 3:30 PM IST
ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದ ಸುರೇಶ ನಾಗಪ್ಪ ಕತ್ತೆಬೆನ್ನೂರು ಅವರಿಗೆ ಸೇರಿದ ಸರ್ವೇ ನಂಬರ್ 377/1ರ ಹೊಲದಲ್ಲಿ 17ನೇ ಶತಮಾನದ ಅಪರೂಪದ ಶಿಲಾ ಶಾಸನ ಪತ್ತೆಯಾಗಿದೆ.
ಶಾಸನ 6 ಸಾಲುಗಳ ಪಾಠ ಹೊಂದಿದ್ದು, 2 ಅಡಿ ಎತ್ತರ ಹಾಗೂ 1 ಅಡಿ ಅಗಲವಾಗಿದೆ. ನಗರದ ಗುದ್ಲೆಪ್ಪ ಹಳ್ಳಿಕೇರಿ
ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಮತ್ತು ಸಂಶೋಧಕ ಡಾ| ಶರಣಪ್ಪ ಬಸಪ್ಪ ಜಗ್ಗಲ ಅವರು ಈ ಶಾಸನ ಪತ್ತೆ ಮಾಡಿದ್ದಾರೆ.
ಕನವಳ್ಳಿ ಗ್ರಾಮದ ಕಮ್ಮಾರ ನಿಂಗಜ್ಜನ ಪುತ್ರನಾದ ಮಲಣ್ಣನು ಬೆರಿಂಗೆಯನ್ನು (ಬೆರಿಂಗೆ ಅಂದರೆ ರಂಧ್ರ ಕೊರೆಯುವ ವಸ್ತು) ಮಾಡಿ ಕೊಟ್ಟಿದ್ದಕ್ಕಾಗಿ ಈ ಗ್ರಾಮದ ಹೊಲ ಮಲಣ್ಣನ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ವಂಶಪಾರಂಪರ್ಯ ಸೂರ್ಯ-ಚಂದ್ರರಿರುವವರೆಗೂ ಸೇರಿದ್ದು ಎಂಬ ಮಾಹಿತಿ ದಾಖಲಿಸುತ್ತದೆ. ಶಾಸನದ ಕೆಳ ಭಾಗದಲ್ಲಿ ಕಮ್ಮಾರಿಕೆಯ ವಸ್ತುಗಳನ್ನು ಕಾಣಬಹುದು.
ಈ ಶಾಸನ ಕನವಳ್ಳಿ ಗ್ರಾಮದ ಹೆಸರು ಮತ್ತು ಅಂದು ಆ ಗ್ರಾಮದಲ್ಲಿ ಅಸ್ತಿತ್ವದಲ್ಲಿದ್ದ ಕಮ್ಮಾರಿಕೆಯ ಮಹತ್ವವನ್ನು ಕೂಡಾ ದಾಖಲಿಸುತ್ತದೆ. ಶಾಸನದ ಪಠ್ಯವನ್ನು ಓದಿ ಅರ್ಥೈಸಿದ ಡಾ| ರವಿಕುಮಾರ ನವಲಗುಂದ ಶಾಸನ ವಿದ್ವಾಂಸರು, ಸರಕಾರಿ ಪದವಿ ಪೂರ್ವ ಕಾಲೇಜು, ಬನ್ನಿಕೋಡು-ಹರಿಹರ ಅವರಿಗೆ ಸಂಶೋಧಕರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಶಾಸನ ಪತ್ತೆ ಮಾಡಲು ಸುರೇಶ ಕತ್ತೆಬೆನ್ನೂರು, ಡಯಾನ ಕತ್ತೆಬೆನ್ನೂರು, ಯಲ್ಲಪ್ಪ ಬರಡಿ, ಡಾ|ಎಸ್. ಆರ್. ಕೋರಿಶೆಟ್ಟರ್, ಪ್ರೊ| ಶರಣಪ್ಪ ಕದರಮಂಡಲಗಿ, ಹಂಪಿ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಡಿ.ವೀರೇಶ ಇತರರು ಸಹಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.