Actress: ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಖ್ಯಾತ ನಟಿ ನಿಧನ; 42ರ ವಯಸ್ಸಿನಲ್ಲಿ ವಿಧಿವಶ

14ರ ವಯಸ್ಸಿನಲ್ಲಿ ವಿವಾಹ, ಬಡತನದಿಂದಲೇ ಬೆಳೆದ ನಟಿ..

Team Udayavani, Aug 7, 2023, 5:32 PM IST

Actress: ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಖ್ಯಾತ ನಟಿ ನಿಧನ; 42ರ ವಯಸ್ಸಿನಲ್ಲಿ ವಿಧಿವಶ

ಚೆನ್ನೈ: ಕಳೆದ ಕೆಲ ಸಮಯದಿಂದ ಸ್ತನ ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಟಾಲಿವುಡ್‌ ಸಿನಿರಂಗದ ಕಲಾವಿದೆ ಸಿಂಧು ಸೋಮವಾರ (ಆ.7 ರಂದು) ನಿಧನರಾಗಿದ್ದಾರೆ.

ಅವರ ನಿಧನದ ಸುದ್ದಿಯನ್ನು ನಟ ಕೊಟ್ಟಾಚಿ ಸಾಮಾಜಿಕಾ ಜಾಲತಾಣದಲ್ಲಿ ಹೇಳಿದ್ದಾರೆ. ನಟಿಯ ಫೋಟೋವೊಂದನ್ನು ಹಂಚಿಕೊಂಡು ಸೋಮವಾರ ಮುಂಜಾನೆ 2:15 ಕ್ಕೆ ಟಾಲಿವುಡ್‌ ನಟಿ ʼಅಂಗಡಿ ತೇರುʼ ಸಿಂಧು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ.. 

ಕಳೆದ ಕೆಲ ಸಮಯದಿಂದ ನಟಿ ಸಿಂಧು ಅವರು ಸ್ತನ ಕ್ಯಾನ್ಸರ್‌ ನಿಂದ ಬಳಲುತ್ತಿದ್ದರು. ಈ ಸಂಬಂಧ ಅವರು ಕಿಲ್ಪಾಕ್‌ನ ಖಾಸಗಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ಕಡೆಯಿಂದ ಕ್ಯಾನ್ಸರ್‌ ಕಾಯಿಲೆಯ ನೋವು, ಇನ್ನೊಂದೆಡೆ ಚಿಕಿತ್ಸೆಗೆ ಹಣವಿಲ್ಲದೆ ಅವರು ಪರದಾಡಿದ್ದರು.  ಆಸ್ಪತ್ರೆಯಿಂದಲೇ ಅವರು ಚಿಕಿತ್ಸೆಗೆ ಸಹಾಯ ಮಾಡಿಯೆಂದು ವಿಡಿಯೋ ಮೂಲಕ ಭಾವುಕರಾಗಿ ಹೇಳಿದ್ದರು.

ಇದಕ್ಕೆ ಕಾರ್ತಿ, ಇಸರಿ ಗಣೇಶ್, ಸತೀಶ್ ಕುಮಾರ್ ಹಾಗೂ ಇತರ ಕಲಾವಿದರು ಸ್ಪಂದಿಸಿ ಆಸ್ಪತ್ರೆ ವೆಚ್ಚಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದರು.

ಈ ಹಿಂದೆ ಸಂದರ್ಶನವೊಂದರಲ್ಲಿ ಅವರು ತನ್ನ ಸ್ತನ ಕ್ಯಾನ್ಸರ್‌ ಬಗ್ಗೆ ಮಾತನಾಡಿದ್ದರು.  ವೈದ್ಯರು ನನ್ನ ಒಂದು ಸ್ತನವನ್ನು ಕತ್ತರಿಸಿದ್ದಾರೆ. ಇಂತಹ ನೋವು ಮತ್ತು ಸಂಕಟದಿಂದ ಬದುಕಲು ನಾನು ಬಯಸುವುದಿಲ್ಲ. ನನಗೆ ದಯಾಮರಣ ಪಾಲಿಸಿ ಎಂದು ಅವರು ಭಾವುಕರಾಗಿ, ನೋವಿನಲ್ಲಿ ನುಡಿದಿದ್ದರು.

ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಬಂದಿದ್ದ ಸಿಂಧು.. ಬಾಲ್ಯದಿಂದಲೇ ನಟನಾ ವೃತ್ತಿಗೆ ಕಾಲಿಟ್ಟ ಸಿಂಧು, ಮನೆಯ ಬಡತನದಲ್ಲೂ ಬಣ್ಣದ ಲೋಕದಲ್ಲಿ ಮಿಂಚಿದವರು. ಇದಲ್ಲದೇ ಅವರಿಗೆ 14ನೇ ವಯಸ್ಸಿನಲ್ಲಿ ಮದುವೆಯಾಗಿತ್ತು. ತಾಯಿಯಾದ ಬಳಿಕ ಅವರ ವೈವಾಹಿಕ ಜೀವನ ಅತ್ಯಂತ ಕಷ್ಟದಿಂದ ಸಾಗಿತ್ತು. ಸಿಂಧು ಅವರ ಪತಿ ಒಳ್ಳೆಯ ವ್ಯಕ್ತಿಯಾಗಿರಲಿಲ್ಲ. ಸಿಂಧು ತನ್ನ ಮಗುವನ್ನು ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದರು ಎಂದು ವರದಿ ತಿಳಿಸಿದೆ.

ಸಿಂಧು ನಟನೆಯಲ್ಲಿ ಮಿಂಚಿದ್ದು 2010 ರಲ್ಲಿ ತೆರೆಗೆ ಬಂದ ʼ ಅಂಗಡಿ ತೇರುʼ ಸಿನಿಮಾದಲ್ಲಿ  ಸಹನಟಿಯಾಗಿ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು. ʼನಾಡೋಡಿಗಲ್ʼ, ʼನಾನ್ ಮಹಾನ್ ಆಲʼ, ʼತೇನವಟ್ಟುʼ,ʼಕರುಪ್ಪುಸಾಮಿ ಕುತಗೈತರರ್ʼ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

 

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್

Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್

121

Border 2: ಸನ್ನಿ ಡಿಯೋಲ್‌ ʼಬಾರ್ಡರ್-2‌ʼಗೆ ʼಫೌಜಿʼಯಾಗಿ ಬಂದ ಸುನಿಲ್‌ ಶೆಟ್ಟಿ ಪುತ್ರ

Bollywood Actor Govinda: ಬಾಲಿವುಡ್‌ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು

Bollywood Actor Govinda: ಬಾಲಿವುಡ್‌ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು

1-kanga-eme

‘Emergency’ ದೃಶ್ಯ ಕಡಿತಕ್ಕೆ ಕಂಗನಾ ಸಮ್ಮತಿ: CBFC

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

16

Ullal: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.