![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 6, 2023, 12:54 AM IST
ಮಲ್ಪೆ: ಮಲ್ಪೆ ವ್ಯಾಪ್ತಿಯ ಸಮುದ್ರದಲ್ಲಿ ಶನಿವಾರ ಬೆಳಗ್ಗೆ ಏಕಾಏಕಿ ಬಿರುಗಾಳಿ ಆರಂಭವಾದ ಕಾರಣ ಮೀನುಗಾರಿಕೆಗೆ ಹೊರಡಲು ಸಿದ್ಧರಾಗಿದ್ದ ನಾಡದೋಣಿ ಮೀನುಗಾರರು ತೀರದಲ್ಲಿ ಲಂಗರು ಹಾಕಿದ್ದಾರೆ.
ಕಂತುಬಲೆ, ಪಟ್ಟೆಬಲೆ, ಟ್ರಾಲ್ ಸೇರಿದಂತೆ ನೂರಾರು ದೋಣಿಗಳು ಮೀನುಗಾರಿಕೆಗೆ ತೆರಳಲು ಸಜ್ಜಾಗಿದ್ದವು. ಆದರೆ ಬಿರುಗಾಳಿ ಸಾಧ್ಯತೆಯ ಕುರಿತು ಉಡುಪಿ ಜಿಲ್ಲಾಡಳಿತ ಪೂರ್ವಭಾವಿ ಸೂಚನೆ ನೀಡಿದ್ದ ಕಾರಣ ಕಡಲಿಗಿಳಿಯುವ ಸಾಹಸಕ್ಕೆ ಯಾರೂ ಮುಂದಾಗಲಿಲ್ಲ. ಈ ಮಧ್ಯೆ 4-5 ದೋಣಿಗಳು ಮೀನುಗಾರಿಕೆಗೆ ತೆರಳಿದ್ದರೂ ಬಿರುಸಾದ ಗಾಳಿಯ ಪರಿಣಾಮ ಮೀನುಗಾರಿಕೆ ಸಾಧ್ಯವಾಗದೆ ವಾಪಸಾದವು.
ಶುಕ್ರವಾರ ಟ್ರಾಲ್‌ದೋಣಿಗೆ ಬೆಳಗ್ಗೆ ಬೂತಾಯಿ ಮೀನು ಸಿಕ್ಕರೆ, ಸಂಜೆ ಹೇರಳ ಬಂಗುಡೆ ಮೀನು ಬಲೆಗೆ ಬಿದಿತ್ತು. ಆದರೆ ಶನಿವಾರ ತಾಜಾ ಮೀನು ಸಿಗದೇ ಗ್ರಾಹಕರು ನಿರಾಶರಾದರು. ಹಿಂದಿನ ದಿನದ ಮೀನಿಗೂ ಬಂದರಿನಲ್ಲಿ ಅಪಾರ ಬೇಡಿಕೆ ಇತ್ತು.
ಶುಕ್ರವಾರ ರಾತ್ರಿಯಿಂದ ಗಾಳಿಯ ಲಕ್ಷಣ ಕಂಡು ಬಂದಿದೆ. ಸಮುದ್ರದ ಮಧ್ಯೆ ಬಲವಾದ ಗಾಳಿ ಬೀಸುತ್ತಿದೆ. ಆ. 8ರ ವರೆಗೂ ಅಬ್ಬರ ಇರುವ ಸಾಧ್ಯತೆ ಇದೆ ಎಂದು ಮಲ್ಪೆ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಸುಂದರ ಪಿ. ಸಾಲ್ಯಾನ್ ತಿಳಿಸಿದ್ದಾರೆ.
ಡಿಸ್ಕೋ ನಾಡದೋಣಿ ಅಂತ್ಯ?
ಹಲವಾರು ಬಾರಿ ಪ್ರತಿಕೂಲ ವಾತಾ ವರಣದಿಂದಾಗಿ ಈ ಬಾರಿ ಡಿಸ್ಕೋ ನಾಡದೋಣಿ ಮೀನುಗಾರಿಕೆ ನಿರೀಕ್ಷೆಯ ಮಟ್ಟ ತಲುಪಿಲ್ಲ. ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡಿರುವ ಮತ್ತು ನಾಡದೋಣಿಗೆ ಮೀನುಗಾರಿಕೆಗೆ ಒಂದೆರಡು ದಿನ ಅವಕಾಶವಿದ್ದರೂ ಬಲವಾದ ಗಾಳಿಯ ಹಿನ್ನೆಲೆಯಲ್ಲಿ ಡಿಸ್ಕೋ ನಾಡದೋಣಿಯಲ್ಲಿ ದುಡಿಯುವ ಮೀನುಗಾರರು ದೋಣಿ ಯಿಂದ ಬಲೆಗಳನ್ನು ತೆಗೆಯುವ ಮೂಲಕ ಈ ವರ್ಷದ ಕಸುಬಿಗೆ ಮಂಗಳ ಹಾಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.