New ERA for RCB: ಮುಖ್ಯ ಕೋಚ್ ಹುದ್ದೆಗೆ ಆ್ಯಂಡಿ ಫ್ಲವರ್ ನೇಮಕ
Team Udayavani, Aug 4, 2023, 11:13 AM IST
ಬೆಂಗಳೂರು: ಐಸಿಸಿ ಹಾಲ್ ಆಫ್ ಫೇಮರ್ ಮತ್ತು ಟಿ20 ವಿಶ್ವಕಪ್ ವಿಜೇತ ಕೋಚ್ ಆ್ಯಂಡಿ ಫ್ಲವರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಂಪ್ ಸೇರಿದ್ದಾರೆ. ಟಿ20 ಕ್ರಿಕೆಟ್ ಜಗತ್ತಿನ ದಿಗ್ಗಜ ಕೋಚ್ ಎಂದೇ ಹೆಸರಾದ ಆ್ಯಂಡಿ ಫ್ಲವರ್ ಅವರನ್ನು ಆರ್ ಸಿಬಿ ಪುರುಷರ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗ ವಿಶೇಷ ಪ್ರಕಟಣೆ ಹೊರಡಿಸಿದೆ.
ಪ್ರಪಂಚದಾದ್ಯಂತದ ಐಪಿಎಲ್ ಮತ್ತು ಟಿ20 ತಂಡಗಳಿಗೆ ತರಬೇತುದಾರರಾಗಿರುವ ಆ್ಯಂಡಿಯವರ ಅನುಭವ ಮತ್ತು ಪಿಎಸ್ಎಲ್, ಐಎಲ್ ಟಿ20, ದಿ ಹಂಡ್ರೆಡ್ ಮತ್ತು ಅಬುಧಾಬಿ ಟಿ10 ನಲ್ಲಿ ತಂಡಗಳನ್ನು ಪ್ರಶಸ್ತಿಯತ್ತ ಮುನ್ನಡೆಸುವ ಅನುಭವವವು ಚಾಂಪಿಯನ್ ಶಿಪ್ ಗೆಲ್ಲುವ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಆರ್ ಸಿಬಿ ಯ ಪ್ಲೇ ಬೋಲ್ಡ್ ತತ್ವವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ಆರ್ ಸಿಬಿ ಬರೆದುಕೊಂಡಿದೆ.
ತಂಡದ ನಿರ್ದೇಶಕರಾಗಿದ್ದ ಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರನ್ನು ಫ್ರಾಂಚೈಸಿ ಕೈಬಿಟ್ಟಿರುವುದು ಇದೀಗ ಖಚಿತವಾಗಿದೆ.
ಇದನ್ನೂ ಓದಿ:Sandalwood; ಮುಂದುವರಿದ ಭಾಗಕ್ಕೆ ಬಿಡುಗಡೆ ಭಾಗ್ಯ: ಸಾಲು ಸಾಲು ಸೀಕ್ವೆಲ್
“ನಾನು ಗೌರವಿಸುವ ಇಬ್ಬರು ಕೋಚ್ ಗಳಾದ ಮೈಕ್ ಹೆಸನ್ ಮತ್ತು ಸಂಜಯ್ ಬಂಗಾರ್ ಅವರ ಕೆಲಸವನ್ನು ನಾನು ಗುರುತಿಸುತ್ತೇನೆ” ಎಂದು ಫ್ಲವರ್ ಆರ್‌ಸಿಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
We are beyond thrilled to welcome 𝗜𝗖𝗖 𝗛𝗮𝗹𝗹 𝗼𝗳 𝗙𝗮𝗺𝗲𝗿 and 𝗧𝟮𝟬 𝗪𝗼𝗿𝗹𝗱 𝗖𝘂𝗽 winning coach 𝐀𝐧𝐝𝐲 𝐅𝐥𝐨𝐰𝐞𝐫 as the 𝗛𝗲𝗮𝗱 𝗖𝗼𝗮𝗰𝗵 of RCB Men’s team. 🤩🙌
Andy’s experience of coaching IPL & T20 teams around the world, and leading his teams to titles… pic.twitter.com/WsMYGCkcYT
— Royal Challengers Bangalore (@RCBTweets) August 4, 2023
“ನಾನು ವಿಶೇಷವಾಗಿ ಫಾಫ್ ಡುಪ್ಲೆಸಿಸ್ ಅವರೊಂದಿಗೆ ಮತ್ತೆ ಒಂದಾಗಲು ಉತ್ಸುಕನಾಗಿದ್ದೇನೆ. ನಾವು ಹಿಂದೆ ಚೆನ್ನಾಗಿ ಕೆಲಸ ಮಾಡಿದ್ದೇವೆ, ನಮ್ಮ ಪಾಲುದಾರಿಕೆ ಮತ್ತು ಸಂಬಂಧವನ್ನು ದೊಡ್ಡ ಮತ್ತು ಉತ್ತಮವಾದ ರೀತಿಯಲ್ಲಿ ರೂಪಿಸಲು ನಾನು ಎದುರು ನೋಡುತ್ತಿದ್ದೇನೆ.” ಎಂದು ಜಿಂಬಾಬ್ವೆಯ ಮಾಜಿ ಆಟಗಾರ ಹೇಳಿದ್ದಾರೆ.
ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಆ್ಯಂಡಿ ಫ್ಲವರ್ ಈ ಹಿಂದೆ ಸಿಪಿಎಲ್ ಕೂಟದಲ್ಲಿ ಸೈಂಟ್ ಲೂಸಿಯಾ ಕಿಂಗ್ಸ್ ಪರ ಒಟ್ಟಾಗಿ ಕೆಲಸ ಮಾಡಿದ್ದರು.
ಆ್ಯಂಡಿ ಫ್ಲವರ್ ಕಳೆದ ಸೀಸನ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದರು. ಅವರ ಎರಡು ವರ್ಷದ ಕಾಂಟ್ರಾಕ್ಟ್ ಮುಗಿದ ಬಳಿಕ ಲಕ್ನೋ ಫ್ರಾಂಚೈಸಿಯು ಜಸ್ಟಿನ್ ಲ್ಯಾಂಗರ್ ಅವರನ್ನು ಕೋಚ್ ಆಗಿ ನೇಮಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.