Daily Horoscope: ನಕಾರಾತ್ಮಕ ಚಿಂತನೆಯನ್ನು ದೂರವಿಡಿ, ತಾಳ್ಮೆ, ಸಹನೆಯಿಂದ ಕಾರ್ಯವೆಸಗಿ
Team Udayavani, Aug 5, 2023, 7:25 AM IST
ಮೇಷ: ಆರೋಗ್ಯ ವೃದ್ಧಿ. ಗುರು ಹಿರಿಯರ ಆಶೀರ್ವಾದ ಬಲದಿಂದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ. ಕೀರ್ತಿ ಸಂಪಾದನೆ. ಆಯಕ್ಕೆ ಸರಿಯಾಗಿ ವ್ಯಯ ಸಂಭವ. ಮಾತಿನಲ್ಲಿ ಜವಾಬ್ದಾರಿ. ವಚನ ನೀಡುವ ಮೊದಲು ಪೂರ್ವಾಪರ ತಿಳಿದುಕೊಳ್ಳಿ.
ವೃಷಭ: ಭೂಮಿ, ವಾಹನ, ಆಸ್ತಿ ವಿಚಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಪರಸ್ಪರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಜಾಣತನದಿಂದ ಸಾಫಲ್ಯ. ಮಿತ್ರರ ಸಹಾಯದಿಂದ ನಿರೀಕ್ಷಿತ ಕಾರ್ಯ ಸಫಲ.
ಮಿಥುನ: ನಕಾರಾತ್ಮಕ ಚಿಂತನೆಯನ್ನು ದೂರವಿಡಿ. ತಾಳ್ಮೆ, ಸಹನೆಯಿಂದ ಕಾರ್ಯವೆಸಗಿ. ದೂರದ ಬಂಧು ಮಿತ್ರರಿಂದ ಸಹಕಾರ. ದಾಂಪತ್ಯ ಸುಖ ವೃದ್ಧಿ. ಕ್ಷಮಾಗುಣವನ್ನು ತೋರುವುದರಿಂದ ಜನಪ್ರಶಂಸೆ ಲಾಭ.
ಕರ್ಕ: ಆರೋಗ್ಯದ ಕಡೆಗೆ ಗಮನವಿರಲಿ. ದುಸ್ಸಾಹಾಸ ಬೇಡ. ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಅಧ್ಯಯನದಲ್ಲಿ ಆಸಕ್ತಿ. ದಾಂಪತ್ಯ ಸುಖಕರ. ಸಂದಭಕ್ಕೆ ಸರಿಯಾಗಿ ಪಾಲುಗಾರರ ಸಹಕಾರ ಸಂಸಾರ ಸುಖ ತೃಪ್ತಿಕರ.
ಸಿಂಹ: ಅಧಿಕ ಧನಸಂಪಾದನೆಯ ಅಪೇಕ್ಷೆ. ಉತ್ತಮ ಜ್ಞಾನ. ತಿಳಿವಳಿಕೆಯಿಂದ ಕೂಡಿದ ಮಾತುಗಾರಿಕೆಗೆ ಪ್ರಯತ್ನ. ಉದ್ಯೋಗ ವ್ಯವಹಾರದಲ್ಲಿ ಹೆಚ್ಚಿದ ಜವಾಬ್ದಾರಿ. ಗುರು ಹಿರಿಯರ ಪ್ರೋತ್ಸಾಹದಿಂದ ಕಾರ್ಯ ಸಫಲ.
ಕನ್ಯಾ: ಅಧಿಕ ಜನಸಂಪರ್ಕ. ಸಂಸಾರ ಸುಖದಲ್ಲಿ ಮುಳುಗುವಿರಿ. ನಾನಾ ಬಗೆಯ ಮನೋರಂಜನೆಯಲ್ಲಿ ಆಸಕ್ತಿ. ಅವಿವಾಹಿತರಿಗೆ ವಿವಾಹ ಯೋಗ. ಪಾಲುಗಾರಿಕೆ ವ್ಯವಹಾರಗಳಲ್ಲಿ ಆಸಕ್ತಿ. ಅಧ್ಯಯನಶೀಲರಿಗೆ ನಿರೀಕ್ಷಿತ ಸ್ಥಾನ ಸುಖ.
ತುಲಾ: ದೀರ್ಘ ಪ್ರಯಾಣದಿಂದ ದೇಹಾಯಾಸ. ಉತ್ತಮ ಧನಾರ್ಜನೆ, ಉಳಿತಾಯ. ತಾಳ್ಮೆ ಸಹನೆಯಿಂದ ಕಾರ್ಯಪ್ರವೃತ್ತರಾಗಿ. ಗುರು ಹಿರಿಯರ ಆರೋಗ್ಯ ಸುಧಾರಣೆ. ದಾಂಪತ್ಯ ಸುಖ ವೃದ್ಧಿ. ನೂತನ ಮಿತ್ರರ ಸಮಾಗಮ. ದೀರ್ಘ ಪ್ರಯಾಣ ಯೋಗ.
ವೃಶ್ಚಿಕ: ಉತ್ತಮ ಆರೋಗ್ಯ. ವಿವೇಕಪೂರ್ಣ ಕೆಲಸ ಕಾರ್ಯಗಳು. ಜನಮನ್ನಣೆ ವಾಕ್ ಚಾತುರ್ಯದಿಂದ ಹೆಚ್ಚು ಧನಾರ್ಜನೆ. ಕುಟುಂಬ ಸುಖ ವೃದ್ಧಿ. ನೂತನ ಮಿತ್ರರ ಸಮಾಗಮ. ದೀರ್ಘ ಪ್ರಯಾಣ ಯೋಗ.
ಧನು: ಆರೋಗ್ಯ ಮಧ್ಯಮ. ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ದೇವತಾ ಕಾರ್ಯ ಸಂಭ್ರಮ. ಹಣಕಾಸಿನ ವಿಷಯದಲ್ಲಿ ದಾಕ್ಷಿಣ್ಯದಿಂದ ತೊಂದರೆ. ಸಂಸಾರ ಸುಖ ತೃಪ್ತಿಕರ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಪ್ರಾಪ್ತಿ. ಪಾಲುದಾರಿಕೆ ಕ್ಷೇತ್ರದಲ್ಲಿ ತಾಳ್ಮೆ ಇರಲಿ.
ಮಕರ: ಆರೋಗ್ಯ ಗಮನಿಸಿ. ನಿರೀಕ್ಷಿತ ಸಹಾಯ ಅಲಭ್ಯ. ಸ್ವಪ್ರಯತ್ನದಲ್ಲಿ ವಿಶ್ವಾಸದಿಂದ ಕಾರ್ಯಸಾಧನೆ. ಮೇಲಧಿಕಾರಿಗಳಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಪಾಲುದಾರಿಕೆ ಕ್ಷೇತ್ರದಲ್ಲಿ ತಾಳ್ಮೆ ಇರಲಿ.
ಕುಂಭ: ಧೈರ್ಯ ಉತ್ಸಾಹದಿಂದ ಕೂಡಿದ ಚಟುವಟಿಕೆಗಳು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಸಹೋದರ ವರ್ಗ, ಸಹೋದ್ಯೋಗಿಗಳಿಂದ ಉತ್ತಮ ಪ್ರೋತ್ಸಾಹ, ಸಹಕಾರ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ವೃದ್ಧಿ.
ಮೀನ: ಸುಖ, ಸಂತೋಷದ ಸಮಯ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಅಧಿಕ ಧನಾರ್ಜನೆ ಇದ್ದರೂ ಲಾಭ ಕಡಿಮೆ. ವಿದ್ಯಾರ್ಥಿಗಳಿಗೆ ಅತ್ತುತ್ತಮ ಕಾಲ.ಮನೆಯಲ್ಲಿ ಸಂತಸದ ವಾತಾವರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.