ಹಿಂದಿ ರಾಷ್ಟ್ರೀಯ ಭಾಷೆ: ಸುಪ್ರೀಂ!
Team Udayavani, Aug 4, 2023, 11:57 PM IST
ಹೊಸದಿಲ್ಲಿ: ಅಪಘಾತ ಪ್ರಕರಣವೊಂದರ ಆರೋಪಿಯೊಬ್ಬರು ಭಾಷಾ ಸಮಸ್ಯೆ ಹಿನ್ನೆಲೆ ಪ್ರಕರಣವನ್ನು ಉತ್ತರ ಪ್ರದೇಶದ ಫರೂಕಾಬಾದ್ನಿಂದ ಪಶ್ಚಿಮ ಬಂಗಾಲದ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದ್ದು, ಹಿಂದಿ ರಾಷ್ಟ್ರ ಭಾಷೆ ಎಂದಿದೆ. ಪ. ಬಂಗಾಲದ ಸಿಲಿಗುರಿಯಲ್ಲಿ ಅಪಘಾತ ನಡೆದಿದ್ದು, ಆರೋಪಿ ಅಲ್ಲಿಯವರಾದರೆ, ಸಂತ್ರಸ್ತರು ಉತ್ತರ ಪ್ರದೇಶದವರು. ಹೀಗಾಗಿ ಪ್ರಕರಣ ಉತ್ತರ ಪ್ರದೇಶದ ನ್ಯಾಯಾಲಯದಲ್ಲಿತ್ತು.
ಆದರೆ ಆರೋಪಿ ಪರ ಸಾಕ್ಷ್ಯಗಳನ್ನು ಪ್ರಸ್ತುತ ಪಡಿಸುವಾಗ ಅವರಿಗೆ ಹಿಂದಿ ಬಾರದೇ ಸಮಸ್ಯೆಯಾಗಿದ್ದ ಕಾರಣ, ಪ್ರಕರಣವನ್ನು ವರ್ಗಾಯಿಸುವಂತೆ ಕೇಳಲಾಗಿತ್ತು. ನ್ಯಾಯಮೂರ್ತಿ ದೀಪಂಕರ್ ದತ್ ಅವರ ನ್ಯಾಯಪೀಠವು ಈ ಅರ್ಜಿ ಆಲಿಸಿ, ದೇಶದಲ್ಲಿ 22 ಅಧಿಕೃತ ಭಾಷೆಗಳಿವೆ. ಆದರೆ, ಹಿಂದಿ ರಾಷ್ಟ್ರ ಭಾಷೆಯಾಗಿರುವ ಕಾರಣ ಸಾಕ್ಷಿಗಳು ತಮ್ಮ ವಾದವನ್ನು ಹಿಂದಿ ಭಾಷೆಯಲ್ಲೇ ಮಂಡಿಸಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.