Google doodle: ಗೂಗಲ್‌ನ ಮುಖಪುಟವೇ ಡೂಡಲ್-ಏನಿದರ ವಿಶೇಷತೆ…
ಡೂಡಲ್ ಪ್ರತಿದಿನವೂ ಬದಲಾಗುವುದನ್ನು ಕಾಣಬಹುದು.
Team Udayavani, Aug 7, 2023, 1:12 PM IST
ದಿನಕ್ಕೊಮ್ಮೆಯಾದರೂ ನಾವು ಗೂಗಲ್ ಸರ್ಚ್ ಮಾಡುತ್ತೇವೆ. ಗೂಗಲ್ ನಮಗೆ ವೆಬ್ ಪುಟಗಳು, ಚಿತ್ರಗಳು, ವೀಡಿಯೋ ಒಳಗೊಂಡಂತೆ ಪ್ರಪಂಚದ ಮಾಹಿತಿಯನ್ನು ಹುಡುಕಲು ಸಹಾಯ ಮಾಡುವುದರ ಕುರಿತು ಎಲ್ಲರಿಗೂ ತಿಳಿದೇ ಇದೆ. ಅಂತೆಯೇ ಗೂಗಲ್ ಮುಖಪುಟ ಬದಲಾಗುತ್ತಿರುವುದನ್ನು ನಾವು ಗಮನಿಸುತ್ತಲೇ ಇರುತ್ತೇವೆ. ಆದರೆ ಅದರ ಬಗ್ಗೆ ತಿಳಿದವರ ಸಂಖ್ಯೆ ತೀರಾ ಕಡಿಮೆ.
ಗೂಗಲ್ ಮುಖಪುಟಕ್ಕೆ ಡೂಡಲ್ ಎಂದು ಕರೆಯಲಾಗುತ್ತದೆ. ಗೂಗಲ್‌ನ ಡೂಡಲ್‌ಗಳು ಪ್ರಪಂಚದ ಸಮಸ್ಯೆಗಳು, ಐತಿಹಾಸಿಕ ಘಟನೆಗಳು ಮತ್ತು ಪ್ರಪಂಚದಾದ್ಯಂತದ ಆಚರಣೆಗಳನ್ನು ಹೈಲೈಟ್ ಮಾಡಲು ಬಳಸುವ ಸಾಧನವಾಗಿದ್ದು, ಇವು ತಾತ್ಕಾಲಿಕ ಬದಲಾವಣೆಯಾಗುವ ಗೂಗಲ್ ಮುಖಪುಟಗಳಲ್ಲಿನ ಲೋಗೋವಾಗಿದೆ. ರಜಾದಿನಗಳು, ವಿಶೇಷ ಘಟನೆಗಳು, ಸಾಧನೆಗಳು ಮತ್ತು ಗಮನಾರ್ಹ ಐತಿಹಾಸಿಕ ವ್ಯಕ್ತಿಗಳನ್ನು ಸ್ಮರಿಸುವ ಉದ್ದೇಶದಿಂದ ಗೂಗಲ್‌ನ ಡೂಡಲ್ ಅನ್ನು ಮಾಡಲಾಗಿದೆ.
ಮೊದಲ ಬಾರಿಗೆ ಗೂಗಲ್ ಡೂಡಲ್ ಆಗಸ್ಟ್ 30, 1998ರಂದು ನೆವಾಡಾದ ಬ್ಲ್ಯಾಕ್ ರಾಕ್ ಸಿಟಿಯಲ್ಲಿ ದೀರ್ಘಾವಧಿಯ ವಾರ್ಷಿಕ ಬರ್ನಿಂಗ್ ಮ್ಯಾನ್ ಉತ್ಸವದಲ್ಲಿ ಬಳಸಿದರು. ಈ ಉತ್ಸವದಲ್ಲಿ ತಮ್ಮ ಹಾಜರಾತಿಯನ್ನು ಸೂಚಿಸಲು ಗೂಗಲ್ ಸಹಸಂಪಾದಕರು ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ವಿನ್ಯಾಸಗೊಳಿಸಿದರು. ಅವರು ಗೂಗಲ್ ಪದದಲ್ಲಿ 2 ನೇ ಒನ ಹಿಂದೆ ಸ್ಟಿಕ್ ಫಿಗರ್ ಡ್ರಾಯಿಂಗ್ ಅನ್ನು ಇರಿಸಿದರು.
ಮೊದಲ ಡೂಡಲ್ ತುಲನಾತ್ಮಕವಾಗಿ ಸರಳವಾಗಿದ್ದರೂ, ಗಮನಾರ್ಹ ಘಟನೆಗಳನ್ನು ಆಚರಿಸಲು ಕಂಪನಿಯ ಲೋಗೋವನ್ನು ಅಲಂಕರಿಸುವ ಕಲ್ಪನೆಯು ಹುಟ್ಟಿಕೊಂಡಿತು. ಎರಡು ವರ್ಷಗಳ ಅನಂತರ 2000ರಲ್ಲಿ, ಲ್ಯಾರಿ ಮತ್ತು ಸೆರ್ಗೆ ಪ್ರಸ್ತುತ ವೆಬ್‌ಮಾಸ್ಟರ್ ಡೆನ್ನಿಸ್ ಹ್ವಾಂಗ್ ಆಗ ಇಂಟರ್ನ್ ಆಗಿದ್ದರು. ಅವರಿಗೆ ಬಾಸ್ಟಿಲ್ ಡೇಗೆ ಡೂಡಲ್ ಅನ್ನು ತಯಾರಿಸಲು ತಿಳಿಸಿದರು. ಇದು ಬಳಕೆದಾರರಿಂದ ಎಷ್ಟು ಚೆನ್ನಾಗಿ ಸ್ವೀಕರಿಸಲ್ಪಟ್ಟಿತ್ತು ಎಂದರೆ ಡೆನ್ನಿಸ್ ಅವರನ್ನು ಗೂಗಲ್‌ನ ಮುಖ್ಯ ಡೂಡ್ಲರ್ ಆಗಿ ನೇಮಿಸಲಾಯಿತು ಮತ್ತು ಗೂಗಲ್ ಮುಖಪುಟದಲ್ಲಿ ಡೂಡಲ್‌ಗಳು ಹೆಚ್ಚು ಹೆಚ್ಚು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಆರಂಭದಲ್ಲಿ, ಡೂಡಲ್‌ಗಳು ಹೆಚ್ಚಾಗಿ ಪರಿಚಿತ ರಜಾದಿನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಡೂಡಲ್‌ಗಳನ್ನು ರಚಿಸುವುದು ಈಗ ಪ್ರತಿಭಾವಂತ ಸಚಿತ್ರಕಾರರ ಮತ್ತು ಎಂಜಿನಿಯರ್‌ಗಳ ತಂಡದ ಜವಾಬ್ದಾರಿಯಾಗಿದೆ.
ಗೂಗಲ್ ಡೂಡಲ್‌ಗಳನ್ನು ವಿನ್ಯಾಸಗೊಳಿಸುವ ಸಚಿತ್ರಕಾರರು, ಎಂಜಿನಿಯರ್‌ಗಳು ಮತ್ತು ಕಲಾವಿದರನ್ನು ಡೂಡ್ಲರ್‌ಗಳು ಎಂದು ಕರೆಯಲಾಗುತ್ತದೆ. ಈ ಡೂಡ್ಲರ್‌ಗಳು ಎಕುವಾ ಹೋಮ್ಸ್, ಜೆನ್ನಿಫರ್ ಹೋಮ್, ಸೋಫಿಯಾ ಫಾಸ್ಟರ್-ಡಿಮಿನೋ, ರಂಗನಾಥ್ ಕೃಷ್ಣಮಣಿ, ಡೆನ್ನಿಸ್ ಹ್ವಾಂಗ್, ಒಲಿವಿಯಾ ಫೀಲ್ಡ್ ಮತ್ತು ಎರಿಕ್ ಕಾರ್ಲೆ ಅವರಂತಹ ಕಲಾವಿದರನ್ನು ಒಳಗೊಂಡಿವೆ.
ಆರಂಭದಲ್ಲಿ, ಡೂಡಲ್‌ಗಳು ಅನಿಮೇಟೆಡ್ ಅಥವಾ ಹೈಪರ್‌ಲಿಂಕ್ ಆಗಿರಲಿಲ್ಲ. ಅವು ವಿಷಯವನ್ನು ವಿವರಿಸುವ ಅಥವಾ ರಜಾದಿನದ ಶುಭಾಶಯವನ್ನು ವ್ಯಕ್ತಪಡಿಸುವ ಟೂಲ್‌ಟಿಪ್ಸ್ ಗಳೊಂದಿಗೆ ಸರಳ ಚಿತ್ರಗಳಾಗಿದ್ದವು. 2010ರ ದಶಕದಲ್ಲಿ ಡೂಡಲ್‌ಗಳ ಆವರ್ತನ ಮತ್ತು ಸಂಕೀರ್ಣತೆ ಎರಡರಲ್ಲೂ ಹೆಚ್ಚಾಯಿತು. ಆರಂಭಿಕ ದಿನಗಳಲ್ಲಿ, ಗೂಗಲ್ ತನ್ನ ಮುಖಪುಟದಲ್ಲಿ ಡೂಡಲ್ ಅನ್ನು ವಿರಳವಾಗಿ ಬದಲಾಯಿಸುತ್ತಿತ್ತು. ಆದರೆ ಈಗ ಡೂಡಲ್ ಪ್ರತಿದಿನವೂ ಬದಲಾಗುವುದನ್ನು ಕಾಣಬಹುದು.
ಜನವರಿ 2010ರಲ್ಲಿ ಮೊದಲ ಅನಿಮೇಟೆಡ್ ಡೂಡಲ್ ಸರ್ ಐಸಾಕ್ ನ್ಯೂಟನ್ ಅವರನ್ನು ಗೌರವಿಸಿತು. ಮೊದಲ ಸಂವಾದಾತ್ಮಕ ಡೂಡಲ್ ಸ್ವಲ್ಪ ಸಮಯದ ಅನಂತರ ಪ್ಯಾಕ್-ಮ್ಯಾನ್ ಅನ್ನು ಬಳಸಿತು ಮತ್ತು ಡೂಡಲ್‌ಗಳಿಗೆ ಹೈಪರ್‌ಲಿಂಕ್‌ಗಳನ್ನು ಸೇರಿಸಲು ಪ್ರಾರಂಭಿಸಿತು. ಡೂಡಲ್‌ನ ಮಾಹಿತಿಯನ್ನು ತನ್ನ ಮುಖಪುಟಕ್ಕೆ ಲಿಂಕ್ ಮಾಡಿತು.
2014ರ ಹೊತ್ತಿಗೆ, ಗೂಗಲ್ ತನ್ನ ಮುಖಪುಟಗಳಲ್ಲಿ 2,000 ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಡೂಡಲ್‌ಗಳನ್ನು ಪ್ರಕಟಿಸಿತು. ಆಗಾಗ್ಗೆ ಅತಿಥಿ ಕಲಾವಿದರು, ಸಂಗೀತಗಾರರು ಮತ್ತು ವ್ಯಕ್ತಿಗಳನ್ನು ಒಳಗೊಂಡಿರುತ್ತದೆ. ಪ್ರಸ್ತುತ ಡೂಡ್ಲರ್‌ಗಳ ತಂಡವು ಪ್ರಪಂಚದಾದ್ಯಂತ ಗೂಗಲ್‌ನ ಮುಖಪುಟಗಳಿಗಾಗಿ 5,000 ಹೆಚ್ಚು ಡೂಡಲ್‌ಗಳನ್ನು ರಚಿಸಿದೆ. ಅನೇಕ ಪ್ರಸಿದ್ಧ ಘಟನೆಗಳು ಮತ್ತು ರಜಾದಿನಗಳನ್ನು ಆಚರಿಸುವುದರ ಜತೆಗೆ, ಕಲಾವಿದರು ಮತ್ತು ವಿಜ್ಞಾನಿಗಳ ಜನ್ಮದಿನದಂದೂ ಗೂಗಲ್ ಡೂಡಲ್ ಕಾಣಸಿಗುತ್ತದೆ.
ಕೆಲವು ಗೂಗಲ್ ಡೂಡಲ್‌ಗಳು ಗೂಗಲ್‌ನ ದೇಶ-ನಿರ್ದಿಷ್ಟ ಮುಖಪುಟಗಳಿಗೆ ಸೀಮಿತವಾಗಿದ್ದರೆ ಇತರ ಡೂಡಲ್‌ಗಳು ಜಾಗತಿಕವಾಗಿ ಗೋಚರಿಸುತ್ತವೆ. ಕೇವಲ ಡೂಡಲ್‌ಗಳು ಮಾತ್ರವಲ್ಲದೆ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.
ಡೂಡಲ್‌ಗಳ ಕಲ್ಪನೆಗಳು ಡೂಡ್ಲರ್ ಮತ್ತು ಗೂಗಲ್ ಬಳಕೆದಾರರನ್ನು ಒಳಗೊಂಡಂತೆ ಹಲವಾರು ಮೂಲಗಳಿಂದ ಬರುತ್ತವೆ. ಬಳಕೆದಾರರು ಮುಂದಿನ ಗೂಗಲ್ ಡೂಡಲ್‌ಗಾಗಿ ಆಲೋಚನೆಗಳೊಂದಿಗೆ [email protected]ಗೆ ಇ-ಮೇಲ್ ಮಾಡಬಹುದು. ತಂಡವು ಪ್ರತಿದಿನ ನೂರಾರು ವಿನಂತಿಗಳನ್ನು ಸ್ವೀಕರಿಸುತ್ತದೆ. ಇಲ್ಲಿವರೆಗಿನ ಎಲ್ಲ ಗೂಗಲ್ ಡೂಡಲ್ ನೋಡಬೇಕಾದರೆ ಅಧಿಕೃತ ಡೂಡಲ್ ಆರ್ಕೈವ್‌ನಲ್ಲಿ ಲಭ್ಯವಿವೆ.
-ಸಿಂಧು ಕೆ.ಟಿ.
ಕುವೆಂಪು ವಿಶ್ವವಿದ್ಯಾಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.