![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 5, 2023, 7:45 AM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ಹಾಗೂ 35ಎ ವಿಧಿಗಳನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಐತಿಹಾಸಿಕ ನಿರ್ಣ ಯವು ಇಂದು 4 ವರ್ಷಗಳನ್ನು ಪೂರೈಸಿದೆ. ವಿಶೇಷ ಸ್ಥಾನಮಾನ ರದ್ದಾದ ಬಳಿಕ ಕಣಿವೆಯಲ್ಲಿ ಶಾಂತಿ ನೆಲೆಸಿ ದ್ದಲ್ಲದ್ದೇ, ಅಭಿವೃದ್ಧಿಯ ಪಥವು ತೆರೆದುಕೊಂಡಿದೆ ಎಂ ದು ಕೇಂದ್ರ ಸರಕಾರ ಪ್ರತಿಪಾದಿಸಿದ್ದು, ಶುಕ್ರವಾರ ಈ ಕುರಿತ ಕೆಲವು ದತ್ತಾಂಶಗಳನ್ನೂ ಬಿಡುಗಡೆಗೊಳಿಸಿದೆ.
ಆ ಪ್ರಕಾರ ಕಣಿವೆಯಲ್ಲಿ ಗ್ರೆನೇಡ್ ದಾಳಿಗಳು ಶೇ.15ರಷ್ಟು ಇಳಿಕೆಯಾಗುವ ಮೂಲಕ ಸಾರ್ವಜನಿಕ ಸುರಕ್ಷೆಯಲ್ಲಿ ಬದಲಾವಣೆ ತಂದಿದೆ. ಐಇಡಿ ಸ್ಫೋಟ ಪ್ರಕರಣಗಳ ಸಂಖ್ಯೆ 19ರಷ್ಟಿದ್ದು, ವಿಧಿ ರದ್ದಾದ ಬಳಿಕ ಈ ಪ್ರಮಾಣ ಹೆಚ್ಚಾಗದಂತೆ ಸುರಕ್ಷೆ ಕಾಯ್ದು ಕೊಳ್ಳಲಾಗಿದೆ. ಐಇಡಿ ಸ್ಫೋಟಗಳಿಂದಾಗುತ್ತಿದ್ದ ಸಾವು- ನೋವುಗಳನ್ನೂ ತಪ್ಪಿಸಲಾಗಿದ್ದು, ಇಂಥ ಪ್ರಕರಣಗಳು ಶೇ.77ಕ್ಕೆ ಇಳಿಕೆಯಾಗಿವೆ.
ಗುಪ್ತಚರ ಇಲಾಖೆಯ ಕಾರ್ಯಾಚರಣೆ ವಿಸ್ತರಿಸಿ ಭಯೋತ್ಪಾದನೆ ಮಟ್ಟಹಾಕಲು ಕಠಿನ ಕ್ರಮ ಕೈಗೊಂ ಡಿರುವುದಾಗಿಯೂ ಸರಕಾರ ಹೇಳಿದೆ. ಇನ್ನು ರಸ್ತೆ ಸುರಕ್ಷೆಯಲ್ಲೂ ಕಣಿವೆ ಪರಿಸ್ಥಿತಿ ಸುಧಾರಿಸಿದೆ. ವಿಧಿ ರದ್ದಾಗುವ ಮುಂಚೆ ಇದ್ದಂಥ ಹಿಟ್ ಆ್ಯಂಡ್ ರನ್ ಕೇಸ್‌ಗಳೂ ಶೇ.42ರಷ್ಟು ಕಡಿಮೆಯಾಗಿವೆ. ಶಸ್ತ್ರಾಸ್ತ್ರ ಲೂಟಿಯೂ ಶೇ.60ರಷ್ಟು ಇಳಿಕೆಯಾಗಿದ್ದು, ಕಣಿವೆ ಯಲ್ಲಿ ಅತೀ ಹೆಚ್ಚಾಗಿ ನಡೆಯುತ್ತಿದ್ದ ಕಲ್ಲು ತೂರಾಟ ಪ್ರಕರಣಗಳು ಶೇ.92ರಷ್ಟು ಹಿಡಿತಕ್ಕೆ ಬಂದಿವೆ. ಸಾರ್ವ ಜನಿಕ ಕಾರ್ಯಾಚರಣೆಗಳಿಗೆ ಅಡೆ ತಡೆ ಮಾಡುತ್ತಿದ್ದ ಬಂದ್, ಪ್ರತಿಭಟನೆಗಳೂ ಶೇ.90 ರಷ್ಟು ಕಡಿಮೆ ಯಾಗಿದ್ದು, ಎನ್‌ಕೌಂಟರ್, ನಾಗರಿಕರ ಹತ್ಯೆ, ಕರ್ತವ್ಯ ನಿರತ ಪೊಲೀಸರ ಹತ್ಯೆ, ಭಯೋತ್ಪಾದಕ ನೇಮಕಾತಿ, ಅಪಹರಣದಂಥ ಪ್ರಕರಣಗಳನ್ನೂ ಮಟ್ಟಹಾಕಲಾಗಿದೆ ಎಂದಿದೆ. ಒಟ್ಟಾರೆ ಕಾಶ್ಮೀರದಲ್ಲಿ ಶಾಂತಿ ಮತ್ತೆ ನೆಲೆಸಿದೆ ಎಂದು ಸರಕಾರ ಪ್ರತಿಪಾದಿಸಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.