Muddebihala: ಮುಸುಕುಧಾರಿಗಳಿಂದ ಬಾಲಕನಿಗೆ ಇಂಜೆಕ್ಷನ್: ಹೆಚ್ಚಿದ ಆತಂಕ
Team Udayavani, Aug 7, 2023, 2:34 PM IST
ಸಾಂದರ್ಭಿಕ ಚಿತ್ರ
ಮುದ್ದೇಬಿಹಾಳ: ಶಾಲೆಗೆ ಹೋಗುತ್ತಿದ್ದ 12 ವರ್ಷದ ಬಾಲಕನೊಬ್ಬನಿಗೆ ಇಬ್ಬರು ಮುಸುಕುಧಾರಿಗಳು ಇಂಜೆಕ್ಷನ್ ಚುಚ್ಚಿರುವ ಘಟನೆ ಸಾರ್ವಜನಿಕರಿಗೆ ಆತಂಕ ಮೂಡಿಸಿದೆ.
ಬಾಲಕ ತಾಳಿಕೋಟೆ ರಸ್ತೆ ಪಕ್ಕದ ಆಶ್ರಯ ಕಾಲೋನಿಯ ನಿವಾಸಿಯಾಗಿದ್ದು, ಇಂಜೆಕ್ಷನ್ ಚುಚ್ಚಿರುವುದು ಗೊತ್ತಾದ ಕೂಡಲೇ ಶಾಲೆ ಬಿಟ್ಟು ಮನೆಗೆ ಮರಳಿ ಪಾಲಕರಿಗೆ ವಿಷಯ ತಿಳಿಸಿದ್ದಾನೆ.
ತಕ್ಷಣ ಪಾಲಕರು ಅವನನ್ನು ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಖಾಸಗಿ ಆಸ್ಪತ್ರೆಯವರು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಎಂಎಲ್ಸಿ ಪ್ರಕರಣದ ಅಡಿ ಹೆಸರು ನೋಂದಾಯಿಸಿಕೊಂಡು ವೈದ್ಯರು ಪರಿಶೀಲಿಸಿದಾಗ ಬಾಲಕ ಹೇಳುವ ಜಾಗದಲ್ಲಿ ಚುಚ್ಚಿದ ಗುರುತು ಇದೆ. ಆದರೆ ಅದು ಇಂಜೆಕ್ಷನ್ ಅಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇದರಿಂದ ಗಾಬರಿಗೊಂಡ ಪಾಲಕರು ಪೊಲೀಸ್ ಠಾಣೆಗೆ ಆಗಮಿಸಿದ್ದು, ಪೊಲೀಸರು ಬಾಲಕ ಮತ್ತು ಪಾಲಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪೊಲೀಸರು ಸಿಸಿ ಫೂಟೇಜ್ ಪರಿಶೀಲಿಸಿ ನಂತರ ಕ್ರಮ ಜರುಗಿಸಲು ತೀರ್ಮಾನಿಸಿದ್ದಾರೆ. ಸದ್ಯ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವಕ್ಫ್ ವಿವಾದ… ನಾಳೆಯಿಂದ ಅಹೋರಾತ್ರಿ ಧರಣಿ ಆರಂಭ: ಶಾಸಕ ಯತ್ನಾಳ
Muddebihal: ಅರೆನಗ್ನಾವಸ್ಥೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ
Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ
CHANAKYA CAREER ACADEMY: ಚಾಣಕ್ಯ ಯುವ ಭವಿಷ್ಯಕ್ಕೆ ಭದ್ರ ಬುನಾದಿ
Waqf issue: ಎಲ್ಲ ಪಹಣಿಯಲ್ಲೂ ವಕ್ಫ್ ಹೆಸರು ತೆಗೆಯಿರಿ: ಮುಲ್ಲಾ ಅಸೋಸಿಯೇಷನ್ ಆಗ್ರಹ
MUST WATCH
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.