ಒಬ್ಬರಿಗೊಬ್ಬರು ಹೇಳಿಕೊಳ್ಳದ ಅವ್ಯಕ್ತ ಪ್ರೇಮ..
Team Udayavani, Aug 6, 2023, 3:09 PM IST
ಸಾಂದರ್ಭಿಕ ಚಿತ್ರ
ಅವ್ಯಕ್ತ ಪ್ರೇಮ… ಬಹಳ ಜನರಿಗೆ ಇದೊಂದು ಹೊಸ ಶಬ್ದ ಅನ್ನಿಸಬಹುದು. ಸಾಹಿತ್ಯ ಭಂಡಾರದಲ್ಲಿ ಆಗಾಗ ಮಾತ್ರ ಇಣುಕುವ ಪದವಷ್ಟೇ ಅನ್ನಿಸಬಹುದು. ಆದರೆ ಹಾಗೇನಿಲ್ಲ. ಈ ಶಬ್ದದ ಪರಿಚಯ ಅದೆಷ್ಟು ಜನರಿಗೆ ಇದೆಯೋ, ಆದರೆ ಆ ಭಾವ ನಮ್ಮೆಲ್ಲರಿಗೂ ಪರಿಚಿತವೇ.
ಅವ್ಯಕ್ತ ಪ್ರೇಮ ಅಂದರೆ ಒಬ್ಬರಿಗೊಬ್ಬರು ಹೇಳಿಕೊಳ್ಳದ ಅಥವಾ ಹೇಳಿಕೊಳ್ಳಲಾಗದ ಪ್ರೀತಿ. ಆಹಾ… ಕೇಳುವುದಕ್ಕೆ ಅದೆಷ್ಟು ಚಂದ.. ಆ ಭಾವವೂ ಹಾಗೆಯೇ ಅದರ ಮುಂದೆ ಜಗತ್ತಿನ ಸುಖಗಳೆಲ್ಲ ಯಾವುದೂ ಇಲ್ಲ. ಅವ್ಯಕ್ತ ಪ್ರೇಮ ಭಾರತೀಯ ಪರಂಪರೆಯ ಸಂಕೇತವೂ ಹೌದು. ನಾವು ಅತ್ಯಂತ ಇಷ್ಟಪಡುವ ರಾಧಾ-ಕೃಷ್ಣರ ಮಧ್ಯೆ ಇದ್ದದ್ದೂ ಇದೇ ಅವ್ಯಕ್ತ ಪ್ರೇಮ.
ಮಾತುಗಳು ಮೌನವಾಗಿ ಕೇವಲ ಮನಸ್ಸುಗಳು ಮಾತ್ರ ಮಾತನಾಡುವುದೇ ನಿಜವಾದ ಪ್ರೀತಿ… ಅಲ್ಲವೇ? ಇಲ್ಲೂ ಹಾಗೆ ಮಾತಿಗೆ ಬೆಲೆ ಇಲ್ಲ. ಒಬ್ಬರಿಗೊಬ್ಬರ ಮನಸ್ಸು ಬೆಸೆದು ಅವುಗಳ ಪ್ರತಿಫಲನವನ್ನು ಕಣ್ಣು ಸೆರೆಹಿಡಿದುಕೊಳ್ಳಲಾಗದೆ ಹೊರಸೂಸಿಬಿಡುತ್ತದೆ. ಅಲ್ಲಿ ಸುಂದರವಾದ ಮಾತುಗಳು, ಅಪೇಕ್ಷೆಯೇ ಇಲ್ಲದ ಸಿಟ್ಟು- ಕಾದಾಟಗಳು, ಒಬ್ಬರಿಗೊಬ್ಬರ ಮೇಲೆ ನಿಷ್ಕಲ್ಮಷ ಅಸೂಯೆ… ನನ್ನವನು ಯಾರೊಂದಿಗೋ ಮಾತನಾಡುತ್ತಿದ್ದರೆ ನನ್ನನ್ನು ಬಿಟ್ಟು ಹೋಗುವನೋ ಎಂಬ ಭಯ. ಅಲ್ಲಿ ಒಳ್ಳೆಯದಲ್ಲದ ಮತ್ತೊಂದಕ್ಕೆ ಬೆಲೆಯಿಲ್ಲ.
ಅಲ್ಲಿ ಕಾಮದ ವಾಸನೆ ಇಲ್ಲ. ಸಲ್ಲದ ಭಾವನೆ ಇಲ್ಲ. ನನ್ನ ಭಾವನೆಯನ್ನು ತೋಡಿಕೊಂಡರೆ ಎಲ್ಲಿ ನನ್ನ ಬಿಟ್ಟು ಹೋಗುವನೋ/ಹೋಗುವಳೋ ಎಂಬ ಭಯ. ಇಲ್ಲಿರುವ ಭಯವೇ ಭಯಕ್ಕೆ ಜಗತ್ತಿನ ಏಕಮಾತ್ರ ಉದಾಹರಣೆ.
ಏನೋ ಗೊತ್ತಿಲ್ಲ ನಿಷ್ಕಾಮ ಪ್ರೇಮ ಮತ್ತು ಅವ್ಯಕ್ತ ಪ್ರೇಮಗಳೆರಡು ಒಂದೇ ರೀತಿ ಕಾಣುತ್ತವೆ. ವರ್ತಮಾನದಲ್ಲಿ ದೇಹದಾಸೆಯೇ ಸರ್ವಸ್ವವಾಗಿರುವಾಗ ಅವ್ಯಕ್ತ ಪ್ರೇಮದ ಅನುಭವಿಗಳು ಎಷ್ಟು ಜನ ಗೊತ್ತಿಲ್ಲ. ಆದರೆ ಅದರ ಸುಖ ಬೇರೆಲ್ಲಿಯೂ ಸಿಗಲಾರದು.
ಲತೇಶ್ ಸಾಂತ
ಅಂತಿಮ ಬಿ.ಎ ಪತ್ರಿಕೋದ್ಯಮ ವಿಭಾಗ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.