ಮುಂಗಾರು ಕಾಲದಲ್ಲಿ ಕರಡಿಗಳ ಬಗ್ಗೆ ಇರಲಿ ಎಚ್ಚರ…
Team Udayavani, Aug 3, 2023, 11:36 PM IST
ಹೊಸಪೇಟೆ: ಮುಂಗಾರು ಕಾಲದಲ್ಲಿ ಕಾಡಿನಿಂದ ನಾಡಿಗೆ ಲೆಗ್ಗೆ ಇಡುವ ಕರಡಿಗಳ ಬಗ್ಗೆ ಅರಣ್ಯದಂಚಿನ ಗ್ರಾಮಸ್ಥರಲ್ಲಿ ಇಂದಿಗೂ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆಯೊಂದಿಗೆ ಗ್ರಾಮಸ್ಥರು ಕೈಜೋಡಿಸಿದಲ್ಲಿ ಮಾನವ-ಪ್ರಾಣಿ ಸಂಘರ್ಷಕ್ಕೆ ತಡೆಯೊಡ್ಡಬಹುದು ಎಂಬುದು ವನ್ಯಜೀವಿ ತಜ್ಞರು ಅಭಿಪ್ರಾಯವಾಗಿದೆ.
ಹೌದು! ಮಳೆಗಾಲದಲ್ಲಿ ಆಹಾರಕ್ಕಾಗಿ ಕರಡಿಗಳು ಹೆಚ್ಚಾಗಿ ಗ್ರಾಮದ ಹೊಲ-ಗದ್ದೆಗಳಿಗೆ ಪ್ರವೇಶ ಮಾಡುವ ಸಾಧ್ಯತೆ ಇರುವುದರಿಂದ ಅರಣ್ಯದಂಚಿನ ಗ್ರಾಮಗಳ ಗ್ರಾಮಸ್ಥರು, ಕರಡಿಗಳ ಚಲನವಲನಗಳ ಬಗ್ಗೆ ಎಚ್ಚರವಹಿಸಬೇಕಿದೆ. ಇದಕ್ಕಾಗಿ ಅರಣ್ಯ ಇಲಾಖೆ ಕೂಡ ವನ್ಯ ಜೀವಿಗಳ ಕುರಿತು ಜಾಗೃತಿ ಮೂಡಿಸಬೇಕಿದೆ ಎಂಬ ಆಗ್ರಹ ಕೇಳಿ ಬಂದಿದೆ.
ಕೇವಲ ಆಹಾರಕ್ಕಾಗಿ ಮಾತ್ರವಲ್ಲದೇ ಸಂತಾನೋತ್ಪತ್ತಿಗಾಗಿ ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುತ್ತವೆ. ಕರಡಿಗಳು ತಮಗೆ ಅರಿವಿಲ್ಲದಂತೆ ಒಂದಕ್ಕೊಂದು ಅಟ್ಟಿಸಿಕೊಂಡು ಬರುತ್ತವೆ. ಇತಂಹ ವೇಳೆ ಎದುರಿಗೆ ಬಂದವರ ಮೇಲೆ ದಾಳಿ ನಡೆಸುವ ಸಂಭವ ಹೆಚ್ಚಿರುತ್ತದೆ.
ಕರಡಿಗೆ ಸುರಕ್ಷಿತ ಸ್ಥಾನಮಾನ
ಕಲ್ಲು ಬಂಡೆಗಳಿಂದ ಕೂಡಿದ ಕುರುಚಲು ಕಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಕರಡಿಗಳನ್ನು ಭಾರತೀಯ ವನ್ನಜೀವಿ ಕಾಯ್ದೆ, 1972ರ ಅಡಿಯಲ್ಲಿ ಶೆಡ್ಯೂಲ್-1 ಎಂದು ವರ್ಗಿಕರಿಸಿ, ಸುರಕ್ಷಿತ ಸ್ಥಾನಮಾನ ನೀಡಲಾಗಿದೆ. ಇವು ಹಗಲೆಲ್ಲಾ ಬಂಡೆಗಳು ಗುಹೆಯೊಳಗೆ, ಪೊದೆಯೊಳಗೆ ನಿದ್ರಿಸಿ, ಸಂಜೆ ವೇಳೆ ಹೊರ ಬರುತ್ತವೆ ರಾತ್ರಿಯಲ್ಲಿ ಆಹಾರ ಹುಟಕಾಟ ನಡೆಸುತ್ತವೆ. ಇರುವೆ. ಸಗಣಿ ಹುಳು, ಕಾಡು ಹಣ್ಣು ಇತರೆ ಪದಾರ್ಥ ಸೇವಿಸಿ, ಮತ್ತೆ ಮರಳಿ ಗುಹೆ-ಪೊದೆಗಳನ್ನು ಸೇರುವುತ್ತವೆ. ಅದರಲ್ಲಿಯೂ ಹೆಚ್ಚಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಇರುವೆ, ಗೆದ್ದಲು ಕಾಣ ಸಿಗುವುದರಿಂದ ಹೊಲ-ಗದ್ದೆಗಳಿಗೆ ಕಡೆಗೆ ದಾವಿಸಿ ಬರುತ್ತವೆ. ಇದೇ ವೇಳೆ ಹೊಲಗಳಲ್ಲಿ ರೈತರು ಬೆಳೆದ ಶೇಂಗಾ, ಮೆಕ್ಕೆಜೋಳ, ಪಪ್ಪಾಯಿ, ಹಲಸು, ಸಪೋಟಾ ಇತರೆ ಸಿಹಿ ಹಣ್ಣುಗಳು ಕಣ್ಣಿಗೆ ಬಿದ್ದರೆ, ಅವು ತಿನ್ನದೇ ಮರಳುವುದಿಲ್ಲ. ಇತಂಹ ಸಮಯದಲ್ಲಿ ಹೆಚ್ಚಾಗಿ ಪ್ರಾಣಿ-ಮಾನವ ಸಂಘರ್ಷಗಳು ನಡೆದಿರುವ ಬಗ್ಗೆ ವರದಿಯಾಗಿವೆ.
ಎಲ್ಲೆಲ್ಲಿ ಕರಡಿ ದಾಳಿ
ಕೂಡ್ಲಿಗಿ ತಾಲ್ಲೂಕಿನ ಕಡೆಕೊಳ್ಳ, ನೆಲಬೊಮ್ಮನಹಳ್ಳಿ, ಮಾಕನಡಕು, ಸಿದ್ದಾಪುರ, ಖಾನ ಹೊಸಳ್ಳಿ, ಚಿಕ್ಕ ಜೋಗಿಹಳ್ಳಿ ಹಗರಿಬೊಮ್ಮಹನಹಳ್ಳಿ ತಾಲ್ಲೂಕಿನ ಅನೇಕಲ್ಲು ತಾಂಡ, ಚಿಲಕನಹಟ್ಟಿ ಮಧ್ಯ ಪ್ರದೇಶ.ಹೊಸಪೇಟೆ ತಾಲ್ಲೂಕಿನ ಗಾದಿಗನೂರು, ಕೊಟಗಿನಾಳ್, ಕಾಕುಬಾಳು, ಜೋಗ, ಗುಂಡ್ಲವದ್ದಿಗೇರಿ ಹಾಗೂ ಕಂಪ್ಲಿ ತಾಲ್ಲೂಕಿನ ಮೆಟ್ರಿ, ದೇವಲಾಪುರ, ದರೋಜಿ, ಚಿನ್ನಾಪುರ, ಕಣವಿ ತಿಮ್ಮಲಾಪುರ, ಬುಕ್ಕಸಾಗರ, ರಾಮಸಾಗರ ಗ್ರಾಮಗಳಲ್ಲಿ ಕರಡಿ ದಾಳಿ ಪ್ರಕರಣಗಳು ಬೆಳಕಿಗೆ ಬಂದಿವೆ.
ಕಳೆದ 2016-17 ನೇ ಸಾಲಿನಲ್ಲಿ ಕೂಡ್ಲಿಗಿಯಲ್ಲಿ ನೆಲಬೊಮ್ಮನಹಳ್ಳಿ ಗ್ರಾಮದ ಪೂಜಾರಿ ನಿಂಗಪ್ಪ ಎನ್ನುವವರ ಮೇಲೆ ಎರಗಿ ಗಂಭೀರವಾಗಿ ಗಾಯಗೊಳಿಸಿತ್ತು. ಅವರ ಮುಖವನ್ನು ಕಿತ್ತು ಕಣ್ಣುಗುಡ್ಡೆಯೇ ಹೊರ ಬಂದಿದ್ದನ್ನು ಸ್ಮರಿಸಬಹುದು.
ಪರಿಹಾರಕ್ಕೆ ಆಗ್ರಹ
ಕರಡಿ ದಾಳಿಗೆ ಒಳಗಾಗಿ ಮೃತಪಟ್ಟವರಿಗೆ ನೀಡಿದ ಪರಿಹಾರ ಹೊರತು ಪಡಿಸಿ, ಗಾಯಗೊಂಡ ಬೆರಳಣಿಕೆ ಜನರಿಗೆ ಮಾತ್ರ ಪರಿಹಾರ ಸಿಕ್ಕಿದೆ. ಇತಂಹ ಪ್ರಕರಣಗಳಲ್ಲಿ ಸೂಕ್ತ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ಕಡಿವಾಣ
ಕಾಡಂಚಿನ ಗ್ರಾಮಗಳಿಗೆ ನಸುಕಿನಲ್ಲಿ ಹಾಗೂ ಸಂಜೆ ವೇಳೆಯಲ್ಲಿ ಕರಡಿಗಳು ಪೊದೆಯಿಂದ ಹೊರ ಬಂದು ಹೊಲ-ಗದ್ದೆಗಳಿಗೆ ನುಗ್ಗುವ ಸಾಧ್ಯತೆ ಹೆಚ್ಚಾಗಿದೆ. ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆ ಮಾಡಬೇಕಿದೆ. ರೈತರು ನಸುಕಿನಲ್ಲಿ ಮತ್ತು ಇಳಿ ಹೊತ್ತಿನಲ್ಲಿ ಹೊಲಗಳತ್ತ ತೆರಳುವುದಿಲ್ಲ. ಇದರಿಂದ ಕರಡಿ ದಾಳಿ ಪ್ರಕರಣಗಳು ಕಡಿಮೆಯಾಗಬಹುದು ಎಂಬುದು ವನ್ಯಜೀವಿ ಸಂಶೋಧಕ ಡಾ,ಸಮದ್ ಕೊಟ್ಟೂರು ಅವರ ಅಭಿಪ್ರಾಯ.
ವರದಿ:ಪಿ.ಸತ್ಯನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.