ಉಗ್ರ ದಾಳಿ ಸಂಚು 6ನೇ ಶಂಕಿತನ ಸೆರೆ
ಐಇಡಿ ತಯಾರಿಕೆಯಲ್ಲಿ ತೊಡಗಿದ್ದ ಆರೋಪಿ
Team Udayavani, Aug 5, 2023, 11:48 PM IST
ಮುಂಬೈ: ಮಹಾರಾಷ್ಟ್ರ ಉಗ್ರ ದಾಳಿ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶ ನಾ ಲಯ(ಇಡಿ) ಆರನೇ ಆರೋಪಿಯನ್ನು ಶನಿವಾರ ಬಂಧಿಸಿದೆ.
ಥಾಣೆ ಜಿಲ್ಲೆಯ ಭಿವಂಡಿ ತಾಲೂಕಿನ ಬೊರಿವಿಲಿಯಲ್ಲಿ ಸರಣಿ ದಾಳಿಗಳ ನಂತರ ಎನ್‌ಐಎ, ಶನಿವಾರ ಆರೋಪಿ ಆಕಿಫ್ ಅತೀಕ್ ನಾಚನ್‌ನನ್ನು ವಶಕ್ಕೆ ಪಡೆಯಿತು. ವಿಚಾರಣೆ ನಂತರ ಬಂಧಿಸಲಾಯಿತು. ಈತ ಉಗ್ರ ಚಟುವಟಿಕೆಗಳಿಗಾಗಿ ಸುಧಾರಿತ ಸ್ಫೋಟಕ ಸಾಧನ(ಐಇಡಿ) ತಯಾರಿಕೆ ಮತ್ತು ಅದರ ಪರೀಕ್ಷೆಯಲ್ಲಿ ತೊಡಗಿದ್ದ. ಅಲ್ಲದೇ ಇಬ್ಬರು ಉಗ್ರರಿಗೆ ಆಶ್ರಯ ನೀಡಿದ ಆರೋ ಪವೂ ಈತನ ಮೇಲಿದೆ.ಆರೋಪಿ ಯಿದ್ದ ಸ್ಥಳದಿಂದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ದಾಖ ಲೆಗಳು ಹಾಗೂ ಐಇಡಿ ತಯಾರಿಕೆಗೆ ಬೇಕಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಂಕಿತ ಉಗ್ರರಾದ ಜುಲ್ಫಿಕರ್ ಆಲಿ ಬರೋಡಾವಾಲ, ಮೊಹಮ್ಮದ್ ಇಮ್ರಾನ್ ಖಾನ್, ಮೊಹಮ್ಮದ್ ಯೂನುಸ್ ಸಾಕಿ ಮತ್ತು ಅಬ್ದುಲ್ ಖಾದಿರ್ ಪಠಾಣ್ ಜತೆ ಸೇರಿಕೊಂಡು ನಿಷೇಧಿತ ಉಗ್ರ ಸಂಘಟನೆ ಐಸಿಸ್‌ನ ಉಗ್ರ ಚಟುವಟಿಕೆಗಳಲ್ಲಿ ಆಕಿಫ್ ಸಕ್ರಿಯವಾಗಿ ತೊಡಗಿದ್ದ. ದೇಶದ ಏಕತೆ, ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರಲು ಭಯೋತ್ಪಾದಕ ದಾಳಿಗಳನ್ನು ನಡೆ ಸಲು ಆರೋಪಿ ಸಂಚು ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಸ್ಟಡಿ ಅವಧಿ ವಿಸ್ತರಣೆ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಎನ್‌ಐಎ ಅಧಿಕಾರಿಗಳು ತಬೀಶ್ ನಾಸೀರ್ ಸಿದ್ದಿಕಿ, ಜುಬೈರ್ ನೂರ್ ಮೊಹಮ್ಮದ್ ಶೇಖ್ ಅಲಿಯಾಸ್ ಅಬು ನುಸೈಬಾ, ಶಾರ್ಜಿಲ್ ಶೇಖ್ ಮತ್ತು ಜುಲ್ಫಿಕರ್ ಆಲಿ ಬರೋಡಾ ವಾಲನನ್ನು ಬಂಧಿಸಿದ್ದರು. ಇವರ ಎಟಿಎಸ್ ಕಸ್ಟಡಿ ಅವಧಿಯನ್ನು ಶನಿವಾರ ಪುಣೆಯ ಕೋರ್ಟ್ ಆ.11ರವರೆಗೆ ವಿಸ್ತರಿಸಿದೆ.
ಇನ್ನೊಂದಡೆ, ಸುಫಾ ಉಗ್ರರ ಗುಂಪಿನ ಸದಸ್ಯರಾದ ಮೊಹಮ್ಮದ್ ಇಮ್ರಾನ್ ಖಾನ್ ಮತ್ತು ಯೂನುಸ್ ಸಾಕಿ ತಲೆಮರೆಸಿ ಕೊಂಡಿದ್ದು, ಎನ್‌ಐಎ ಈ ಇಬ್ಬರನ್ನು “ಮೋಸ್ಟ್ ವಾಂಟೆಡ್ ಉಗ್ರರು’ ಎಂದು ಘೋಷಿಸಿದೆ. ಈ ಇಬ್ಬರು 2022ರ ಏಪ್ರಿಲ್‌ನಲ್ಲಿ ರಾಜಸ್ಥಾನದಲ್ಲಿ ಕಾರೊಂದರಿಂದ ವಶಪಡಿಸಿಕೊಂಡ ಸ್ಫೋಟಕಗಳ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದಾರೆ.
ಸಾಯುವವರೆಗೂ ಜೈಲು
2017ರಲ್ಲಿ ಬಂಧಿಸಲ್ಪಟ್ಟ ಐಸಿಸ್ ನಂಟಿ ರುವ ಇಬ್ಬರು ಉಗ್ರರಿಗೆ ಗುಜರಾತ್‌ನ ಸೆಷನ್ಸ್ ಕೋರ್ಟ್ “ಕೊನೇ ಉಸಿರಿರು ವವರೆಗೂ ಜೈಲು ಶಿಕ್ಷೆ’ ವಿಧಿಸಿ ಶನಿವಾರ ತೀರ್ಪು ನೀಡಿದೆ. ಅಪರಾಧಿಗಳಾದ ಉಬೇದ್‌ಅಹ್ಮದ್ ಮಿರ್ಜಾ ಮತ್ತು ಮೊಹಮ್ಮದ್ ಕಾಸಿಂ ದೇಶದಲ್ಲಿ “ಲೋನ್ ವೂಲ್ಫ್ ಅಟ್ಯಾಕ್’ ನಡೆಸಲು ಸಂಚು ರೂಪಿಸಿದ್ದಲ್ಲದೇ, ಹಲವು ಯುವಕರನ್ನು ಉಗ್ರ ಸಂಘಟನೆಗಳಿಗೆ ನೇಮಕ ಮಾಡಿದ ಆರೋಪ ಹೊತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್’
Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ
Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ
Raichur: ವಕ್ಫ್ ವಿಚಾರದಲ್ಲಿ ಬಿಜೆಪಿ ಚುನಾವಣೆ ಪ್ರಚಾರ: ಶರಣ ಪ್ರಕಾಶ ಪಾಟೀಲ
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.