![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 6, 2023, 3:59 PM IST
ಮುಂಬಯಿ: ಸನ್ನಿ ಡಿಯೋಲ್ ʼಗದರ್ -2ʼ ರಿಲೀಸ್ ಗೆ ದಿನಗಣನೆ ಬಾಕಿ ಉಳಿದಿದೆ. ತನ್ನ ಮೊದಲ ಭಾಗದಿಂದಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದ ಬಾಲಿವುಡ್ ಸಿನಿಮಾಗಳಲ್ಲಿ ʼಗದರ್ʼ ಸಿನಿಮಾವೂ ಒಂದು. ಇದೀಗ ಈ ಸಿನಿಮಾದ ಸೀಕ್ವೆಲ್ ತೆರೆಗೆ ಬರಲು ಸಿದ್ದವಾಗಿದೆ.
ಭಾರತದಲ್ಲಿ ಇತರ ಸಿನಿಮಾರಂಗಕ್ಕೆ ಹೋಲಿಸಿದರೆ ಬಿಟೌನ್ ದುಬಾರಿ ಲೈಫ್ ಸ್ಟೈಲ್ ವುಳ್ಳ ಸಿನಿರಂಗ ಎಂದರೆ ತಪ್ಪಾಗದು. ಇಲ್ಲಿನ ಸ್ಟಾರ್ ಗಳ ಜೀವನ ಶೈಲಿ ದುಬಾರಿ. ಇದೇ ಕಾರಣಕ್ಕೆ ಬಾಲಿವುಡ್ ನಲ್ಲಿ ಮಾದಕ ವ್ಯಸನದಂತಹ ಗಂಭೀರ ಸಮಸ್ಯೆಗಳಿರುವ ಆರೋಪ ಮೊದಲಿನಿಂದಲೂ ಕೇಳಿ ಬಂದಿದೆ.
ಸೆಲೆಬ್ರಿಟಿಗಳು ಪಾರ್ಟಿ , ಮತ್ತಿತರ ಸಮಯದಲ್ಲಿ ಡ್ರಗ್ಸ್ ಬಳಸುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿರುವುದು ಹೊಸತೇನಲ್ಲ.
ಈ ಬಗ್ಗೆ ʼಗದರ್-2ʼ ನಟ ಸನ್ನಿ ಡಿಯೋಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಆಜ್‌ತಕ್‌ನ ʼಸೀದಿ ಬಾತ್ʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
“ಬಾಲಿವುಡ್ ಹಾಳಾಗಿಲ್ಲ, ಹಾಳಾಗಿರುವುದು ಜನರು. ಇದು ಬಾಲಿವುಡ್ ನ ಸಮಸ್ಯೆ ಮಾತ್ರ ಆಗಿಲ್ಲ. ಎಲ್ಲಾ ಕ್ಷೇತ್ರದ ಸಮಸ್ಯೆಯೂ ಆಗಿದೆ. ಬ್ಯುಸಿನೆಸ್ ಮ್ಯಾನ್ ಆಗಲಿ, ಕ್ರೀಡಾಪಟುವಾಗಲಿ ಚಟವೆನ್ನುವಂಥದ್ದು ನಾಲ್ಕು ಕಡೆಯಿಂದಲೂ ಇದೆ. ನಾವು ಗ್ಲಾಮರ್ ಲೋಕದವರು ಹಾಗಾಗಿ ಅವರಿಗೆ ನಮ್ಮ ಕಡೆ ಕೈ ಮಾಡಿ ತೋರಿಸುವುದರಲ್ಲಿ ಮಜಾ ಸಿಗುತ್ತದೆ” ಎಂದು ಹೇಳಿದ್ದಾರೆ.
ಗದರ್ -2 ಪ್ರಚಾರದಲ್ಲಿ ಸನ್ನಿ ಡಿಯೋಲ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ಲೋಂಗೆವಾಲಾ ಹಾಗೂ ಪಂಜಾಬ್‌ನ ಅಟ್ಟಾರಿ ಗಡಿಯಲ್ಲಿ ಬಿಎಸ್ ಎಫ್ ಯೋಧರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಚಿತ್ರದ ಪ್ರಚಾರವನ್ನು ಮಾಡಿದ್ದರು.
ʼಗದರ್ 2’ ಅನಿಲ್ ಶರ್ಮಾ ಅವರ 2001 ರ ನಿರ್ದೇಶನದ ‘ಗದರ್: ಏಕ್ ಪ್ರೇಮ್ ಕಥಾ’ದ ಮುಂದುವರಿದ ಭಾಗವಾಗಿದೆ. ‘ಗದರ್ 2’ ಚಿತ್ರದಲ್ಲಿ ಅಮೀಶಾ ಪಟೇಲ್, ಸನ್ನಿ ಡಿಯೋಲ್ ಮತ್ತು ಉತ್ಕರ್ಷ್ ಶರ್ಮಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ಆಗಸ್ಟ್ 11 ರಂದು ತೆರೆಗೆ ಬರಲಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.