Moon: ಚಂದ್ರನ ಮೇಲೆ 3 ಪುಟಾಣಿ ರೋವರ್‌ಗಳು
2024ರಲ್ಲಿ ನಾಸಾದಿಂದ ರೊಬೊಟಿಕ್ ಪರಿಶೋಧನೆ ಯೋಜನೆ
Team Udayavani, Aug 4, 2023, 7:18 AM IST
ವಾಷಿಂಗ್ಟನ್: ಚಂದ್ರಯಾನ-3 ಯೋಜನೆ ಮೂಲಕ ಭಾರತವು ಚಂದ್ರನ ಮೇಲೆ ಲ್ಯಾಂಡರ್ ಮತ್ತು ರೋವರ್ ಇಳಿಸಲು ಮುಂದಾಗಿದೆ. ಇದೇ ವೇಳೆ ಅಮೆರಿಕದ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್(ನಾಸಾ) ತನ್ನ ರೊಬೊಟಿಕ್ ಪರಿಶೋಧನೆ ಯೋಜನೆ ಭಾಗವಾಗಿ, 2024ರಲ್ಲಿ ಚಂದ್ರನ ಮೇಲೆ ಮೂರು ಮಿನಿಯೇಚರ್ ರೋವರ್‌ಗಳನ್ನು ಇಳಿಸಲು ಯೋಜಿಸಿದೆ.
ರೊಬೋಟ್‌ಗಳು ಹೇಗೆ ಸ್ವಾಯತ್ತವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ನೇರ ಮಾನವ ಹಸ್ತಕ್ಷೇಪವಿಲ್ಲದೆ ಪರಸ್ಪರ ಸಹಕರಿಸುತ್ತವೆ ಎಂಬುದನ್ನು ನಿರೂಪಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಅಲ್ಲದೇ ಇದು ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳ ದಕ್ಷತೆಯನ್ನು ಹೆಚ್ಚಿಸಲಿದೆ.
ಸೂಟ್‌ಕೇಸ್ ಗಾತ್ರದ ಮೂರು ರೋವರ್‌ಗಳನ್ನು ಚಂದ್ರನ ರೈನರ್ ಗಾಮಾ ಪ್ರದೇಶದಲ್ಲಿ ನಿಯೋಜಿಸಲಾಗುತ್ತದೆ. ಇದು ಚಂದ್ರನಲ್ಲಿ ಸುಮಾರು 14 ಭೂಮಿಯ ದಿನಗಳು ಕಾರ್ಯನಿರ್ವಹಿಸಲಿವೆ. ಅಲ್ಲಿ ರೋವರ್‌ಗಳ ಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಯೋಗಕ್ಕೆ ಒಳಗಾಗಲಿದೆ ಎಂದು ನಾಸಾ ತಿಳಿಸಿದೆ.
“ಕಾರ್ಯವನ್ನು ಸ್ವಾಯತ್ತವಾಗಿ ಸಾಧಿಸಲು ಮೊಬೈಲ್ ರೋಬೋಟ್‌ಗಳ ನೆಟ್‌ವರ್ಕ್ ಒಟ್ಟಿಗೆ ಕೆಲಸ ಮಾಡಬಹುದು ಎಂಬುದನ್ನು ನಿರೂಪಿಸುವುದು ಈ ಯೋಜನೆಯ ಗುರಿಯಾಗಿದೆ. ಭವಿಷ್ಯದಲ್ಲಿ ಪರಿಶೋಧನೆಗಳಿಗೆ ಇದೊಂದು ಕ್ರಾಂತಿಯ ಹೆಜ್ಜೆಯಾಗಿದೆ. ಕಳುಹಿಸಬೇಕಾದ ರೋವರ್‌ಗಳ ಸಂಖ್ಯೆ ಮತ್ತು ಅವುಗಳ ಸಾಮೂಹಿಕ ಪಾತ್ರಗಳ ಬಗೆಗಿನ ಪ್ರಶ್ನೆಗಳಿಗೆ ಇದು ಉತ್ತರವಾಗಲಿದೆ’ ಎಂದು ನಾಸಾ ಜೆಟ್ ಪ್ರೊಪಲ್ಶನ್ ಪ್ರಯೋಗಾಲಯದ ಯೋಜನಾ ವ್ಯವಸ್ಥಾಪಕಿ ಶುಭಾ ಕೋಮಂದೂರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.