Kundapura ವರದಕ್ಷಿಣೆ ಕಿರುಕುಳ: ದೂರು ದಾಖಲು
Team Udayavani, Aug 6, 2023, 9:41 PM IST
ಕುಂದಾಪುರ: ಮದುವೆಯಾಗಿ ಮೂರೇ ತಿಂಗಳಲ್ಲಿ ವರದಕ್ಷಿಣೆ ಕಿರುಕುಳ ನೀಡಿದ ಕುರಿತು ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಅವಿನಾಶ್ ಕೃಷ್ಣ ನಾಯ್ಕ ಹಾಗೂ ಚಂದ್ರಾವತಿ ನಾಯ್ಕ, ವಿನಾಯಕ ನಾಯ್ಕ, ಪ್ರಭಾಕರ ನಾಯ್ಕ, ಲಲಿತಾ, ಶಕುಂತಲಾ ವಿರುದ್ಧ ಕಾವ್ರಾಡಿ ನಿವಾಸಿ ಶೈಲಾ ಅವರು ದೂರು ನೀಡಿದ್ದಾರೆ. ಇನ್ನೊಬ್ಬ ಆರೋಪಿ ಭದ್ರ ಕುಲಾಲ್ ಎಂಬಾತ ಶೈಲಾ ಹಾಗೂ ಅವಿನಾಶ್ ಅವರ ಮದುವೆಯ ಮಧ್ಯವರ್ತಿ.
2021ರಲ್ಲಿ ತ್ರಾಸಿ ಕಮ್ಮಾರಕೊಡ್ಲುವಿನಲ್ಲಿ ವಿವಾಹ ನಡೆದಿದ್ದು ವರದಕ್ಷಿಣೆ ರೂಪದಲ್ಲಿ 5 ಲಕ್ಷ ರೂ. ಚಿನ್ನಾಭರಣ, ಮದುವೆಗೆ ಮುಂಚೆ 5 ಲಕ್ಷ ರೂ. ಹಣ ಪಡೆದಿದ್ದಾರೆ. ಮುಂಬಯಿಯಲ್ಲಿ ವೈವಾಹಿಕ ಜೀವನ ಆರಂಭಿಸಿ, 3 ತಿಂಗಳ ಬಳಿಕ ಗಂಡ, ಅತ್ತೆ ಹಾಗೂ ಮನೆಯವರು ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದರು. ಮದುವೆ ಸಮಯ ಹಾಕಿದ 5 ಲಕ್ಷ ರೂ|ಗಳ ಚಿನ್ನಾಭರಣ ಬೆದರಿಸಿ ಪಡೆದು ದುರುಪಯೋಗ ಪಡಿಸಿಕೊಂಡರು.
2022 ಅಗಸ್ಟ್ ನಲ್ಲಿ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ತಂದೆಯ ಮನೆಗೆ ಕಳುಹಿಸಿಕೊಟ್ಟರು. ಈ ಜುಲೈಯಲ್ಲಿ ಮತ್ತೆ ವರದಕ್ಷಿಣೆಗಾಗಿ ಪತಿ ಕರೆ ಮಾಡಿ ನೀಡದಿದ್ದರೆ ಕೊಲೆ ಬೆದರಿಕೆ ಹಾಕಿದ್ದಾಗಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.