Uppunda: ಮತ್ತೊಂದು ದೋಣಿ ದುರಂತ; 9 ಮೀನುಗಾರರು ಪಾರು
Team Udayavani, Aug 4, 2023, 3:44 PM IST
ಉಪ್ಪುಂದ: ಮೀನುಗಾರಿಕೆ ನಡೆಸುತ್ತಿದ್ದಾಗ ಬೃಹತ್ ಅಲೆಗೆ ದೋಣಿ ಸಿಲುಕಿ ಪಲ್ಟಿಯಾದ ಘಟನೆ ಕೊಡೇರಿ ಕಡಲ ತೀರದಲ್ಲಿ ಆ.4ರ ಶುಕ್ರವಾರ ಸಂಭವಿಸಿದೆ.
ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಪಾಳ್ಯದರತೋಪ್ಲು ಪುರ್ಶುಯ್ಯನ ಪುಂಡಲಿಕ ಎನ್ನುವರ ಮಾಲಿಕತ್ವದ ಶ್ರೀ ದುರ್ಗಾಪರಮೇಶ್ವರಿ ದೋಣಿಯಲ್ಲಿ 9 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು.
ಕೊಡೇರಿ ಸಮುದ್ರ ತೀರದ ಸುಮಾರು 5 ನಾಟಿಕಲ್ ದೂರದಲ್ಲಿ ಅಲೆಗಳ ಹೊಡೆತಕ್ಕೆ ದೋಣಿ ಸಿಲುಕಿ ಪಲ್ಟಿಯಾಗಿದೆ. ತಕ್ಷಣ ಇತರೆ ದೋಣಿಗಳ ಸಹಾಯದಿಂದ ಮೀನುಗಾರನ್ನು ಪಾರು ಮಾಡಲಾಗಿದೆ.
ಬಲೆ ಒಳಗೆ ಸಿಲುಕಿದ್ದ ಮೀನುಗಾರ
ದೋಣಿ ಮಗುಚಿದ ಪರಿಣಾಮ ಕುಪ್ಪಯ್ಯ ಎನ್ನುವ ಮೀನುಗಾರ ಸುಮಾರು ಹತ್ತು ಮೀಟರ್ ದೂರದಲ್ಲಿ ಬಲೆಗಳ ನಡುವೆ ಸಿಕ್ಕಿಬಿದ್ದರು. ಅವರನ್ನು ಬಹಳ ಕಷ್ಟಪಟ್ಟು ಬಲೆಯಿಂದ ಬಿಡಿಸಿ ಪಾರು ಮಾಡಲಾಯಿತು.
ಸಮುದ್ರದಲ್ಲೇ ಕಾರ್ಯಾಚರಣೆ: ಅಲೆಗಳ ಹೊಡೆತದಿಂದ ದೋಣಿ ಮಗುಚಿದ ತತ್‌ಕ್ಷಣ ಮತ್ತೂಂದು ದೋಣಿಯಲ್ಲಿದ್ದ ಚಂದ್ರ ಅವರು ಸನಿಹದಲ್ಲಿದ್ದ ಇತರ ಮೀನುಗಾರರನ್ನು ಸಂಪರ್ಕಿಸಿ ರಕ್ಷಣೆಗೆ ಮನವಿ ಮಾಡಿದರು. ಅವರೆಲ್ಲ ಘಟನೆ ನಡೆದ ಸ್ಥಳಕ್ಕೆ ಬಂದು ಮೀನುಗಾರರನ್ನು ರಕ್ಷಿಸಿದರಲ್ಲದೇ ಪಲ್ಟಿಯಾಗಿ ಕೊಚ್ಚಿಕೊಂಡು ಹೋಗುತ್ತಿದ್ದ ದೋಣಿಗೆ ಇತರ ದೋಣಿಗಳ ಸಹಕಾರದಿಂದ ಹಗ್ಗವನ್ನು ಕಟ್ಟಿ ದೋಣಿಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಆ ಬಳಿಕ ದೋಣಿ
ಯಲ್ಲಿದ್ದ ನೀರು ಖಾಲಿ ಮಾಡಿ, ಸುರಕ್ಷಿತವಾಗಿ ಮರವಂತೆ ಬಂದರಿಗೆ ಕರೆ ತಂದರು. ಕಾರ್ಯಾಚರಣೆಯಲ್ಲಿ ಆರು ದೋಣಿಗಳು ಭಾಗವಹಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.