G-7 ಮತ್ತು BRICS: ಜಗತ್ತಿನ ಅತೀದೊಡ್ಡ ಶಕ್ತಿ ಯಾವುದು?


Team Udayavani, Aug 3, 2023, 11:58 PM IST

BRICKS

ಜಗತ್ತಿನ ಅತ್ಯಂತ ಸಿರಿವಂತ ದೇಶಗಳನ್ನು ಒಳಗೊಂಡ ಜಿ7 ಮತ್ತು ಅಭಿವೃದ್ಧಿಶೀಲ ದೇಶಗಳನ್ನೊಳಗೊಂಡ ಬ್ರಿಕ್ಸ್‌ ಮಧ್ಯೆ ಸದ್ಯ ಪರೋಕ್ಷ ಸಮರವೇ ಏರ್ಪಟ್ಟಿದೆ. ಒಂದೆಡೆ ಜಿ7 ಅನ್ನು ಇನ್ನೂ ವಿಸ್ತರಿಸದೇ ಕೆಲವೇ ಕೆಲವು ದೇಶಗಳು ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದರೇ, ಇನ್ನೊಂದೆಡೆ ನಿಧಾನಕ್ಕೆ ಬ್ರಿಕ್ಸ್‌ ತನ್ನ ಸದಸ್ಯ ದೇಶಗಳನ್ನು ಹೆಚ್ಚಿಸಿಕೊಳ್ಳುವತ್ತ ಮುನ್ನಡೆದಿದೆ. ವಿಶೇಷವೆಂದರೆ ಇನ್ನು ಕೆಲವೇ ವರ್ಷಗಳಲ್ಲಿ ಜಿ7 ದೇಶಗಳ ಒಟ್ಟಾರೆ ಆರ್ಥಿಕತೆಯನ್ನು ಮೀರಿಸಿ ಬ್ರಿಕ್ಸ್‌ ಬೆಳೆಯಲಿದೆ ಎಂಬ ಅಂದಾಜು ಇದೆ. ಈ ಕುರಿತ ಒಂದು ನೋಟ ಇಲ್ಲಿದೆ…

ಜಿ7
ಸರಿಯಾಗಿ 50 ವರ್ಷಗಳ ಹಿಂದೆ ಜಗತ್ತೇ ತೈಲ ಸಮಸ್ಯೆ ಎದುರಿಸುವಾಗ ಶುರುವಾಗಿದ್ದೇ ಈ ಜಿ7 ಅಥವಾ ಜಿ8 ಒಕ್ಕೂಟ. ಅಂದರೆ ಅಮೆರಿಕ, ಕೆನಡಾ, ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌ ಮತ್ತು ರಷ್ಯಾ ದೇಶ­ಗಳು ಸೇರಿ ಈ ಜಿ8 ಒಕ್ಕೂಟ ಶುರುವಾಗಿತ್ತು. ವಿಶೇಷ­ವೆಂದರೆ ಈ ಎಲ್ಲ ದೇಶಗಳು ಆಗಿನ ಕಾಲಕ್ಕೇ ಅಭಿವೃದ್ದಿ ಹೊಂದಿದ ಮತ್ತು ಜಗತ್ತಿನ ಶಕ್ತಿಶಾಲಿ ದೇಶಗಳಾಗಿದ್ದವು. 2014ರಲ್ಲಿ ರಷ್ಯಾವನ್ನು ಈ ಗುಂಪಿನಿಂದ ತೆಗೆದುಹಾಕ­ಲಾಗಿತ್ತು. ಅಲ್ಲಿಂದ ಇದು ಜಿ7 ಎಂದೇ ಪ್ರಸಿದ್ಧಿಯಾಗಿದೆ.

ಬ್ರಿಕ್ಸ್‌
2006ರಲ್ಲಿ ಶುರುವಾದ ಒಕ್ಕೂಟ ಇದು. ಜಗತ್ತಿನ ಪ್ರಮುಖ ಅಭಿವೃದ್ಧಿಶೀಲ ದೇಶಗಳು ಸೇರಿ ಮಾಡಿಕೊಂಡ ಕೂಟ. ಅಲ್ಲದೆ ಜಿ7 ಒಕ್ಕೂಟಕ್ಕೆ ಪ್ರತಿಯಾಗಿಯೇ ಮಾಡಿಕೊಂಡಿದ್ದು ಎಂದು ಹೇಳಿದರೆ ತಪ್ಪಾಗಲಾರದು. ಆರಂಭದಲ್ಲಿ ಈ ಕೂಟದಲ್ಲಿ ಬ್ರೆಜಿಲ್‌, ರಷ್ಯಾ, ಭಾರತ ಮತ್ತು ಚೀನ ಮಾತ್ರ ಇದ್ದವು. ಅಂದರೆ ಇದರ ಹೆಸರು ಬ್ರಿಕ್‌ ಎಂದೇ ಇತ್ತು. ಬಳಿಕ ದಕ್ಷಿಣ ಆಫ್ರಿಕಾ ದೇಶ 2010ರಲ್ಲಿ ಸೇರ್ಪಡೆಯಾಯಿತು. ಬಳಿಕ ಬ್ರಿಕ್ಸ್‌ ಎಂಬ ಹೆಸರಿನಿಂದಲೇ ಪ್ರಸಿದ್ಧವಾಯಿತು.
ಅಭಿವೃದ್ಧಿಶೀಲ ದೇಶಗಳು ಎದುರಿಸುತ್ತಿರುವ ಸಾಮಾ ನ್ಯ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಈ ಬ್ರಿಕ್ಸ್‌ ಅನ್ನು ಸ್ಥಾಪಿಸಲಾಗಿದ್ದು, ಸದಸ್ಯ ದೇಶಗಳ ನಡುವೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಹಕಾರವು ಇದೆ.

ವಿಸ್ತರಣೆಗೆ ಸಿದ್ಧವಾದ ಬ್ರಿಕ್ಸ್‌
ಇತ್ತೀಚಿನ ವರ್ಷಗಳಲ್ಲಿ ಬ್ರಿಕ್ಸ್‌ ಜಾಗತಿಕ ಮಟ್ಟದಲ್ಲೇ ತನ್ನದೇ ಆದ ಪ್ರಭಾವ ಹೊಂದಿದೆ. ಇದಕ್ಕೆ ಪ್ರಮುಖ ಕಾರಣ ಚೀನ ಮತ್ತು ಭಾರತ. ಈ ಎರಡೂ ದೇಶಗಳ ಆರ್ಥಿಕತೆಯು ಭರಪೂರ ವೇಗದಲ್ಲಿ ಬೆಳೆಯುತ್ತಿದ್ದು, ಸದ್ಯದಲ್ಲೇ ಅಮೆರಿಕವನ್ನೂ ಮೀರಿಸುವ ಶಕ್ತಿ ಹೊಂದಿದೆ. ಅಲ್ಲದೆ ಈಗಾಗಲೇ ಚೀನ ಎರಡನೇ ಸ್ಥಾನದಲ್ಲಿದ್ದು, ಭಾರತ 5ನೇ ಸ್ಥಾನದಲ್ಲಿದೆ. ಜಿ7 ಗುಂಪಿನಲ್ಲಿರುವ ಇಟಲಿ, ಫ್ರಾನ್ಸ್‌, ಇಂಗ್ಲೆಂಡ್‌ ಅನ್ನೂ ಭಾರತ ಮೀರಿಸಿದೆ. ಸದ್ಯ ಜರ್ಮನಿ ಮತ್ತು ಜಪಾನ್‌ ದೇಶಗಳು ಮಾತ್ರ ಭಾರತಕ್ಕಿಂತ ಮುಂದಿವೆ.

ಹೀಗಾಗಿ ಬ್ರಿಕ್ಸ್‌ನ ವಿಸ್ತರಣೆಯ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಸದ್ಯ ಅರ್ಜೆಂಟೀನಾ, ಸೌದಿ ಅರೇಬಿಯಾ ದೇಶಗಳನ್ನು ಮಾಸಾಂತ್ಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಬ್ರಿಕ್ಸ್‌ ಸಮಾವೇಶದಲ್ಲಿ ಸೇರ್ಪಡೆ ಸಾಧ್ಯತೆ ಇದೆ. ಸದ್ಯ 40 ದೇಶಗಳು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿವೆ. ಆದರೆ ಅಳೆದು ತೂಗಿ ಚೀನದ ಒಳಮ ಸಲತ್ತನ್ನು ಗಮನದಲ್ಲಿರಿಸಿಕೊಂಡು ಸದ್ಯಕ್ಕೆ 2 ದೇಶಗಳನ್ನು ಮಾತ್ರ ಸೇರಿಸುವ ಸಾಧ್ಯತೆ ಇದೆ.

ಆದರೆ ಜಿ7 ಅನ್ನು ವಿಸ್ತರಿಸಬೇಕು ಎಂಬ ಮಾತುಗಳು ಕೇಳಿಬಂದಿದ್ದರೂ, ಇನ್ನೂ ಈ ದೇಶಗಳ ಗುಂಪು ಚಿಂತನೆ ಮಾಡಿಲ್ಲ. ಅಲ್ಲದೇ 50 ವರ್ಷಗಳ ಹಿಂದೆ ಮೇಜರ್‌ ಆರ್ಥಿಕತೆಗಳಾಗಿದ್ದ ದೇಶಗಳೀಗ ಕೆಳಗೆ ಇಳಿದು ಹೋಗಿವೆ. ಆಗ ಕೆಳಗೆ ಇದ್ದ ದೇಶಗಳು ಮೇಲಕ್ಕೇರಿವೆ. ಆರ್ಥಿಕತೆಯನ್ನು ಮಾನದಂಡವಾಗಿ ಇರಿಸಿಕೊಂಡು ಹೇಳುವುದಾದರೆ ಜಿ7 ವಿಸ್ತರಣೆಯಾಗಬೇಕು.

ಜಾಗತಿಕ ಮಟ್ಟದಲ್ಲಿ ಯಾರು ನಿರ್ಣಾಯಕ?
ಹಿಂದಿನ ವರ್ಷಗಳಲ್ಲಿ ಜಗತ್ತಿನಲ್ಲಿ ಏನೇ ಆದರೂ, ಜಿ7 ದೇಶಗಳು ಪರಿಹಾರ ಕಂಡುಕೊಳ್ಳುತ್ತಿದ್ದವು. ಇತ್ತೀ ಚಿನ ದಿನಗಳಲ್ಲಿ ಇದು ಬದಲಾಗುತ್ತಿದೆ. ಇದಕ್ಕೆ ಸಾಕ್ಷಿ ಉಕ್ರೇನ್‌ ಮೇಲಿನ ಯುದ್ಧ. ಈ ಯುದ್ದ ಸಾರಿದ ರಷ್ಯಾ ಮೇಲೆ ಐರೋಪ್ಯ ದೇಶಗಳು ಮತ್ತು ಜಿ7 ದೇಶಗಳು ದಿಗ್ಬಂಧನ ಹೇರಿವೆ. ಬ್ರಿಕ್ಸ್‌ ದೇಶಗಳು ಈ ವಿಚಾರದಲ್ಲಿ ತಟಸ್ಥ ನಿಲುವು ತಳೆದಿವೆ. ಅಂದರೆ ಚೀನ ಅಥವಾ ಭಾರತ, ಐರೋಪ್ಯ ದೇಶಗಳು, ಜಿ7 ದೇಶಗಳ ರಷ್ಯಾ ನಿಲುವನ್ನು ಒಪ್ಪಿಕೊಂಡಿಲ್ಲ. ಯುದ್ಧ ಆರಂಭ ವಾದಾಗಿನಿಂದಲೂ ಈ ಎರಡೂ ದೇಶಗಳು ರಷ್ಯಾ ಜತೆಗೆ ತಮ್ಮದೇ ಕರೆನ್ಸಿಯಲ್ಲೇ ವ್ಯಾಪಾರ ವ್ಯವಹಾರ ಮಾಡುತ್ತಿವೆ. ಹೀಗಾಗಿ ಶ್ರೀಮಂತ ದೇಶಗಳ ನಿರ್ಧಾ ರವನ್ನು ಒಪ್ಪಬೇಕಾಗಿಲ್ಲ ಎಂಬುದನ್ನು ಈ ಗುಂಪು ಪರೋಕ್ಷವಾಗಿ ಹೇಳುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಖರೀದಿ ಶಕ್ತಿಯಲ್ಲಿ
ಬ್ರಿಕ್ಸ್‌ ಮುಂದು: ವಿಶೇಷ ವೆಂದರೆ ಜಿ7 ದೇಶಗಳಿಗೆ ಹೋಲಿಕೆ ಮಾಡಿದರೆ, ಖರೀದಿ ಸಾಮರ್ಥ್ಯ ಹೋಲಿಕೆಯಲ್ಲಿ ಬ್ರಿಕ್ಸ್‌ ದೇಶಗಳೇ ಮುಂದಿವೆ. ಸಾಮಾನ್ಯವಾಗಿ ಇದನ್ನು ಆ ದೇಶಗಳ ಕರೆನ್ಸಿ ಶಕ್ತಿ ಮತ್ತು ವಸ್ತುಗಳ ಖರೀದಿಗೆ ನೀಡುವ ಹಣದ ಮೇಲೆ ನಿರ್ಧಾರವಾಗುತ್ತದೆ. ಅಲ್ಲದೆ ಇದು ಕರೆನ್ಸಿ ವಿನಿಮಯದಡಿ ಲೆಕ್ಕಾಚಾರ ಹಾಕಲಾಗುತ್ತದೆ.

ಟಾಪ್ ನ್ಯೂಸ್

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

Astronamy-moon

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.