Hockey; ಹಾಕಿ-5-0 ಜಯಭೇರಿ-ಮಲೇಷ್ಯಾ ಮೇಲೆ ಭಾರತ ಸವಾರಿ
Team Udayavani, Aug 6, 2023, 10:57 PM IST
ಚೆನ್ನೈ: ಮಲೇಷ್ಯಾ ಮೇಲೆ ಆಕ್ರಮಣಗೈದ ಆತಿಥೇಯ ಭಾರತ, ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಕೂಟದ ತನ್ನ 3ನೇ ಪಂದ್ಯದಲ್ಲಿ 5-0 ಗೋಲುಗಳ ಜಯಭೇರಿ ಮೊಳಗಿಸಿದೆ. ಈ ಫಲಿತಾಂಶದಿಂದ ಅಂಕಪಟ್ಟಿಯ ಅಗ್ರಸ್ಥಾನಕ್ಕೆ ನೆಗೆದಿದೆ.
ಇನ್ನೇನು ಮೊದಲ ಕ್ವಾರ್ಟರ್ ಮುಕ್ತಾಯವಾಗಬೇಕೆನ್ನುವಾಗಲೇ ಕಾರ್ತಿ ಸೆಲ್ವಂ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ತಂದಿತ್ತರು. ಅರ್ಧ ಹಾದಿ ಮುಗಿಯುವ ತನಕ ಭಾರತ ಇದೇ ಮುನ್ನಡೆ ಕಾಯ್ದುಕೊಂಡಿತು.
ತೃತೀಯ ಕ್ವಾರ್ಟರ್ನಲ್ಲಿ ಭಾರತ ಅವಳಿ ಗೋಲು ಬಾರಿಸಿ ಮುನ್ನುಗ್ಗಿತು. ಹಾರ್ದಿಕ್ ಸಿಂಗ್ ಮತ್ತು ನಾಯಕ ಹರ್ಮನ್ಪ್ರೀತ ಸಿಂಗ್ ಮಲೇಷ್ಯಾದ ಮೇಲೇರಿ ಹೋದರು. ಕೊನೆಯ ಕ್ವಾರ್ಟರ್ನಲ್ಲೂ ಭಾರತ ಆಕ್ರಮಣಕಾರಿ ಆಟವಾಡಿತು. ಗುರ್ಜಂತ್ ಸಿಂಗ್ ಮತ್ತು ಜುಗ್ರಾಜ್ ಸಿಂಗ್ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಮೊದಲೆರಡು ಪಂದ್ಯ
ಗಳಿಗೆ ಹೋಲಿಸಿದರೆ ಭಾರತದ ಆಟದಲ್ಲಿ ಅಮೋಘ ಸುಧಾರಣೆ ಕಂಡುಬಂದಿತ್ತು.
ಡ್ರಾ ಸಾಧಿಸಿದ ಚೀನ
ಚೀನ-ಕೊರಿಯಾ ನಡುವಿನ ರವಿ ವಾರದ ಮೊದಲ ಪಂದ್ಯ 1-1 ಡ್ರಾದಲ್ಲಿ ಕೊನೆಗೊಂಡಿತು. ಇದರೊಂದಿಗೆ ಚೀನ ಅಂಕದ ಖಾತೆ ತೆರೆಯಿತು. ಚೀನದ ಮಟ್ಟಿಗೆ ಈ ಫಲಿತಾಂಶ ಅಮೋಘ ವಾದುದೆಂದೇ ಹೇಳಬೇಕು. ಏಕೆಂದರೆ, ಮೊದಲೆರಡು ಪಂದ್ಯಗಳಲ್ಲಿ ಅದು 12 ಗೋಲುಗಳನ್ನು ಬಿಟ್ಟುಕೊಟ್ಟಿತ್ತು.
ಪಾಕ್-ಜಪಾನ್ ಡ್ರಾ
ಪಾಕಿಸ್ಥಾನ-ಜಪಾನ್ ನಡುವಿನ ದಿನದ ದ್ವಿತೀಯ ಪಂದ್ಯ ಕೂಡ ಸ್ಪಷ್ಟ ಫಲಿತಾಂಶ ದಾಖಲಿಸುವಲ್ಲಿ ವಿಫಲ ವಾಯಿತು. ಈ ಪಂದ್ಯ 3-3ರಿಂದ ಡ್ರಾಗೊಂಡಿತು. ಪಂದ್ಯದ ಮುಕ್ತಾಯಕ್ಕೆ 5 ನಿಮಿಷವಿರುವಾಗ ಜಪಾನ್ 3-2ರ ಮುನ್ನಡೆಯಲ್ಲಿತ್ತು. ಮುಹಮ್ಮದ್ ಖಾನ್ ಬಾರಿಸಿದ ಗೋಲಿನ ನೆರವಿ ನಿಂದ ಪಾಕಿಸ್ಥಾನ ಸೋಲಿನಿಂದ ಪಾರಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.