ಅಪರಿಚಿತ ಮೃತದೇಹಗಳಿಗೆ ಮುಕ್ತಿ…1500ಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿದ ಧೀರ ಮಹಿಳೆಯರು

ಮಹಿಳಾ ತಂಡವೊಂದರ ಶ್ಲಾಘನೀಯ ಸ್ಟೋರಿಯಿದು.

Team Udayavani, Aug 5, 2023, 5:48 PM IST

Untitled-1

PHOTO: Better India

ಸಮಾಜ ಸೇವೆ ಮಾಡಲು ಯಾವುದೇ ಜಾತಿ, ಧರ್ಮ ಹಾಗೂ ಲಿಂಗದ ಗುರುತಿಲ್ಲ. ಆದರೂ ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ ಏನು ಮಾಡಿದರೂ ಅದಕ್ಕೊಂದು ಸಾಲು ಹೊಗಳಿಕೆಯ ಜೊತೆ ಜೊತೆಗೆ ಟೀಕಿಸುವ ಜನರಿರುತ್ತಾರೆ. ಮೊದಲಿನಿಂದಲೂ ನಮ್ಮಲ್ಲಿ ಒಂದು ನಂಬಿಕೆಯಿದೆ. ಮೃತದೇಹದ ಅಂತಿಮ ವಿಧಿವಿಧಾನಗಳನ್ನು ಮುಂದೆ ನಿಂತು ಮಾಡುವುದು ಪುರುಷ ಸಮಾಜವೇ. ಹೆಣ್ಣು ಮಕ್ಕಳು ಏನೇ ಇದ್ದರೂ ದುಃಖವನ್ನು ವ್ಯಕ್ತಪಡಿಸಲು ಮಾತ್ರ ಇರುವಂತೆ ನಮ್ಮ ಸಮಾಜದಲ್ಲಿ ಬೆಳೆದುಕೊಂಡು ಬಂದಿರುವ ನಿಯಮ.

ಅಪರಿಚಿತ ಹಾಗೂ ಅನಾಥ ಮೃತದೇಹದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ಮಹಿಳಾ ತಂಡವೊಂದರ ಶ್ಲಾಘನೀಯ ಸ್ಟೋರಿಯಿದು.

2023ರ ಜೂ.2 ರ ದಿನವದು. ರಾತ್ರಿ ಕೇಳಿ ಬಂದ ಒಂದು ಸುದ್ದಿ ಮುಂಜಾನೆ ಆಗುವಷ್ಟರೊಳಗೆ ಇಡೀ ದೇಶದಲ್ಲಿ ಶೋಕ ಸಂದೇಶದಂತೆ ಹರಡಿತ್ತು. ಒಡಿಶಾದ ಬಾಲಸೋರ್ ನಲ್ಲಿ ಮೂರು ರೈಲುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ 295 ಮಂದಿ ಪ್ರಾಣ ತೆತ್ತಿದ್ದರು. ದೇಹವೆಲ್ಲೊ, ದೇಹದ ಅಂಗಾಗಗಳೆಲ್ಲೊ… ರಕ್ತಸಿಕ್ತವಾಗಿ ರಾಶಿಗಟ್ಟಲೆ ಹೆಣ ಅಲ್ಲಿ ಬಿದ್ದಿತ್ತು. ಆ ಹೆಣಗಳ ರಾಶಿಯಲ್ಲಿ ಗಾಯಗೊಂಡವರ ಚೀರಾಟ, ಅರೆ ಜೀವದಲ್ಲಿರುವವರ ಅಂತಿಮ ಕ್ಷಣದ ಭೀಕರ ದೃಶ್ಯಗಳು ಎಂಥವರ ಮನಸ್ಸನ್ನು ತಲ್ಲಣಗೊಳಿಸುವಂತಿತ್ತು.

ಘಟನೆಯ ಮರುದಿನ (ಜೂ.3 ರಂದು) ಮುಂಜಾನೆ 8:30ಕ್ಕೆ ಕೆಲಸಕ್ಕೆಂದು ಹೊರಟ ಒಡಿಶಾದ ಮಧುಸ್ಮಿತಾ ಪ್ರಸ್ತಿ ಅವರ ಮೊಬೈಲ್ ಗೆ ಸರ್ಕಾರಿ ರೈಲ್ವೆ ಪೊಲೀಸ್ ಅವರ ಕರೆವೊಂದು ಬರುತ್ತದೆ. ಅದೇ ದಿನ ಮಧ್ಯಾಹ್ನ ಸ್ಮಿತಾ ಮೊಹಂತಿ, ಸ್ವಾಗತಿಕಾ ರಾವ್, ಮತ್ತು ಸ್ನೇಹಾಂಜಲಿ ಸೇಥಿ ಅವರೊಂದಿಗೆ ತನ್ನ ಆಂಬ್ಯುಲೆನ್ಸ್ ನಲ್ಲಿ ಬಾಲಸೋರ್ ಗೆ ತೆರಳುತ್ತಾರೆ.

ಯುದ್ದದಲ್ಲಿ ಹೋರಾಡಿ ರಣರಂಗದಲ್ಲಿ ಕೈ,ಕಾಲು, ರುಂಡದಿಂದ ಬೇರ್ಪಟ್ಟು ಬಿದ್ದಿರುವ ದೇಹದಂತೆ ರೈಲು ದುರಂತದಲ್ಲಿ ಸತ್ತು ಬಿದ್ದವರ ದೃಶ್ಯ ಮಧುಸ್ಮಿತಾ ಅವರಿಗೆ ಕಾಣುತ್ತದೆ.

” ಅಲ್ಲಿ ಎಲ್ಲೆಡೆ ರಕ್ತವೇ ಇತ್ತು‌. ಕೆಲವರ ಅಂಗಾಂಗಗಳು ದೇಹದಿಂದ ಬೇರ್ಪಟ್ಟಿತ್ತು. ಸಹಾಯಕ್ಕೆ ಕೂಗುತ್ತಾ ನೋವಿನಲ್ಲಿ ನರಳಾಡುತ್ತಿದ್ದರು. ನಾವು ಮೊದಲು ಯಾರಿಗೆ ಸಹಾಯ ಮಾಡುವುದು ಯಾರನ್ನು ಆಸ್ಪತ್ರೆಗೆ ದಾಖಲು ಮಾಡುವುದೆಂದೇ ಗೊತ್ತಾಗುತ್ತಿರಲಿಲ್ಲ. ಒಬ್ಬರ ಸಹಾಯಕ್ಕೆ ಹೋದರೆ ಇತ್ತ ಕಡೆಯಿಂದ ಮತ್ತೊಬ್ಬರು ಕರೆಯುತ್ತಿದ್ದರು. ಅದು ತುಂಬಾ ಕಷ್ಟಕರವಾದ ಪರಿಸ್ಥಿತಿವಾಗಿತ್ತು. ಆ ನರಳಾಟದ ಸನ್ನಿವೇಶ, ಆ ಕೂಗು ಈಗಲೂ ‌ನಮ್ಮ ಕಿವಿಯಲ್ಲಿ ಕೇಳುತ್ತಿದೆ” ಎನ್ನುತ್ತಾರೆ ಮಧುಸ್ಮಿತಾ.

ಮಧುಸ್ಮಿತಾ ಅವರ ತಂಡವನ್ನು ಸ್ಥಳೀಯ ಆಡಳಿತದ ಸೂಚನೆಯ ಮೇರೆಗೆ ಕರೆಸಲಾಗಿತ್ತು‌. ಅಪರಿಚಿತ/ ಅನಾಥ ಮೃತದೇಹದ ಶವ ಸಂಸ್ಕಾರ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ಕರೆಯಲಾಗಿತ್ತು. “ಮೊದಲು ಗಾಯಾಳುಗಳನ್ನು ಕಟಕ್ ಹಾಗೂ ಬಾಲಸೋರ್ ಆಸ್ಪತ್ರೆಗೆ ದಾಖಲಿಸಿ, ಆ ಬಳಿಕ 5 ಅಪರಿಚಿತ ಮೃತದೇಹದ ಶವ ಸಂಸ್ಕಾರವನ್ನು ಮಾಡಲಾಯಿತು” ಎಂದು ಮಧುಸ್ಮಿತಾ ಹೇಳುತ್ತಾರೆ.

ನರ್ಸ್ ಆಗಿದ್ದಾಕೆ, ಈ ಕೆಲಸಕ್ಕೆ ಇಳಿದದ್ದು ಹೇಗೆ?: 

15 ವರ್ಷಗಳಿಂದ ಕೋಲ್ಕತಾದ ಆಸ್ಪತ್ರೆಯೊಂದರಲ್ಲಿ ಮಧುಸ್ಮಿತಾ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ತನ್ನ ಆತ್ಮೀಯರನ್ನು ಕಳೆದುಕೊಂಡ ಹಿರಿಯರು, ಕಿರಿಯರನ್ನು ನೋಡುತ್ತಾರೆ. ಎಷ್ಟೋ ಕುಟುಂಬಗಳು ಆಸ್ಪತ್ರೆ ಅವರ ದುಬಾರಿ ಬಿಲ್ ನೋಡಿ ಶವ ಸಂಸ್ಕಾರಕ್ಕೂ ಪರದಾಡಿದ ಸ್ಥಿತಿಯನ್ನು ನೋಡಿದ್ದಾರೆ. ಮಧುಸ್ಮಿತಾ ಅವರ ಪತಿ ಒಡಿಶಾದಲ್ಲಿ ‘ಪ್ರದೀಪ್ ಸೇವಾ ಟ್ರಸ್ಟ್’ ನಡೆಸುತ್ತಿದ್ದರು. ಅಪರಿಚಿತ ಮೃತದೇಹಗಳ ಶವ ಸಂಸ್ಕಾರವನ್ನು ಈ ಎನ್ ಜಿಒ ಮಾಡುತ್ತಿತ್ತು. 2019ರಲ್ಲಿ ಮಧುಸ್ಮಿತಾ ಅವರ ಪತಿ ರೈಲ್ವೇ ಟ್ರಾಕ್ ನಲ್ಲಿ ಜಾರಿಬಿದ್ದ ಪರಿಣಾಮ ಅವರ ಕಾಲು ತುಂಡಾಗಿತ್ತು. ಈ ಸಮಯದಲ್ಲೇ ಮಧುಸ್ಮಿತಾ ಕೆಲಸ ಬಿಟ್ಟು ಒಡಿಶಾಕ್ಕೆ ಬರುತ್ತಾರೆ. ತನ್ನ ಪತಿ ನಡೆಸುತ್ತಿದ್ದ ಎನ್ ಜಿಒ ಮುನ್ನಡೆಸಲು ಯಾರೂ ಇಲ್ಲದೆ ಇದ್ದಾಗ ಸ್ವತಃ ಮಧುಸ್ಮಿತಾ ಅವರೇ ಇದನ್ನು ಮುಂದುವರೆಸುತ್ತಾರೆ‌.

ಕೋವಿಡ್ ಸಮಯದಲ್ಲಿ ನೂರಾರು ಶವಸಂಸ್ಕಾರ:

ಕೋವಿಡ್ ಪರಿಸ್ಥಿತಿ ಮತ್ತೆ ಬರೋದು ಬೇಡ ಎನ್ನುವುದು ನಮ್ಮೆಲ್ಲರ ಆಶಯ. ಈ ಪರಿಸ್ಥಿತಿಯಲ್ಲಿ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ. ಮೃತದೇಹವನ್ನು ಮುಟ್ಟದೆ, ಅದನ್ನು ನೋಡದೆ ಎಲ್ಲ ಶವಗಳನ್ನು ಸಾಮೂಹಿಕವಾಗಿ ಸಂಸ್ಕಾರ ಆ ಸ್ಥಿತಿ ಅತ್ಯಂತ ಕರಾಳ.

ಈ ಸಮಯದಲ್ಲಿ ಮಧುಸ್ಮಿತಾ ತನ್ನ ಗಂಡನ ಎನ್ ಜಿಒನಿಂದ ಭುವನೇಶ್ವರ ಪುರಸಭೆ ಸಹಕಾರದೊಂದಿಗೆ 500 ಕ್ಕೂ ಹೆಚ್ಚು ಶವಗಳ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಇದುವರೆಗೆ ಮಧುಸ್ಮಿತಾ 1500 ಕ್ಕೂ ಹೆಚ್ಚು ಅಪರಿಚಿತ ಶವ ಸಂಸ್ಕಾರವನ್ನು ಮಾಡಿದ್ದಾರೆ.

ಒಳ್ಳೆಯ ಕೆಲಸಕ್ಕೆ ಜೊತೆಯಾದ ಇತರರು..

ಮಧುಸ್ಮಿತಾ ಅವರ ಎನ್ ಜಿಒ ಕೆಲಸಕ್ಕೆ ಮೂವರು ಮಹಿಳೆಯರು ಇತ್ತೀಚೆಗೆ ಜೊತೆಯಾಗಿದ್ದಾರೆ. ಸ್ಮಿತಾ, ಸ್ವಾಗತಿಕಾ ಮತ್ತು ಸ್ನೇಹಾಂಜಲಿ ಇವರೊಂದಿಗೆ ಸೇರಿದ್ದಾರೆ.

ಸ್ವಾಗತಿಕಾ ಅವರು ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಸ್ನೇಹಾಂಜಲಿ ಪತ್ರಕರ್ತೆಯಾಗಿದ್ದಾರೆ. ಇನ್ನು ಸ್ಮಿತಾ ಅವರು  ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.

ಮಧುಸ್ಮಿತಾ ಅವರ ತಂಡಕ್ಕೆ ಸೇರಿದ ಮೊದಲ ದಿನವೇ ಸ್ಮಿತಾ ಅವರಿಗೆ ಅತ್ಯಂತ ಭೀಕರವಾಗಿ ಅಪಘಾತವೊಂದರಲ್ಲಿ ಮೃತಪಟ್ಟ ವೃದ್ದರೊಬ್ಬರ ಮೃತದೇಹ ನೋಡಲು ಸಿಗುತ್ತದೆ.  ಆ ವೃದ್ದನ ಕೈ ಅರ್ಧ ಕಿ.ಮೀ ದೂರದಲ್ಲಿ,ರುಂಡ ತುಂಡಾಗಿ ಬೇರೆ ಕಡೆ ಬಿದ್ದಿರುತ್ತದೆ. ದೇಹ ಇನ್ನೊಂದೆಡೆ ಇರುತ್ತದೆ. ಇದನ್ನು ನೋಡಿದ ಕೂಡಲೇ ಸ್ಮಿತಾ ಅವರಿಗೆ ತನ್ನ ಚಿಕ್ಕ ಸಹೋದರನ ನೆನಪು ಆಗುತ್ತದೆ.

“ಅವನು ತೀರಿ ಹೋದ ವೇಳೆ ಅವನಿಗೆ 14 ವರ್ಷ ವಯಸ್ಸಾಗಿತ್ತು. ಅವನ ದೇಹ ನಮಗೆ ಸಿಗಲೇ ಇಲ್ಲ. ಅವನು ದೊಡ್ಡ ಕನಸು ಕಾಣುತ್ತಿದ್ದ‌‌. ನನಗಾಗಿ ಕಾರು ತೆಗದು ಕೊಡ್ತೇನೆ ಎನ್ನುತ್ತಿದ್ದ. ಈ ವೃದ್ದನ ದೇಹವನ್ನು ನೋಡಿದಾಗ ನನ್ನ ಸಹೋದರನ ಸ್ಥಿತಿಯೂ ಹೀಗೆಯೇ ಆಗಿರಬಹುದು ಎನ್ನುತ್ತಾ… ಸ್ಮಿತಾ ಭಾವುಕರಾಗುತ್ತಾರೆ.

ಯಾರ ಸಹಾಯವೂ ಇಲ್ಲದ ತಮ್ಮ ಸ್ವಂತ ಖರ್ಚಿನಲ್ಲಿ ಕೆಲಸ..

ಮೃತದೇಹಗಳನ್ನು ಸಾಗಿಸಲು ಆಂಬ್ಯುಲೆನ್ಸ್ ಖರೀದಿಸಿದ್ದು, 25 ಲಕ್ಷ ರೂಪಾಯಿಯನ್ನು ಇಎಂಐ ರೀತಿಯಲ್ಲಿ ತಿಂಗಳಿಗೆ ನಾಲ್ವರು ಪಾವತಿಸುತ್ತಿದ್ದಾರೆ. ತಾವು ಕೆಲಸ ಮಾಡಿ ಗಳಿಸಿದ ಹಣದಿಂದಲೇ ಒಂದು ಶವ ಸಂಸ್ಕಾರಕ್ಕೆ 4,500 ರೂಪಾಯಿಯಂತೆ ಹಣವನ್ನು ಬಳಸುತ್ತಾರೆ. ಕಳೆದ 5 ತಿಂಗಳಿನಿಂದ ಸ್ಮಿತಾ ಅವರು 47 ಅನಾಥ ಶವಗಳ ಸಂಸ್ಕಾರವನ್ನು ಮಾಡಿದ್ದಾರೆ ಎನ್ನುತ್ತಾರೆ.

ತನ್ನ ಕೆಲಸಕ್ಕೆ ಸಂಬಂಧಿಗಳು ಹಾಗೂ ಕೆಲ ಕುಟುಂಬಸ್ಥರು ಕೊಂಕು ನುಡಿಗಳನ್ನು ಆಡುತ್ತಾರೆ. ಹೆಂಗಸರು ಶವ ಸಂಸ್ಕಾರ ಮತ್ತು ಶವಗಾರಕ್ಕೆ‌ ಹೋಗುವುದಕ್ಕೆ ನಿಷೇಧ ಇದೆ ಎನ್ನಲಾಗುತ್ತದೆ. ಜನ ನಮ್ಮನ್ನು ಅಸ್ಪೃಶ್ಯರಂತೆ  ನೋಡುತ್ತಾರೆ. ನಮ್ಮಿಂದ ಜನ ಆಹಾರವನ್ನು ಸ್ವೀಕರಿಸುವುದಿಲ್ಲ. ನನ್ನ ಅಂಗಡಿಗೆ ಗ್ರಾಹಕರು ಬರುವುದು ಕಡಿಮೆಯಾಗಿದೆ. ಆದರೆ ನಮ್ಮ ಕುಟುಂಬದಿಂದ ನಮಗೆ ಬೆಂಬಲ ಇರುವುದರಿಂದ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ದೇವರನ್ನು  ನಂಬುತ್ತೇನೆ. ಈ ಕೆಲಸದಿಂದ ನನ್ನ ತಮ್ಮನ ಆತ್ಮಕ್ಕೆ ಶಾಂತಿ ಸಿಗುತ್ತದೆ” ಎಂಬುದು ಸ್ಮಿತಾ ಅವರ ನುಡಿಯಾಗಿದೆ.

-ಸುಹಾನ್‌ ಶೇಕ್

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1

ಬಚ್ಚನ್, ಮೋಹನ್‌ಲಾಲ್‌ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.